ಆಗುಂಬೆಯೊಡಲಿನ ಜೋಗಿಗುಂಡಿ, ಎಚ್ವರ ತಪ್ಪಿದರೆ ಸಾವಿನಗುಂಡಿ.!

ಶಿವಮೊಗ್ಗದಲ್ಲಿ ಮಳೆ ಆರ್ಭಟ ಹೆಚ್ಚಿದೆ. ಕಾಡು-ಮೇಡು, ಗಿರಿ-ಶಿಖರಗಳೆಲ್ಲಾ ಜಲಧಾರೆಯಿಂದ ಬಸಿಯುತ್ತಿವೆ. ಜಲಾಶಯಗಳು ತುಂಬುವ ಆಶಾಭಾವನೆ ಮೂಡಿಸಿದೆ. ಹವಾಮಾನ ಇಲಾಖೆ ಇನ್ನೂ ಎರಡು ದಿನ ಉತ್ತಮ ಮಳೆಯಾಗುವ ಮುನ್ಸೂಚನೆ ನೀಡಿದೆ. ಪ್ರವಾಸಿಗರೂ ಸಹ ನಿರೀಕ್ಷೆಗೂ ಮೀರಿ ಜಿಲ್ಲೆಯ ನಾನಾ ಪ್ರವಾಸಿತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ನಿಷೇಧಿತ ಅರಣ್ಯ ಪ್ರದೇಶದೊಳಗಿನ ಜಲಪಾತಗಳನ್ನ ಹುಡುಕಿ ಹುಚ್ಚಾಟ ಮಾಡುತ್ತಿದ್ದಾರೆ. ಪಶ್ಚಿಮ ಘಟ್ಟ ಸಾಲಿನ ಸುಂದರ ಊರು ಆಗುಂಬೆ. ಮಳೆ ಕಾಡಿನ ಸುಂದರ ಪರಿಸರದಲ್ಲಿ ಮಳೆಗೆ ಹತ್ತಾರು ಜಲಪಾತಗಳು ಗೋಚರವಾಗುತ್ತವೆ. ಗೋಂಡಾರಣ್ಯದ ಮಧ್ಯೆ ಇರುವ […]
ಶರಾವತಿ ಕಣಿವೆ ಜನರ ಅರಣ್ಯರೋಧನ: ಮೂಲಸೌಕರ್ಯಗಳಿಲ್ಲದೇ ಆರು ದಶಕ ಕಳೆದ ಜನ:

ನಾಡಿಗೆ ವಿದ್ಯುತ್ ನೀಡಲು ಮುಳುಗಡೆಯಾದವರು ಶಿವಮೊಗ್ಗ ಜಿಲ್ಲೆಯ ನಾನಾ ಭಾಗದಲ್ಲಿ ದಯಾನೀಯ ಸ್ಥಿತಿಯಲ್ಲಿದ್ದಾರೆ. ಮನೆಯಿಲ್ಲ, ಹಕ್ಕುಪತ್ರಗಳಿಲ್ಲ, ಶಿಕ್ಷಣ-ಆರೋಗ್ಯ, ಸರ್ಕಾರಿ ಸವಲತ್ತುಗಳಿಂದ ವಂಚಿತರಾಗಿ ಬದುಕುತ್ತಿದ್ದಾರೆ. ಆದರೆ ವಿದ್ಯುತ್ ಕೂಡ ಇಲ್ಲ ಎಂದರೆ ಎಂಥಹ ವಿಪರ್ಯಾಸ..! ಮುಳುಗಡೆ ಜನರನ್ನ ಆರು ದಶಕಗಳ ಹಿಂದೆ ದುರ್ಗಮ ಕಾಡಿನಲ್ಲಿ ಬಿಟ್ಟು ಬಂದ ಸರ್ಕಾರ ಈ ತನಕ ತಿರುಗಿ ನೋಡಿದ್ದೇ ಇಲ್ಲ. ಅವರೆಲ್ಲಾ ಈಗಲೂ ಸಂಕಷ್ಟದಲ್ಲಿ ದಿನದೂಡುತ್ತಿದ್ದಾರೆ. ಅಂತಹದೊಂದು ಬದುಕಿನ ಚಿತ್ರಣ ಇಲ್ಲಿದೆ. ಸಾಗರ ತಾಲೂಕಿನ ಭಾನುಕುಳಿ ಗ್ರಾಮ ಪಂಚಾಯತಿ. ಸಾಲಕೋಡ್ಲು, ಚೀಕನಹಳ್ಳಿ ಹಾಗೂ […]
ಕೌಲುದುರ್ಗ (ಕವಿಲೇದುರ್ಗ) ಎಂಬ ಅಭೇದ್ಯ ಕೋಟೆ:

