Ode to the west wind

Join Us on WhatsApp

Connect Here

ಕಾಡು ನದಿಗೆ ಜೀವದಾನ ಮಾಡಿದ ಹಾಲಿವುಡ್‌ ನಟ ಇವರು, ನಮ್ಮಲ್ಲೂ ಇದ್ದಾರೆ..!

ಹಾಲಿವುಡ್‌ ನಟ ಲಿಯೋನಾರ್ಡೊ ಡಿಕಾಪ್ರಿಯೋ (Leonardo DiCaprio) ಬಗ್ಗೆ ನಿಮಗೆ ಗೊತ್ತೇ ಇರುತ್ತೆ. ಅಥವಾ ಕನಿಷ್ಟ ಪಕ್ಷ ಟೈಟಾನಿಕ್‌ ಸಿನಿಮಾ ನೋಡೇ ಇರ್ತೀರಾ. ಸುಮಾರು ಐವತ್ತು ವರ್ಷ ಆಸುಪಾಸಿನ ಈ ನಟ ದಶಕಗಳ ಕಾಲ ಸಿನಿಮಾಗಳಲ್ಲಿ ನಟಿಸಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಆದರೆ ಅವರ ಸಿನಿಮಾಕ್ಕೆ ಸಿಕ್ಕ ಖ್ಯಾತಿಗಿಂತಾ ಪ್ರಕೃತಿ ಹಾಗೂ ಪರಿಸರ ಸಂರಕ್ಷಣೆ ಕುರಿತು ತೋರುತ್ತಿರುವ ಆಸಕ್ತಿ ಲಕ್ಷಾಂತರ ಮಂದಿಗೆ ಪ್ರೇರಣೆಯಾಗಿದೆ. ಈಗಲೂ ಅವರ Instagram bio ಚೆಕ್‌ ಮಾಡಿ ಅಲ್ಲೊಂದು ಪಿಟೀಷನ್‌ ಲಿಂಕ್‌ ಕಾಣುತ್ತೆ. […]

ಆಗುಂಬೆಯೊಡಲಿನ ಜೋಗಿಗುಂಡಿ, ಎಚ್ವರ ತಪ್ಪಿದರೆ ಸಾವಿನಗುಂಡಿ.!

ಶಿವಮೊಗ್ಗದಲ್ಲಿ ಮಳೆ ಆರ್ಭಟ ಹೆಚ್ಚಿದೆ. ಕಾಡು-ಮೇಡು, ಗಿರಿ-ಶಿಖರಗಳೆಲ್ಲಾ ಜಲಧಾರೆಯಿಂದ ಬಸಿಯುತ್ತಿವೆ. ಜಲಾಶಯಗಳು ತುಂಬುವ ಆಶಾಭಾವನೆ ಮೂಡಿಸಿದೆ. ಹವಾಮಾನ ಇಲಾಖೆ ಇನ್ನೂ ಎರಡು ದಿನ ಉತ್ತಮ ಮಳೆಯಾಗುವ ಮುನ್ಸೂಚನೆ ನೀಡಿದೆ. ಪ್ರವಾಸಿಗರೂ ಸಹ ನಿರೀಕ್ಷೆಗೂ ಮೀರಿ ಜಿಲ್ಲೆಯ ನಾನಾ ಪ್ರವಾಸಿತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ನಿಷೇಧಿತ ಅರಣ್ಯ ಪ್ರದೇಶದೊಳಗಿನ ಜಲಪಾತಗಳನ್ನ ಹುಡುಕಿ ಹುಚ್ಚಾಟ ಮಾಡುತ್ತಿದ್ದಾರೆ. ಪಶ್ಚಿಮ ಘಟ್ಟ ಸಾಲಿನ ಸುಂದರ ಊರು ಆಗುಂಬೆ. ಮಳೆ ಕಾಡಿನ ಸುಂದರ ಪರಿಸರದಲ್ಲಿ ಮಳೆಗೆ ಹತ್ತಾರು ಜಲಪಾತಗಳು ಗೋಚರವಾಗುತ್ತವೆ. ಗೋಂಡಾರಣ್ಯದ ಮಧ್ಯೆ ಇರುವ […]

