TRUNKLOAD OF CONCERN: Karnataka transfers Kumki Elephants to AP amid controversy”

The Karnataka administration will hand over five elephants to Andhra Pradesh on Wednesday morning at Vidanasoudha. The ceremony will see the presence of CM Siddaramaiah, DCM DK Shivakumar, Forest Minister Eshwar B Khandre, and Andhra Pradesh’s DCM Pawan Kalyan. The transfer involves three elephants from Dubare camp in Kodagu and two from Sakrebailu camp in […]
ಎಣ್ಣೆ, ಮೋಜು-ಮಸ್ತಿ, ಅರಣ್ಯ ಸಿಬ್ಬಂದಿ ಎಂದು ಯೂಟ್ಯೂಬರ್ ಗೆ ಧಮ್ಕಿ, ಯಾರೀತ.?

ಚಿಕ್ಕಮಗಳೂರು ಭದ್ರಾ ಹುಲಿ ಮೀಸಲು ಅಭಯಾರಣ್ಯದಲ್ಲೊಂದು ಘಟನೆ ಯೂಟ್ಯೂಬರ್ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ವಿರೂಪಾಕ್ಷಖಾನ್ ಕಳ್ಳ ಬೇಟೆ ನಿಗ್ರಹ ಸಮೀಪದ ವ್ಯೂ ಪಾಯಿಂಟ್ ನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸೋಗಿನಲ್ಲಿದ್ದಾತನ ಜೊತೆ ಮಾತಿನ ಚಕಮಕಿ ನಡೆದಿದೆ. Karnataka Biker ಯೂಟ್ಯೂಬರ್ ಚಾನೆಲ್ ಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ವೀಡಿಯೋದಲ್ಲಿರುವಾತ ಕೆಲವು ಪ್ರವಾಸಿಗರನ್ನ ಬೊಲೆರೋ ವಾಹನದಲ್ಲಿ ಕರೆತಂದು ಗುಡ್ಡದ ಮೇಲೆ ಕೂರಿಸಿ ಬಿಯರ್ ಸೇವಿಸಲು ಬಿಟ್ಟಿದ್ದಾನೆ. ಜೊತೆಗೆ ಕೆಲ ಮಹಿಳೆಯರೂ ಇದ್ದಾರೆ. ಬೈಕರ್ ಗಳು ಹೋದಾಗ ಇಲ್ಲಿ ಯಾವುದೇ […]
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಶರಾವತಿ ನೀರಿಗೆ ದಾಹ.! ಶಶಿ ಸಂಪಳ್ಳಿ

ಹಿರಿಯ ಪತ್ರಕರ್ತರು ಹಾಗೂ ಲೇಖಕರು ಆದ ಶಶಿ ಸಂಪಳ್ಳಿಯವರು ಫೇಸ್ ಬುಕ್ ಲ್ಲಿ ಅಭಿಪ್ರಾಯ ಮಂಡಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲಾ ಮಲೆನಾಡಿಗೆ ಈ ಕಂಟಕ ಎದುರಾಗ್ತಿದೆ. ಈ ಪಕ್ಷಕ್ಕೂ ಮಲೆನಾಡಿನ ನೆಮ್ಮದಿಗೂ ಯಾಕೋ ಆಗಿಬರ್ತಿಲ್ಲ ಅನಿಸ್ತಿದೆ. ಕಳೆದ ಬಾರಿ 2019ರಲ್ಲಿ ಇವರದೇ ಸಮ್ಮಿಶ್ರ ಸರ್ಕಾರದಲ್ಲಿ ಡಾ ಜಿ ಪರಮೇಶ್ವರ್ ಈ ಬಗ್ಗೆ ಡಿಪಿಆರ್ ಗೆ ಸೂಚಿಸಿದ್ದರು. ಆಗ ಇಡೀ ಶಿವಮೊಗ್ಗ ಜಿಲ್ಲೆ ಮತ್ತು ಉತ್ತರಕನ್ನಡದ ಶರಾವತಿ ಕೊಳ್ಳದ ತಾಲೂಕುಗಳಲ್ಲಿ ಜನ ಸಿಡಿದೆದ್ದಿದ್ದರು. ಆದರೂ ಸುಮಾರು ಒಂದು ತಿಂಗಳ […]
ಖಂಡ್ರೆ ಖಡಕ್ ಆದೇಶ: ಬೆಂ.ನಗರ ವ್ಯಾಪ್ತಿಯಲ್ಲಿ ಘರ್ಜಿಸಿದ ಅರ್ಥಮೂವರ್ಸ್.