ನಮ್ಮ ಭಾರತದಲ್ಲಿ ಸಾವಿರಾರು ಕೋಟೆಗಳನ್ನು ನಾವು ಕಾಣಬಹುದು. ಅವುಗಳಲ್ಲಿ ಕೆಲವು ಮಾತ್ರ ಐತಿಹಾಸಿಕವಾಗಿದ್ದು ಅಲ್ಲಿ ಈ ಹಿಂದೆ ಘಟಿಸಿದ ಘಟನೆಗಳಿಂದ ಇತಿಹಾಸದ ಪುಟಗಳಲ್ಲಿ ಮತ್ತು ಜನರ ಮನಸ್ಸಿನಲ್ಲಿ ಇವುಗಳ ಹೆಸರು ಶಾಶ್ವತವಾಗಿ ಅಚ್ಚು ಹೊಡೆದಂತೆ ಉಳಿದಿದೆ. ಇನ್ನೂ ಈ ಕೋಟೆಗಳ ಹೆಸರು ಸಹ ಅರ್ಥ ಪೂರ್ಣವಾಗಿರುತ್ತದೆ. ಕೆಲವು ಆ ಸ್ಥಳದ ಹೆಸರಿನ ಜೊತೆಗೆ ಮೆಲುಕು ಹಾಕಿಕೊಂಡರೆ ಇನ್ನು ಕೆಲವು ಆ ನೆಲದ ಶ್ರೇಷ್ಠ ವ್ಯಕ್ತಿಗಳ ಹೆಸರನ್ನು ಸೂಚಿಸುತ್ತದೆ. ಆದರೆ ನಮ್ಮ ಮಲೆನಾಡಿನ ಒಂದು ಕೋಟೆಗೆ ಈ ನೆಲದ […]
ಮಿಲಿಯನ್ ಮೌಲ್ಯದ ಹೋರಿಗೆ ಬರ್ತ್ ಡೇ..

ಬಯಲುಸೀಮೆಯ ಜಾನಪದ ಕ್ರೀಡೆಗಳು, ಸಂಪ್ರದಾಯಗಳನ್ನ ಒಳಗೊಂಡಿರುವ ಹಾವೇರಿ, ದಾವಣಗೆರೆ ಜಿಲ್ಲೆಯ ಗಡಿಗೆ ಹೊಂದಿಕೊಂಡ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಹೋರಿ ಬೆದರಿಸುವ ಹಬ್ಬಕ್ಕೆ ಬಹಳ ಪ್ರಸಿದ್ಧಿ ಪಡೆದಿದೆ. ಆಶ್ಚರ್ಯ ಅನಿಸಬಹುದು, ತಮಿಳುನಾಡಿನಿಂದ ಶಿಕಾರಿಪುರಕ್ಕೆ ಬಂದು ಜಲ್ಲಿಕಟ್ಟು ಸ್ಪರ್ಧೆಗೆ ಹೋರಿಗಳನ್ನ ಲಕ್ಷಗಟ್ಟಲೇ ನೀಡಿ ಕೊಂಡೊಯ್ಯುತ್ತಾರೆ. ಅಂತಹದೊಂದು ರೈತಾಪಿ ಕುಟುಂಬಗಳಿರುವ ಹಳ್ಳಿ ಕುಸ್ಕೂರು. ಶಿಕಾರಿಪುರ ಪಟ್ಟಣದಿಂದ ಹತ್ತು ಕಿಲೋಮೀಟರ್ ಅಂತರದಲ್ಲಿ ಸಿಗುವ ಈ ಹಳ್ಳಿಯಲ್ಲಿ ಹಬ್ಬದ ಹೋರಿಗಳೆಂದರೆ ಒಡನಾಡಿಗಳಂತೆ. ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಬ್ಬದ ಹೋರಿಗಳನ್ನ ಬೆಳೆಸುತ್ತಾರೆ. ಅವುಗಳನ್ನ […]
ಕೊಡಚಾದ್ರಿ ಬುಡದಲ್ಲೊಂದು ಮನಮೋಹಕ ಜಲಪಾತ..!