ಶರಾವತಿ ಕಣಿವೆ ಜನರ ಅರಣ್ಯರೋಧನ: ಮೂಲಸೌಕರ್ಯಗಳಿಲ್ಲದೇ ಆರು ದಶಕ ಕಳೆದ ಜನ:

ನಾಡಿಗೆ ವಿದ್ಯುತ್ ನೀಡಲು ಮುಳುಗಡೆಯಾದವರು ಶಿವಮೊಗ್ಗ ಜಿಲ್ಲೆಯ ನಾನಾ ಭಾಗದಲ್ಲಿ ದಯಾನೀಯ ಸ್ಥಿತಿಯಲ್ಲಿದ್ದಾರೆ. ಮನೆಯಿಲ್ಲ, ಹಕ್ಕುಪತ್ರಗಳಿಲ್ಲ, ಶಿಕ್ಷಣ-ಆರೋಗ್ಯ, ಸರ್ಕಾರಿ ಸವಲತ್ತುಗಳಿಂದ ವಂಚಿತರಾಗಿ ಬದುಕುತ್ತಿದ್ದಾರೆ. ಆದರೆ ವಿದ್ಯುತ್ ಕೂಡ ಇಲ್ಲ ಎಂದರೆ ಎಂಥಹ ವಿಪರ್ಯಾಸ..! ಮುಳುಗಡೆ ಜನರನ್ನ ಆರು ದಶಕಗಳ ಹಿಂದೆ ದುರ್ಗಮ ಕಾಡಿನಲ್ಲಿ ಬಿಟ್ಟು ಬಂದ ಸರ್ಕಾರ ಈ ತನಕ ತಿರುಗಿ ನೋಡಿದ್ದೇ ಇಲ್ಲ. ಅವರೆಲ್ಲಾ ಈಗಲೂ ಸಂಕಷ್ಟದಲ್ಲಿ ದಿನದೂಡುತ್ತಿದ್ದಾರೆ. ಅಂತಹದೊಂದು ಬದುಕಿನ ಚಿತ್ರಣ ಇಲ್ಲಿದೆ. ಸಾಗರ ತಾಲೂಕಿನ ಭಾನುಕುಳಿ ಗ್ರಾಮ ಪಂಚಾಯತಿ. ಸಾಲಕೋಡ್ಲು, ಚೀಕನಹಳ್ಳಿ ಹಾಗೂ […]

ಆರು ದಶಕ ನೀರಲ್ಲಿದ್ದರೂ ನಶಿಸದ ಮಡೆನೂರು ಹಿರೇಭಾಸ್ಕರ ಅಣೆಕಟ್ಟು..!

ಬ್ರಿಟೀಷ್‌ ಇಂಡಿಯಾ ಸಮಯದಲ್ಲಿ ಜಲಾಶಯ, ಅಣೆಕಟ್ಟು, ಒಡ್ಡುಗಳನ್ನ ಹೇಗೆ ನಿರ್ಮಾಣ ಮಾಡುತ್ತಿದ್ದರು ಎಂಬ ಕೌತುಕ ಸಾಕಷ್ಟು ಜನರಲ್ಲಿರುತ್ತೆ. ಇಂದಿನಂತೆ ಕಾಂಕ್ರೀಟ್‌ ಬಳಸಿ ಕಟ್ಟುತ್ತಿರಲಿಲ್ಲ.  ಉದ್ಘಾಟನೆಗೆ ಮುನ್ನವೇ ಉದುರಿ ಬೀಳುತ್ತಲೂ ಇರಲಿಲ್ಲ. ಇಂತಹದೊಂದು ಅದ್ಭುತ ಅಣೆಕಟ್ಟೊಂದು ಆರು ದಶಕಗಳ ಕಾಲ ನೀರಿನಲ್ಲೇ ಮುಳುಗಿದೆ.  ಗಟ್ಟುಮುಟ್ಟಾಗಿಯೂ ಇದೆ ಎಂದರೆ ಎಂಥವರಿಗೂ ಅಚ್ಛರಿ ಎನಿಸದೇ ಇರದು.  ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶರಾವತಿ ನದಿಯಲ್ಲಿ ಎಂಟು ದಶಕದ ಅಣೆಕಟ್ಟಿದೆ, ಇದಕ್ಕೆ ಮಡೆನೂರು ಹಿರೇಭಾಸ್ಕರ ಎಂದು ಹೆಸರು. ಶರಾವತಿ ವನ್ಯಜೀವಿ ಸಂರಕ್ಷಿತ ವಲಯದೊಳಗೆ […]