ಖಂಡ್ರೆ ಖಡಕ್ ಆದೇಶ: ಬೆಂ.ನಗರ ವ್ಯಾಪ್ತಿಯಲ್ಲಿ ತೆರವು ಕಾರ್ಯಾಚರಣೆ: 60 ಕೋಟಿ ರೂ. ಮಾರುಕಟ್ಟೆ ಮೌಲ್ಯದ ಅರಣ್ಯ ಒತ್ತುವರಿ ತೆರವು ಬೆಂಗಳೂರು: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬೆಲೆಬಾಳುವ ಅರಣ್ಯ ಭೂಮಿ ಒತ್ತುವರಿ ತೆರವು ಮಾಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಖಡಕ್ ಸೂಚನೆ ನೀಡಿದ 24 ಗಂಟೆಯೊಳಗೆ ಕೆಂಗೇರಿ ಬಳಿಯ ತುರಹಳ್ಳಿ ಮೀಸಲು ಅರಣ್ಯದ ಬಿಎಂ ಕಾವಲು ಬಫರ್ ವಲಯದಲ್ಲಿ ಒತ್ತುವರಿ ಮಾಡಲಾಗಿದ್ದ 60 ಕೋಟಿ ರೂ. ಮಾರುಕಟ್ಟೆ ಮೌಲ್ಯದ 6.5 ಎಕರೆ ಭೂಮಿ ತೆರವು ಮಾಡಿ, […]
2 ಲಕ್ಷ ಎಕರೆ ಅರಣ್ಯ ಒತ್ತುವರಿ: ಶಿವಮೊಗ್ಗ, ಉ.ಕ ದಲ್ಲೇ ಹೆಚ್ಚು: ಅರಣ್ಯ ಸಚಿವ

ಬೆಂಗಳೂರು: ರಾಜ್ಯದಲ್ಲಿ ಸುಮಾರು 2 ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದು, ದೊಡ್ಡ ಪ್ರಮಾಣದ ಒತ್ತುವರಿಯನ್ನು ಮೊದಲಿಗೆ ತೆರವುಗೊಳಿಸುವಂತೆ ಇಲಾಖೆಯ ಉನ್ನತಾಧಿಕಾರಿಗಳಿಗೆ ಸೂಚಿಸಿರುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ಅರಣ್ಯ ಮತ್ತು ಪರಿಸರ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ಅರಣ್ಯ ಸಂಪತ್ತಿನ ಸಂರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಕಾಯಿದೆ ರಚಿಸಿದ್ದಾಗ್ಯೂ, ಸುಮಾರು 2 ಲಕ್ಷ ಎಕರೆ ಅರಣ್ಯಭೂಮಿ ಒತ್ತುವರಿ ಆಗಿರುವುದು ಆಘಾತಕಾರಿ […]
ನೀರಿಲ್ಲ, ನಿರ್ವಹಣೆ ಇಲ್ಲ, ಸೊರಬದ ಗುಡವಿ ಪಕ್ಷಿಧಾಮದಲ್ಲಿ ಬಾನಾಡಿಗಳ ಮಾರಣಹೋಮ

ಸೊರಬ: ಸೊರಬದಲ್ಲಿರುವ ಗುಡವಿ ಪಕ್ಷಿಧಾಮ ವಲಸೆ ಹಕ್ಕಿಗಳಿಗೆ ಪ್ರಾಶಸ್ತ್ಯವಾದ ಸ್ಥಳವಾಗಿತ್ತು. ಪರಿಸರ ಪ್ರೇಮಿಗಳು, ಪಕ್ಷಿ ವೀಕ್ಷಕರಿಗೂ ನೆಚ್ಚಿನ ತಾಣವಾಗಿತ್ತು. ಆದರೆ ಈಗದು ಹಕ್ಕಿಗಳಿಗೆ ಸ್ಮಶಾನವಾಗಿದೆ. ಬಿಸಿಲಿನ ಝಳಕ್ಕೆ ನೀರೆಲ್ಲಾ ಬತ್ತಿ ಮರುಭೂಮಿಯಂತಾಗಿದೆ. ಏನೂ ಅರಿಯದ ಮುಗ್ಧ ಪಕ್ಷಿಗಳೀಗ ನಿಂತಲ್ಲೇ ಪ್ರಾಣ ಬಿಡುತ್ತಿವೆ. ನಾಲ್ಕು ದಶಕಗಳಿಂದ ಅಭಿವೃದ್ಧಿ ಕಾಣದ ಈ ತಾಣ ಈ ವರ್ಷ ಹವಾಮಾನ ವೈಪರೀತ್ಯಕ್ಕೆ ನಮ್ಮ ವ್ಯವಸ್ಥೆಯನ್ನ ಅಣಕಿಸುತ್ತಿದೆ. ಪಕ್ಷಿಧಾಮದಲ್ಲಿ ಸಾಲು ಸಾಲು ಹಕ್ಕಿಗಳು ಮೃತಪಟ್ಟಿದ್ದರೂ ಸಹ ಅರಣ್ಯ ಇಲಾಖೆ ಅಸಹಾಯಕ ಸ್ಥಿತಿಯಲ್ಲಿದೆ. ರಾಜಕಾರಣಿಗಳಿಗೆ ಇದರ […]
ಮರಳು ದಂಧೆ ಅವ್ಯಾಹತ, ಪಶ್ಚಿಮಘಟ್ಟದ ನದಿಗಳ ದಂಡೆಗಳು ನಾಶ: ಲೋಕಾಯುಕ್ತಕ್ಕೆ ಮೊರೆ