ಶಿವಮೊಗ್ಗದಲ್ಲಿ ಪ್ರಕೃತಿ ಪ್ರಿಯರಿಗೆ ಮುದ ನೀಡುವ ಸಾಕಷ್ಟು ಸ್ಥಳಗಳಿವೆ. ಇಂದಿಗೂ ಪ್ರವಾಸಿಗರ ಉಪಟಳದಿಂದ ದೂರನೇ ಉಳಿದಿವೆ. ಈಗೆಲ್ಲಾ ಪ್ರವಾಸಿಗರ ಅಭಿರುಚಿ ಬದಲಾದ್ದರಿಂದ ಹಾಗೂ ಪ್ರವಾಸಿತಾಣಗಳನ್ನ ವಿಕೃತಗೊಳಿಸುವ ಮನಸ್ಥಿತಿ ಹೊಂದಿರೋದ್ರಿಂದ ಅವುಗಳು ಹೀಗೆ ಇದ್ದರೇ ಒಳಿತು ಅನಿಸುತ್ತೆ.’ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಮಲೆನಾಡು ಪರಿಸರಕ್ಕೆ ಉತ್ತಮ ಉದಾಹರಣೆ. ಈ ತಾಲೂಕಿನಲ್ಲಿ ಸಿಗುವ ಪ್ರಾಕೃತಿಕ ಸೊಬಗು ಬೇರೆಡೆ ಸಿಗೋದಿಲ್ಲ. ತೀರ್ಥಹಳ್ಳಿ ಹಾಗೂ ಸ್ವಲ್ಪ ಮಟ್ಟಿನ ಸಾಗರವೂ ಸಹ ಮಲೆನಾಡಿನ ಪ್ರಾಕೃತಿಕ ಸೊಬಗನ್ನೇ ಹೊಂದಿದ್ದರೂ ಸಹ ಹೊಸನಗರ ಘಟ್ಟ ಪ್ರದೇಶ..! […]
ಪಾಳುಬಿದ್ದಿದ್ದ ಐತಿಹಾಸಿಕ ಪುಷ್ಕರಣಿಗೆ ಯಶೋಮಾರ್ಗದಿಂದ ಮರು ಜೀವ..!

ನಾಲ್ಕುನೂರು ವರ್ಷಗಳ ಇತಿಹಾಸವಿರುವ ಐತಿಹಾಸಿಕ ಪುಷ್ಕರಣಿ `ಚಂಪಕ ಸರಸ್ಸು’ (Champaka Sarasu) ಆರೇ ತಿಂಗಳಲ್ಲಿ ಯಶೋಮಾರ್ಗದ ಮೂಲಕ ಪುನಶ್ಚೇತನಗೊಂಡು ಲೋಕಾರ್ಪಣೆಗೊಂಡಿದೆ. ಖ್ಯಾತ ಪರಿಸರ ಹಾಗೂ ಜಲತಜ್ಞ ಶಿವಾನಂದ ಕಳವೆ ನೇತೃತ್ವದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪುಷ್ಕರಣಿಯನ್ನ ಗ್ರಾಮದ ಸುಪರ್ದಿಗೆ ನೀಡಲಾಗಿದೆ. ಈ ಪುಷ್ಕರಣಿಯ ಹಿಂದಿನ ಇತಿಹಾಸ ಹಾಗೂ ಪ್ರೇಮ ಕಥೆಯನ್ನ ಕೇಳಿದ್ದ ಯಶ್ (Actor Yash) ತನ್ನ ಯಶೋಮಾರ್ಗದ (Yashomarga) ಮೂಲಕ ಮಲೆನಾಡಿನ ಮೂಲೆಗೂ ತಮ್ಮ ಸಾಮಾಜಿಕ ಕಾರ್ಯ ವಿಸ್ತರಿಸಿದ್ದು ಕೂಡ ಕುತೂಹಲಕಾರಿ ವಿಷಯ. ಮಹಾಂತಿನ ಮಠ […]
ಮೇರುತಿ ರೋಚಕ ಚಾರಣದ ಅದ್ಭುತ ಪ್ರವಾಸ ಕಥನ, ಪರಿಸರಾಸಕ್ತರಿಗಿದು ಸ್ವರ್ಗ..!

ಪಶ್ಚಿಮ ಘಟ್ಟದ ತಪ್ಪಲಿನ ಚಿಕ್ಕಮಗಳೂರು ಗಿರಿಗಳ ಧಾಮ ಎಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿರುವ ಸಾಲು ಗುಡ್ಡಗಳ ಶ್ರೇಣಿ ಆಕಾಶಕ್ಕೆ ಸವಾಲು ಒಡ್ಡಿ ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ತಲೆ ಎತ್ತಿ ನಿಂತಿರುವ ಗಿರಿಗಳು ಚಾರಣಿಗರ ಪಾಲಿನ ಕಾಶಿ. ಕುದುರೆಮುಖ, ಕೆಮ್ಮಣ್ಣುಗುಂಡಿ, ಬಾಬಾ ಬುಡನ್ ಗಿರಿ, ನರಸಿಂಹ ಪರ್ವತ ಮತ್ತು ಮುಳ್ಳಯ್ಯನಗಿರಿ ಎಲ್ಲರಿಗೂ ತಿಳಿದಿರುವ ಗಿರಿಧಾಮಗಳು. ಆದರೆ ಮೇರುತಿ ಪರ್ವತ ಎಂಬ ಸೊಗಸಾದ ಗುಡ್ಡಗಾಡು ಪ್ರದೇಶ ಯಾರಿಗೂ ಹೆಚ್ಚಾಗಿ ಗೋಚರಿಸದೆ ಇರುವ ಅದ್ಭುತ ತಾಣ. ಮೇರುತಿ ಅಂದರೆ ಎತ್ತರದ […]
ಈಸೂರು ದಂಗೆ, ಮಲೆನಾಡಿನ ರೈತಾಪಿ ಜೀವನ ಇಲ್ಲಿ ಮೂಡಿವೆ..!