ನಾಯಿ ಮುಖವಿರುವ ಹುಲಿ‌ ಕಂಡು ಬೆಚ್ಚಿದ ಜನ

ಬೆಳೆಯನ್ನು ರಕ್ಷಿಸಿಕೊಳ್ಳುವ ಸಲುವಾಗಿ ರೈತರು ಬಳಿದಿರುವ ಹುಲಿ ಬಣ್ಣದ ಪಟ್ಟಿಯ ನಾಯಿ ಹನೂರು – ಅಜ್ಜೀಪುರ ಮಾರ್ಗದಲ್ಲಿ ಸಂಚರಿಸಿಸುತ್ತಿತ್ತು. ಇದನ್ನ‌‌‌ ಕಂಡ ಸಾರ್ವಜನಿಕರು ಭಯಭೀತರಾಗಿದ್ದರು. ಇದು ಆತಂಕವನ್ನು ಉಂಟು ಮಾಡಿತ್ತು. ಅಜ್ಜೀಪುರ ಗ್ರಾಮದ ಅರಣ್ಯದಂಚಿನಲ್ಲಿ ಕೆಲ ರೈತರು ಜಮೀನನ್ನು ಹೊಂದಿದ್ದರು. ಆಗ್ಗಾಗ್ಗೆ ಕೋತಿಗಳು ಲಗ್ಗೆ ಇಟ್ಟು ಫಸಲನ್ನು ಹಾಳು ಮಾಡುತ್ತಿದ್ದವು. ಇದರಿಂದ ರೈತರು ರೋಸಿ ಹೋಗಿದ್ದರು. ಕೋತಿಗಳ ಹಾವಳಿಯನ್ನು ತಡೆಗಟ್ಟುವ ಉದ್ಧೇಶದಿಂದ ರೈತರು ತಮ್ಮ ಕೈಚಳಕವನ್ನು ತೋರಿಸಿದ್ದು, ನಾಯಿಯೊಂದಕ್ಕೆ ಹುಲಿ ಪಟ್ಟಿಯನ್ನು ಬಣ್ಣದಿಂದ ಬಳಿದು ಸಂಚರಿಸಲು ಬಿಟ್ಟಿದ್ದಾರೆ. […]

ಕೌಲುದುರ್ಗ (ಕವಿಲೇದುರ್ಗ) ಎಂಬ ಅಭೇದ್ಯ ಕೋಟೆ:

ನಮ್ಮ ಭಾರತದಲ್ಲಿ ಸಾವಿರಾರು ಕೋಟೆಗಳನ್ನು ನಾವು ಕಾಣಬಹುದು. ಅವುಗಳಲ್ಲಿ ಕೆಲವು ಮಾತ್ರ ಐತಿಹಾಸಿಕವಾಗಿದ್ದು ಅಲ್ಲಿ ಈ ಹಿಂದೆ ಘಟಿಸಿದ ಘಟನೆಗಳಿಂದ ಇತಿಹಾಸದ ಪುಟಗಳಲ್ಲಿ ಮತ್ತು ಜನರ ಮನಸ್ಸಿನಲ್ಲಿ ಇವುಗಳ ಹೆಸರು ಶಾಶ್ವತವಾಗಿ ಅಚ್ಚು ಹೊಡೆದಂತೆ ಉಳಿದಿದೆ. ಇನ್ನೂ ಈ ಕೋಟೆಗಳ ಹೆಸರು ಸಹ ಅರ್ಥ ಪೂರ್ಣವಾಗಿರುತ್ತದೆ. ಕೆಲವು ಆ ಸ್ಥಳದ ಹೆಸರಿನ ಜೊತೆಗೆ ಮೆಲುಕು ಹಾಕಿಕೊಂಡರೆ ಇನ್ನು ಕೆಲವು ಆ ನೆಲದ ಶ್ರೇಷ್ಠ ವ್ಯಕ್ತಿಗಳ ಹೆಸರನ್ನು ಸೂಚಿಸುತ್ತದೆ. ಆದರೆ ನಮ್ಮ ಮಲೆನಾಡಿನ ಒಂದು ಕೋಟೆಗೆ ಈ ನೆಲದ […]

ಅಡಕೆ ಸಸಿ ಮಡಿಗಳ ಮಧ್ಯೆ ಚೆಂಡು ಹೂ ಬೇಸಾಯ: ಲಾಭದಾಯಕ.?