ಹೊಸನಗರ: ಮರಳು ಗಣಿಗಾರಿಕೆ ಶಿವಮೊಗ್ಗ ಜಿಲ್ಲೆಯಲ್ಲಿ ಎಗ್ಗಿಲ್ಲದೇ ಸಾಗುತ್ತಿದೆ. ಜೀವನದಿಗಳ ಒಡಲು ಬಗೆದು ಅವ್ಯಾಹತವಾಗಿ ಮರಳನ್ನ ಸಾಗಿಸುತ್ತಿದ್ದರೂ ಸಹ ಜಿಲ್ಲಾಡಳಿತ ಕಠಿಣ ಕ್ರಮಗಳನ್ನೇನೂ ತೆಗೆದುಕೊಂಡಿಲ್ಲ. ಪ್ರತೀ ಸರ್ಕಾರದಲ್ಲೂ, ಪಕ್ಷಾತೀತವಾಗಿ ಮರಳು ಲೂಟಿ ಹೊಡೆಯುವ ಕಳ್ಳರನ್ನ ಅಧಿಕಾರಿಗಳು ಪರೋಕ್ಷವಾಗಿ ರಕ್ಷಣೆ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ದಾಖಲೆ ಸಮೇತ ದೂರು ನೀಡಿದರೂ ಸಹ ಕಾಟಾಚಾರಕ್ಕೆ ದಾಳಿ ನಡೆಸಿ, ಅಳಿದುಳಿದ ಮರಳು ವಶಕ್ಕೆ ಪಡೆದು ಕ್ರಮ ಜರುಗಿಸಿದ್ದೇವೆ ಎಂದು ಕೈ ತೊಳೆದುಕೊಳ್ಳುತ್ತಾರೆ. ಇಂತಹ ಹಲವು ದೂರುಗಳನ್ನ ನೀಡಿ ಬೇಸರಗೊಂಡ ಹೊಸನಗರ ಮೂಲಕ […]
ಕೌಲುದುರ್ಗ (ಕವಿಲೇದುರ್ಗ) ಎಂಬ ಅಭೇದ್ಯ ಕೋಟೆ:

ನಮ್ಮ ಭಾರತದಲ್ಲಿ ಸಾವಿರಾರು ಕೋಟೆಗಳನ್ನು ನಾವು ಕಾಣಬಹುದು. ಅವುಗಳಲ್ಲಿ ಕೆಲವು ಮಾತ್ರ ಐತಿಹಾಸಿಕವಾಗಿದ್ದು ಅಲ್ಲಿ ಈ ಹಿಂದೆ ಘಟಿಸಿದ ಘಟನೆಗಳಿಂದ ಇತಿಹಾಸದ ಪುಟಗಳಲ್ಲಿ ಮತ್ತು ಜನರ ಮನಸ್ಸಿನಲ್ಲಿ ಇವುಗಳ ಹೆಸರು ಶಾಶ್ವತವಾಗಿ ಅಚ್ಚು ಹೊಡೆದಂತೆ ಉಳಿದಿದೆ. ಇನ್ನೂ ಈ ಕೋಟೆಗಳ ಹೆಸರು ಸಹ ಅರ್ಥ ಪೂರ್ಣವಾಗಿರುತ್ತದೆ. ಕೆಲವು ಆ ಸ್ಥಳದ ಹೆಸರಿನ ಜೊತೆಗೆ ಮೆಲುಕು ಹಾಕಿಕೊಂಡರೆ ಇನ್ನು ಕೆಲವು ಆ ನೆಲದ ಶ್ರೇಷ್ಠ ವ್ಯಕ್ತಿಗಳ ಹೆಸರನ್ನು ಸೂಚಿಸುತ್ತದೆ. ಆದರೆ ನಮ್ಮ ಮಲೆನಾಡಿನ ಒಂದು ಕೋಟೆಗೆ ಈ ನೆಲದ […]
ಭೂ ಕಬಳಿಕೆ ಆತಂಕವಿರುವ ಸರ್ಕಾರಿ ಜಾಗದಲ್ಲಿ ಹಸಿರು ಕ್ರಾಂತಿ