ಶಿವಮೊಗ್ಗ ಜಿಲ್ಲೆಯಲ್ಲಿ ಸಾಕಷ್ಟು ನಿಸರ್ಗದತ್ತವಾಗಿ ಬಂದ ಪ್ರವಾಸಿ ತಾಣಗಳಿವೆ. ಗಿರಿ ಶಿಖರಗಳು, ನದಿ-ಜಲಪಾತಗಳು, ಜಲಾಶಯಗಳೂ, ವನ್ಯಧಾಮ ಹೀಗೆ ಸಾಲು ಸಾಲು ಅಹ್ಲಾದಕಾರಿ ಸ್ಥಳಗಳಿವೆ. ಆದರೆ ಕೃತಕವಾಗಿ ನಿರ್ಮಿಸಿ, ಉಚಿತ ಪ್ರವೇಶ ನೀಡಿ, ದಿನಕ್ಕೆ ನೂರಾರು ಪ್ರವಾಸಿಗರನ್ನ ಆಕರ್ಷಣೆ ಮಾಡುವ ಸ್ಥಳಗಳು ಮಾತ್ರ ಜಿಲ್ಲೆಯಲ್ಲಷ್ಟೇ ಅಲ್ಲ ರಾಜ್ಯದಲ್ಲೂ ಅಪರೂಪ. ಪ್ರವಾಸೋದ್ಯಮ ಹೆಸರಲ್ಲಿ ನೂರಾರು ಕೋಟಿ ವ್ಯಯಿಸಿ ಪ್ರಾಕೃತಿಕ ಪರಿಸರ ಹಾಳುಗೆಡವಿ ಜನರ ಕೋಪಕ್ಕೆ ಕಾರಣವಾಗುವ ನಿದರ್ಶನಗಳೇ ಅಧಿಕ. ಇಂತಹ ಅವೈಜ್ಞಾನಿಕ ಅಭಿವೃದ್ಧಿಗೆ ಅಣಕವೆಂಬಂತೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ […]
ವಿಶ್ವದಲ್ಲೇ ಮೊದಲು, ಕಣ್ತೆರವ ಬುದ್ಧ, ಇದರ ಹಿಂದೆ ಸಮಾಜಮುಖಿ ಉದ್ದೇಶ..!

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಿರಿವಂತೆಯಲ್ಲಿ ಬೃಹತ್ ಗಾತ್ರದ ಬುದ್ಧನ ವಿಗ್ರಹವನ್ನ ಪ್ರತಿಷ್ಠಾಪಿಸಲಾಗಿದೆ. ಅದರಲ್ಲೇನು ವಿಶೇಷ ಅಂತೀರಾ, ಈ ಬುದ್ಧ ಕಣ್ತೆರೆದು ಜಗತ್ತನ್ನ ನೋಡ್ತಾನೆ. ಇದೊಂದು ವಿಶಿಷ್ಟ ಕಲ್ಪನೆ ಹಾಗೂ ಇದರ ಹಿಂದೆ ಉತ್ತಮ ಸಂದೇಶವಿದೆ. ಇಡೀ ವಿಶ್ವದಲ್ಲಿ ಎಲ್ಲೇ ಹೋದರೆ ಸಾಮಾನ್ಯವಾಗಿ ಧ್ಯಾನದಲ್ಲಿ ಕಣ್ಮುಚ್ಚಿ ಕುಳಿತುಕೊಂಡಿರುವ ಬುದ್ಧನ ವಿಗ್ರಹಗಳೇ ಕಾಣುತ್ವೆ. ಆದರೆ ಈ ವಿಭಿನ್ನ ವಿಗ್ರಹ ಹಲವು ಕಾರಣಕ್ಕೆ ಪ್ರಸಿದ್ಧಿ ಪಡೆಯುತ್ತಿದೆ. ಇದರ ರೂವಾರಿ ಸಿರಿವಂತೆಯ ಚಿತ್ರಸಿರಿ ಚಂದ್ರಶೇಖರ್. ಮಲೆನಾಡಿನಲ್ಲಿ ಸಾಂಕೃತಿಕ ಹಾಗೂ ಸಂಪ್ರದಾಯ ಕಲೆಗಳ […]