Ode to the west wind

Join Us on WhatsApp

Connect Here

ಶಿರೂರು ಗುಡ್ಡ ಕುಸಿತ, ತೆರವು ವಿಳಂಬ, ವಾಹನಗಳಿಗೆ ಬದಲಿ ಮಾರ್ಗ:

WhatsApp
Facebook
Twitter
LinkedIn

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 02 ದಿವಸಗಳಿಂದ ಸುರಿಯುತ್ತಿದ್ದ ಭಾರಿ ಮಳೆಯಿಂದ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಗುಡ್ಡ ಕುಸಿತವಾಗಿ ವಾಹನಗಳು ಹಾಗೂ ವಾಸದ ಮನೆ ನದಿಯ ಪಾಲಾಗಿದ್ದು, ಆಸ್ತಿ-ಪಾಸ್ತಿ ಹಾಗೂ ಜೀವ ಹಾನಿ ಸಂಭವಿಸಿರುತ್ತದೆ.

ಅಲ್ಲದೇ ಭಾರಿ ಪ್ರಮಾಣದಲ್ಲಿ ಮಣ್ಣು ರಸ್ತೆಯ ಮೇಲೆ ಬಿದ್ದಿರುವುದರಿಂದ ತೆರವು ಕಾರ್ಯ ಮುಂದುವರಿದಿರುತ್ತದೆ. ತಾತ್ಕಾಲಿಕವಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿರುತ್ತದೆ. ಪರ್ಯಾಯ ಮಾರ್ಗವಾಗಿ ಈ ಕೆಳಗಿನ ಮಾರ್ಗಗಳಲ್ಲಿ ಸಾರ್ವಜನಿಕರು ಸಂಚರಿಸಬಹುದಾಗಿದೆ.

1. ಯಲ್ಲಾಪುರದಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳಿಗೆ ಬಾಳೆಗುಳಿ ಕ್ರಾಸದಿಂದ-ಹೊಸ ಕಂಬಿ ಹಿಲ್ಲೂರು- ಮಾದನಗೇರಿ ಕ್ರಾಸ್-ಕುಮಟಾ ಮುಖಾಂತರ ಮಂಗಳೂರಿಗೆ ಪ್ರಯಾಣಿಸಬಹುದಾಗಿದೆ.

2. ಭಟ್ಕಳದಿಂದ ಕಾರವಾರಕ್ಕೆ ಬರುವ ವಾಹನಗಳು ಕುಮಟಾ- ಮಾದನಗೇರಿ ಕ್ರಾಸ್‌ದಿಂದ – ಹಿಲ್ಲೂರು- ಹೊಸಕಂಬಿ ಬಾಳೆಗುಳಿ ಮುಖಾಂತರ ಕಾರವಾರಕ್ಕೆ ಪ್ರಯಾಣಿಸಬಹುದಾಗಿದೆ.

ಶಿರಸಿ-ಕುಮಟಾ ರಸ್ತೆ ದೇವಿಮನೆ ಮತ್ತು ರಾಗಿಹೋಸಳ್ಳಿ ಮಧ್ಯ ಗುಡ್ಡ ಕುಸಿದು ರಸ್ತೆ ಸಂಪೂರ್ಣ ಬಂದ್ ಆಗಿರುತ್ತದೆ. ಅತಿಯಾಗಿ ಮಳೆ ಬೀಳುತ್ತಿರುವುದರಿಂದ ಮಣ್ಣನ್ನು ತೆರವು ಮಾಡಿದಷ್ಟು ಮತ್ತೆ ಗುಡ್ಡ ಕುಸಿಯತ್ತಿದೆ. ಮಳೆ ಕಡಿಮೆಯಾಗದೆ ಇದ್ದಲ್ಲಿ ಮತ್ತೆ ಹಲವು ಕಡೆಗಳಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಇರುವುದರಿಂದ ಕುಮಟಾ-ಶಿರಸಿ ರಸ್ತೆಯಲ್ಲಿ ತಾತ್ಕಾಲಿಕವಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿರುತ್ತದೆ. ಪರ್ಯಾಯ ಮಾರ್ಗವಾಗಿ ಈ ಕೆಳಗಿನ ಮಾರ್ಗಗಳಲ್ಲಿ ಸಾರ್ವಜನಿಕರು ಸಂಚರಿಸಬಹುದಾಗಿದೆ.

1. ಶಿರಸಿಯಿಂದ ಕುಮಟಾಕ್ಕೆ ಹೋಗುವ ವಾಹನಗಳಿಗೆ ಯಲ್ಲಾಪುರ-ಹೊಸಕಂಬಿ-ಹಿಲ್ಲೂರು ಮಾದನಗೇರಿ ಕ್ರಾಸ್‌ದಿಂದ ಕುಮಟಾಕ್ಕೆ ಸಂಚರಿಸಬಹುದಾಗಿದೆ.

2. ಶಿರಸಿಯಿಂದ ಕಾರವಾರಕ್ಕೆ ಹೋಗುವ ವಾಹನಗಳಿಗೆ ಶಿರಸಿ-ಯಲ್ಲಾಪುರ ಮಾರ್ಗವಾಗಿ ಕಾರವಾರಕ್ಕೆ ಪ್ರಯಾಣಿಸಬಹುದಾಗಿದೆ.

3. ಭಟ್ಕಳದಿಂದ ಶಿರಸಿ ಮಾರ್ಗವಾಗಿ ಹೋಗುವ ವಾಹನಗಳಿಗೆ ಕುಮಟಾ- ಮಾದನಗೇರಿ ಕ್ರಾಸ್‌ದಿಂದ ಹಿಲ್ಲೂರು-ಹೊಸಕಂಬಿ ಯಲ್ಲಾಪುರ ಮುಖಾಂತರ ಶಿರಸಿಗೆ ಪ್ರಯಾಣಿಸಬಹುದಾಗಿದೆ.

ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ, ಕಾರವಾರ.

You Might Also Like This