Ode to the west wind

Join Us on WhatsApp

Connect Here

ಆನೆಗಳ ಕುರುಹುಗಳೇ ಇಲ್ಲದ ವಲಯಕ್ಕೂ ಆಗಮಿಸುತ್ತಿವೆ ಕಾಡಾನೆಗಳು.

WhatsApp
Facebook
Twitter
LinkedIn

ಶಿಕಾರಿಪುರ: ಹಿಂದೆಂದೂ ಆನೆಗಳ ಇರುವಿಕೆಯೇ ಇರದ ಸ್ಥಳಗಳಲ್ಲೂ ಆನೆಗಳು ಸಂಚರಿಸುತ್ತಿರುವುದು ಮಲೆನಾಡಿನ ರೈತರ ನಿದ್ದೆಗೆಡಿಸಿದೆ. ಎರಡು ಕಾಡಾನೆಗಳು ಮರಿಯೊಂದಿಗೆ ಶಿಕಾರಿಪುರ-ಸಾಗರದಂಚಿನ ಅಂಬ್ಲಿಗೋಳ ( ಅಂಬ್ಳಿಗೋಳ ) ವಲಯ ಅರಣ್ಯ ವ್ಯಾಪ್ತಿಯ ರೈತರ ಹೊಲಗಳಲ್ಲಿ ಹಾವಳಿ ನಡೆಸಿವೆ. ವಿರಳ ಕಾಡು ಪ್ರದೇಶದ ಈ ಹಳ್ಳಿಗಳಲ್ಲಿ ಆನೆ ವಾಸಿಸಬಲ್ಲ ಸಸ್ಯವರ್ಗವೇ ಇಲ್ಲ ಆದರೂ ಸಹ ಮೊದಲ ಸಲ ಇಂತಹ ಜನನಿಬಿಡ ಪ್ರದೇಶಕ್ಕೆ ಆನೆಗಳು ಬಂದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಎರಡು ದಿನಗಳಿಂದ ರಾತ್ರೋರಾತ್ರಿ ಶಿಕಾರಿಪುರ ತಾಲೂಕಿನ ಎರೆಕೊಪ್ಪ, ಗೊಬ್ಬರದ ಹೊಂಡದಿಂದ ಸಾಲೂರುವರೆಗೆ ನಾನಾ ರೈತರ ಹೊಲಗಳಲ್ಲಿ ಹಾನಿ ಮಾಡಿವೆ. ಜೋಳ, ಅಡಕೆ ಹಾಗೂ ಬಾಳೆ ಆನೆಗಳ ದಾಳಿಗೆ ತುತ್ತಾಗಿದೆ. ಸ್ಥಳದಲ್ಲಿ ಎರಡು ದೈತ್ಯ ಕಾಡಾನೆಗಳು ಹಾಗೂ ಮರಿ ಆನೆಯ ಹೆಜ್ಜೆ ಗುರುತು ಬಿದ್ದಿದ್ದು ಸ್ಥಳೀಯರು ಆನೆಗಳ ಸುಳಿವು ನೀಡಿದ್ದಾರೆ. ಸಾಗರ ಅರಣ್ಯ ವಿಭಾಗ ಡಿಎಫ್‌ಓ ಸಂತೋಷ್‌, ಅಂಬ್ಳಿಗೋಳ ವಲಯ ಅರಣ್ಯಾಧಿಕಾರಿ ಮಾಧವ ನೇತೃತ್ವದಲ್ಲಿ ಸಿಬ್ಬಂದಿ ಆನೆಗಳ ಜಾಡು ಹಿಡಿದು ಕಾಡು ಸುತ್ತುತ್ತಿದ್ದಾರೆ. ಮಂಗಳವಾರ ಆನೆಗಳನ್ನ ಓಡಿಸಲು ಸಕ್ರೆಬೈಲಿನಿಂದ ಮಾವುತರ ತಂಡ ಬರಲಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಲ್ಲಿನವು ಈ ಆನೆಗಳು..?