ಶಿವಮೊಗ್ಗ ಅಂದರೆ ಮಲೆನಾಡಿನ ಹೆಬ್ಬಾಗಿಲು.! ಆದರೆ ಶಿವಮೊಗ್ಗ ನಗರ ಪ್ರವೇಶಿಸಿದರೆ ಸಸ್ಯ ಸಂಕುಲದ ಕುರುಹುಗಳೇ ಇಲ್ಲ. ರಸ್ತೆ ಬದಿ ಅಲ್ಲಿಲ್ಲೊಂದು ಕಾಣಸಿಗುತ್ತಿದ್ದ ಗಿಡಗಳನ್ನೂ ಸಹ ವಿವೇಚನಾರಹಿತ ಸ್ಮಾರ್ಟ್ ಸಿಟಿ ಅಭಿವೃದ್ಧಿ ನಾಶಪಡಿಸಿದೆ. ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ತಂಪೆರೆಯುವ, ಶುದ್ಧ ಗಾಳಿ ನೀಡುವ ಗಿಡ ಮರಗಳಿಲ್ಲ.! ಮಲೆನಾಡಿಗೆ ಮಾದರಿಯಾಗಿರಬೇಕಿದ್ದ ನಗರ ಪ್ರವೇಶಿಸಿದರೆ ಹಸಿರೇ ಕಾಣದು, ಉಸಿರಾಡಲೂ ಶುದ್ಧ ಆಮ್ಲಜನಕವೂ ಸಿಗದು ಎಂಬ ಪರಿಸ್ಥಿತಿ ಇದೆ. ಆದರೆ ಶಿವಮೊಗ್ಗದ ಈ ಪರಿಸರಾಕ್ತರು ಎಲ್ಲರಂಥಲ್ಲ. ಭಾನುವಾರವೂ ಮನೆಯಲ್ಲಿ ಕೂರಲಿಲ್ಲ..! ಶಿವಮೊಗ್ಗ ಸ್ವಾಸ್ಥ್ಯ […]
ಈ ಕಾಡನ್ನೂ ಮುಳುಗಿಸಬೇಡಿ, ದಯವಿಟ್ಟು: ಶಶಿಧರ ಹಾಲಾಡಿ

ಯಾಕೋ ಶಿವರಾಮ ಕಾರಂತರು ನೆನಪಾಗುತ್ತಿದ್ದಾರೆ. ತಮ್ಮ ಇಳಿವಯಸ್ಸಿನಲ್ಲಿ ನಮ್ಮ ರಾಜ್ಯದ ಪರಿಸರ ರಕ್ಷಿಸಲು ಅವರು ಒಂದು ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಉತ್ತರಕನ್ನಡ ಜಿಲ್ಲೆಯ ದಟ್ಟಾರಣ್ಯದಲ್ಲಿ ನಿರ್ಮಾಣ ಹಂತದಲ್ಲಿದ್ದ ಕೈಗಾ ಯೋಜನೆಯಿಂದಾಗಿ ರಾಜ್ಯದ ಪರಿಸರಕ್ಕೆ ಹಾನಿಯುಂಟಾಗುವುದನ್ನು ಪ್ರತಿಭಟನೆಯ ಮೂಲಕ ಮೇಲಿನವರ ಗಮನಕ್ಕೆ ತಂದರು. ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದ ಕಾರಂತರು, ತಮ್ಮ ಪರಿಸರ ಕಾಳಜಿಯನ್ನು ಸಾರ್ವಜನಿಕವಾಗಿ ಅಂದು ವ್ಯಕ್ತ ಪಡಿಸಿದ ರೀತಿ ಅಭೂತಪೂರ್ವ. ಈ ರೀತಿ ಪ್ರತಿಭಟನೆ ಮಾಡಿದರೆ ಆಳುವವರಿಗೆ, ಅಕಾಡೆಮಿಗಳಿಗೆ ಬೇಸರವಾಗುತ್ತದೆ ಎಂದು ಅವರು ಹಿಂಜರಿಕೆಯಿಂದ ಮನೆಯೊಳಗೇ ಕುಳಿತರಲಿಲ್ಲ! ಬೇರಾವುದೇ […]