Ode to the west wind

Join Us on WhatsApp

Connect Here

Written by 10:08 am NEWS

ಮರಕಡಿತಲೆ, ಕಚ್ಚಾರಸ್ತೆ ಎಸ್ಟೇಟ್‌ ಒಳಗೆ ಸತ್ತ ಕಡವೆ

ಚಿಕ್ಕಮಗಳೂರು, ಮೂಡಿಗೆರೆ ತಾಲೂಕಿನ ಬಾಳೂರು ಮೀಸಲು ಅರಣ್ಯ ಹಾಗೂ ಉರುಬಗೆ ಗ್ರಾಮದ ಖಾಸಗಿ ಎಸ್ಟೇಟ್‌ನಲ್ಲಿ ನಡೆದ ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು ಅರಣ್ಯ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ ಆರು ಮಂದಿಯ ವಿರುದ್ಧ ಅರಣ್ಯ ಇಲಾಖೆ ಗಂಭೀರ ಪ್ರಕರಣ ದಾಖಲಿಸಿದೆ.

ಬಾಳೂರು ಮೀಸಲು ಅರಣ್ಯ ಪ್ರದೇಶದಲ್ಲಿ ಅನುಮತಿಯಿಲ್ಲದೆ ಅಕ್ರಮವಾಗಿ ಕಚ್ಚಾ ರಸ್ತೆ ನಿರ್ಮಾಣ ಹಾಗೂ ಮರ ಕಡಿತಲೆ ಮಾಡಿದ ಪ್ರಕರಣ (04/2026-27) ಮತ್ತು ಉರುಬಗೆ ಗ್ರಾಮದ ಸರ್ವೇ ನಂಬರ್ 259ರಲ್ಲಿರುವ ‘ದಿ ರಿಡ್ಜ್ ಕೋ’ ಎಸ್ಟೇಟ್‌ನಲ್ಲಿ ಅಕ್ರಮವಾಗಿ ಮರ ಕಡಿತಲೆ ಮಾಡಿದ ಆರೋಪದ ಮೇಲೆ ಒಟ್ಟು ಮೂರು ಪ್ರತ್ಯೇಕ ಮೊಕದ್ದಮೆಗಳನ್ನು ಹೂಡಲಾಗಿದೆ. ಮುಖ್ಯವಾಗಿ, ಎಸ್ಟೇಟ್ ಆವರಣದಲ್ಲಿ ಸಾಂಬಾರ್ ಜಿಂಕೆ ( ಕಡವೆ )ಯೊಂದು ಮೃತಪಟ್ಟಿದ್ದರೂ ಇಲಾಖೆಗೆ ಮಾಹಿತಿ ನೀಡದೆ ಮುಚ್ಚಿಟ್ಟ ಹಿನ್ನೆಲೆಯಲ್ಲಿ ವನ್ಯಜೀವಿ ಅಪರಾಧ ಪ್ರಕರಣ (WLOR 01/2026-27) ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಪಶುವೈದ್ಯರಾದ ಡಾ. ಕಿರಣ್ ಅವರ ಸಮ್ಮುಖದಲ್ಲಿ ಮಹಜರು ನಡೆಸಿದ್ದು, ಜಿಂಕೆಯ ಕಳೇಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

Field No.DescriptionDetails
1Range, Division/TRsMudigere Range, Chikmagalur Division
2WLOR number and dateMUD/WLOR/No:01/2026-27, Date: 08-04-2026
3Place of detection/seizureHiduvali Sy. No. 259 of Urubage village, The Ridge Co. Estate.
4Date of detection08-04-2026
5Details of articles seizedOne dead body of Decomposed Sambar Deer Carcass.
6Nature of offenceSection 39(1)(a), 39(2) of Wildlife (Protection) Act 1972.
7Accused/SuspectsA1. The Ridge Co. Building No. 99, Bangalore-562110.
A2. Tarun Hari Nichani S/o Hari M. Nichani, 54 Years, Bangalore.
A3. Kathragudda Rajanikanth S/o Venkataeshwaralu K., 68 Years, Bangalore Rural.
A4. Udayashankar K. S/o Krishnappa, 52 years, Rajarajeshwari Nagar, Bangalore.
A5. Hanubalu Nanjappa Prasad S/o Hanubal Ramegowda Nanjappa, 55 years, Mudigere.
A6. V. Viijayakumar M. S/o B. Muniswamy, 50 years, Mudigere.
8Arrest StatusA1 to A6 are Absconded.
9Reporting OfficerManjunatha G. RFO Mudigere Range, Mudigere.

ಈ ಪ್ರಕರಣದಲ್ಲಿ ದಿ ರಿಡ್ಜ್ ಕಂಪನಿ, ಎಸ್ಟೇಟ್ ಮಾಲೀಕರಾದ ತರುಣ್ ಹರಿ ನಿಚಾನಿ, ಕತ್ರಗುಡ್ಡ ರಜನಿಕಾಂತ್, ಪಾಲುದಾರ ಉದಯ್ ಶಂಕರ್ ಕೆ., ಮ್ಯಾನೇಜರ್ ಹನುಬಾಳು ನಂಜಪ್ಪ ಪ್ರಸಾದ್ ಹಾಗೂ ರೈಟರ್ ವಿಜಯ್ ಕುಮಾರ್ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿದ್ದು, ಸದ್ಯ ಇವರೆಲ್ಲರೂ ತಲೆಮರೆಸಿಕೊಂಡಿದ್ದಾರೆ. ಮೂಡಿಗೆರೆ ವಲಯ ಅರಣ್ಯಾಧಿಕಾರಿ ಮಂಜುನಾಥ್ ಜಿ. ನೇತೃತ್ವದಲ್ಲಿ ತನಿಖೆ ಮುಂದುವರಿದಿದ್ದು, ಅರಣ್ಯ ಕಾಯ್ದೆ 1963 ಹಾಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

Environmental Violations in Mudigere: Sambar Deer Carcass Found Amid Illegal Road Work

  • FIR Lodged Against Six for Wildlife Poaching and Illegal Tree Felling in Chikkamagalur Estate
  • Mudigere Forest Department Files Case Against Bengaluru Businessmen After Sambar Deer Death

Visited 1 times, 12 visit(s) today
[mc4wp_form id="5878"]