ಶಿಕಾರಿಪುರದಿಂದ ಹನ್ನೆರಡು ಕಿಲೋಮೀಟರ್‍ ದೂರ‌ದಿಂದ ಸಾಗರದ ಹಳ್ಳಿಗಳನ್ನೂ ಸೇರಿಸಿಕೊಂಡಿರುವ ಅಂಬ್ಳಿಗೋಳ ವಲಯ, ಚೊರಡಿ ವಲಯಕ್ಕೆ ಹೊಂದಿಕೊಂಡಿದೆ. ಇಲ್ಲಿ ಹಿಂದೆಂದೂ ಆನೆಗಳ ಓಡಾಟದ ಕುರುಹುಗಳಿಲ್ಲ. ಅದಕ್ಕೆ ಯೋಗ್ಯ ಕಾಡೂ ಸಹ ಇಲ್ಲಿಲ್ಲ. ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಕೆಲ ದಿನಗಳ ಹಿಂದೆ ಕಂಡ ಆನೆಗಳನ್ನ ಪಟಾಕಿ ಸಿಡಿಸಿ ಓಡಿಸಿರುವ ಇಲಾಖೆ ಸಿಬ್ಬಂದಿ, ಜನನಿಬಿಡ ಪ್ರದೇಶಕ್ಕೆ ಅಟ್ಟಿರುವ ಸಾಧ್ಯತೆ ಇದೆ. ಸಾಗರ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ದಾಟಿ, ಚೊರಡಿಯಿಂದ ಕೊಣೆ ಹೊಸೂರುವರೆಗೆ ಈ ಆನೆಗಳು ಈ ಭಾಗಕ್ಕೆ ಆಗಮಿಸಿರುವ ಸಾಧ್ಯತೆಗಳಿವೆ. ಇದಕ್ಕೆ ಪುಷ್ಟಿ ನೀಡುವಂತೆ ಹೆದ್ದಾರಿಯಲ್ಲಿ ಕೆಲ ಅರಣ್ಯ ಸಿಬ್ಬಂದಿಗಳು ರಾತ್ರಿಯೂ ಪಹರೆ ಕಾಯುತ್ತಿದ್ದಾರೆ. ಹೆದ್ದಾರಿ ಅಂಚಿನಲ್ಲಿ ಅಲ್ಲಲ್ಲಿ ಬೆಂಕಿ ಹಾಕಿಕೊಂಡು ಚಲನ-ವಲನಗಳ ಮೇಲೆ ನಿಗಾ ಇಟ್ಟಿದ್ದಾರೆ.

ಶಿಕಾರಿಪುರ ಜನಪ್ರತಿನಿಧಿ ಭೇಟಿ: ಜನನಿಬಿಡ ಪ್ರದೇಶಕ್ಕೆ ದಾಂಗುಡಿ ಇಡುತ್ತಿರುವ ಆನೆಗಳ ಬಗ್ಗೆ ಆತಂಕ ಪಡಬೇಕಿರುವ ಸಾಗರ, ಶಿಕಾರಿಪುರ ಹಾಗೂ ಶಿವಮೊಗ್ಗ ತಾಲೂಕು ಶಾಸಕರಿಗೆ ಈ ಆಘಾತದ ಅರಿವೇ ಇಲ್ಲದಂತಿದೆ. ಆದರೆ ಶಿಕಾರಿಪುರ ಕಾಂಗ್ರೆಸ್‌ ಮುಖಂಡ ನಾಗರಾಜ್‌ ಗೌಡ ಎರೆಕೊಪ್ಪ ಹಾಗೂ ಗೊಬ್ಬರದ ಹೊಂಡ ಹಳ್ಳಿಗಳಿಗೆ ಸೋಮವಾರ ಮುಂಜಾನೆ ಭೇಟಿ ನೀಡಿ ಅರಣ್ಯಾಧಿಕಾರಿಗಳ ಜೊತೆ ಮಾತನಾಡಿದ್ದಾರೆ. ಅಧಿಕಾರಿಗಳ ಮಾಹಿತಿ ಪ್ರಕಾರ ಇನ್ನೆರಡು ದಿನಗಳಲ್ಲಿ ಈ ಆನೆಗಳನ್ನ ಅಟ್ಟಲಾಗುತ್ತೆ. ಆದರೆ ನೂರಾರು ಕಿಲೋಮೀಟರ್‌ ಕ್ರಮಿಸಿರುವ ಈ ಆನೆಗಳನ್ನ ಯಾವ ಕಡೆ ಬೆದರಿಸುತ್ತಾರೆ ಹಾಗೂ ವಾಪಸ್‌ ತೆರಳುವಾಗ ಸಿಗುವ ಹಳ್ಳಿಗಳಲ್ಲಿ ಯಾವ ತರಹದ ಸಮಸ್ಯೆ ಎದುರಾಗುತ್ತೆ ಎಂಬುದು ಅಚ್ಛರಿ ಮೂಡಿಸಿದೆ. ಒಂದು ವೇಳೆ ಶಿಕಾರಿಪುರ-ಆನಂದಪುರ ರಸ್ತೆ ದಾಟಿದರೆ ಸಣ್ಣಪುಟ್ಟ ರೈತರ ಹೊಲಗಳೇ ಮಾಯವಾಗುವ ಆತಂಕ ಎದುರಾಗಿದೆ.

ರೇನ್‌ಲ್ಯಾಂಡ್‌‌‌‌‌‌‌‌‌‌‌‌‌‌ ಮೀಡಿಯಾ

You Might Also Like This