ಮಲೆನಾಡಿನಲ್ಲಿ ಸಾಕಷ್ಟು ಯುವಕರು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಆದರೆ ಬೆರಳೆಣಿಕೆಯಷ್ಟು ಮಾತ್ರ ಭಿನ್ನ ಪ್ರಯೋಗಗಳ ಮೂಲಕ ಪ್ರಗತಿಪರ ಕೃಷಿಕ ಎನಿಸಿಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರಂ ಹೋಬಳಿ ಕೇಂದ್ರಕ್ಕೆ ಹೊಂದಿಕೊಂಡಂತೆ ಯಡೇಹಳ್ಳಿ ಎಂಬ ಗ್ರಾಮವಿದೆ. ಇಲ್ಲಿ ಮೂವತ್ತೇಳು ವರ್ಷದ ರಂಗನಾಥ್ ಬಿ ಎಆರ್ ಎಂಬುವರು ಕಳೆದ ನಾಲ್ಕೈದು ವರ್ಷಗಳಿಂದ ಅಡಕೆ ಹಾಗೂ ತೆಂಗಿನ ಸಸಿಗಳ ನರ್ಸರಿ ಮಾಡಿಕೊಂಡಿದ್ದಾರೆ. ಸುಮಾರು ಎರಡು ಲಕ್ಷ ಅಡಕೆ ಸಸಿಗಳಿರುವ ನರ್ಸರಿ ಈಗ ಜನರ ಆಕರ್ಷಣಾ ಕೇಂದ್ರವೂ ಆಗಿದೆ. ಕಾರಣ ರಂಗನಾಥ್ […]

ಜನರೇ ನಿರ್ಮಿಸಿಕೊಂಡ ಕಾಲು ಸಂಕ.

ಶೃಂಗೇರಿ ತಾಲೂಕು ಹರೇ ಬಿಳಲು ಗ್ರಾಮದಲ್ಲಿ ಸ್ಥಳೀಯರೇ ಸೇತುವೆ ನಿರ್ಮಿಸಿಕೊಂಡಿದ್ದಾರೆ. ಸರ್ಕಾರ ನಂಬಿ ಕೂತಿದ್ರೆ ಮೊಮ್ಮಕ್ಕಳ ಕಾಲಕ್ಕೂ ಸೇತುವೆ ಆಗ್ತಿತ್ತೋ ಇಲ್ವೋ. ಆದ್ರೆ, ಇವ್ರು ತಾವೇ ಕಾಲು ಸಂಕ ನಿರ್ಮಿಸಿಕೊಂಡು ಸರ್ಕಾರಕ್ಕೆ ಸಡ್ಡು ಹೊಡೆದಿದ್ದಾರೆ. ಈ ಸಂಕ ಇರದಿದ್ರೆ ಇವರಿಗೆ ಬದುಕೇ ಇಲ್ಲ. ಸೇತುವೆಗಾಗಿ ಹತ್ತಾರು ವರ್ಷಗಳಿಂದ ಮನವಿ ಮಾಡಿದ್ರು ಯಾರೂ ಕೇರ್ ಮಾಡಿಲ್ಲ. ವಿದ್ಯಾರ್ಥಿಗಳು ಓದಬೇಕಿತ್ತು. ಎಲ್ಲಾ ಕೆಲಸಕ್ಕೂ ಜನ ಇದೇ ನದಿಯನ್ನ ದಾಟಿಯೇ ಹೋಗ್ಬೇಕಿತ್ತು. ಬೇಸಿಗೆಯಲ್ಲೇ ಈ ನದಿ ನೀರು ಎದೆ ಮಟ್ಟಕ್ಕಿರುತ್ತೆ. ಮಳೆಗಾಲದಲ್ಲಿ […]

ಕೊಡಚಾದ್ರಿ ಬುಡದಲ್ಲೊಂದು ಮನಮೋಹಕ ಜಲಪಾತ..!

ಶಿವಮೊಗ್ಗದಲ್ಲಿ ಪ್ರಕೃತಿ ಪ್ರಿಯರಿಗೆ ಮುದ ನೀಡುವ ಸಾಕಷ್ಟು ಸ್ಥಳಗಳಿವೆ. ಇಂದಿಗೂ ಪ್ರವಾಸಿಗರ ಉಪಟಳದಿಂದ ದೂರನೇ ಉಳಿದಿವೆ. ಈಗೆಲ್ಲಾ ಪ್ರವಾಸಿಗರ ಅಭಿರುಚಿ ಬದಲಾದ್ದರಿಂದ ಹಾಗೂ ಪ್ರವಾಸಿತಾಣಗಳನ್ನ ವಿಕೃತಗೊಳಿಸುವ ಮನಸ್ಥಿತಿ ಹೊಂದಿರೋದ್ರಿಂದ ಅವುಗಳು ಹೀಗೆ ಇದ್ದರೇ ಒಳಿತು ಅನಿಸುತ್ತೆ.’ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಮಲೆನಾಡು ಪರಿಸರಕ್ಕೆ ಉತ್ತಮ ಉದಾಹರಣೆ. ಈ ತಾಲೂಕಿನಲ್ಲಿ ಸಿಗುವ ಪ್ರಾಕೃತಿಕ ಸೊಬಗು ಬೇರೆಡೆ ಸಿಗೋದಿಲ್ಲ. ತೀರ್ಥಹಳ್ಳಿ ಹಾಗೂ ಸ್ವಲ್ಪ ಮಟ್ಟಿನ ಸಾಗರವೂ ಸಹ ಮಲೆನಾಡಿನ ಪ್ರಾಕೃತಿಕ ಸೊಬಗನ್ನೇ ಹೊಂದಿದ್ದರೂ ಸಹ ಹೊಸನಗರ ಘಟ್ಟ ಪ್ರದೇಶ..! […]

ಪಾಳುಬಿದ್ದಿದ್ದ ಐತಿಹಾಸಿಕ ಪುಷ್ಕರಣಿಗೆ ಯಶೋಮಾರ್ಗದಿಂದ ಮರು ಜೀವ..!

ನಾಲ್ಕುನೂರು ವರ್ಷಗಳ ಇತಿಹಾಸವಿರುವ ಐತಿಹಾಸಿಕ ಪುಷ್ಕರಣಿ `ಚಂಪಕ ಸರಸ್ಸು’ (Champaka Sarasu) ಆರೇ ತಿಂಗಳಲ್ಲಿ ಯಶೋಮಾರ್ಗದ ಮೂಲಕ ಪುನಶ್ಚೇತನಗೊಂಡು ಲೋಕಾರ್ಪಣೆಗೊಂಡಿದೆ. ಖ್ಯಾತ ಪರಿಸರ ಹಾಗೂ ಜಲತಜ್ಞ ಶಿವಾನಂದ ಕಳವೆ ನೇತೃತ್ವದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪುಷ್ಕರಣಿಯನ್ನ ಗ್ರಾಮದ ಸುಪರ್ದಿಗೆ ನೀಡಲಾಗಿದೆ. ಈ ಪುಷ್ಕರಣಿಯ ಹಿಂದಿನ ಇತಿಹಾಸ ಹಾಗೂ ಪ್ರೇಮ ಕಥೆಯನ್ನ ಕೇಳಿದ್ದ ಯಶ್‌ (Actor Yash) ತನ್ನ ಯಶೋಮಾರ್ಗದ (Yashomarga) ಮೂಲಕ ಮಲೆನಾಡಿನ ಮೂಲೆಗೂ ತಮ್ಮ ಸಾಮಾಜಿಕ ಕಾರ್ಯ ವಿಸ್ತರಿಸಿದ್ದು ಕೂಡ ಕುತೂಹಲಕಾರಿ ವಿಷಯ. ಮಹಾಂತಿನ ಮಠ […]