Ode to the west wind

Join Us on WhatsApp

Connect Here

ಶಿವರಾತ್ರಿಯಂದು ಮೃತ ಧರ್ಮಸ್ಥಳದ ಆನೆ ‘ಲತಾ’

WhatsApp
Facebook
Twitter
LinkedIn

ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದ ಆನೆ ‘ಲತಾ’ ಶಿವರಾತ್ರಿಯಂದೇ ಶಿವೈಕ್ಯಳಾಗಿದ್ದಾಳೆ. 60ವರ್ಷ ಪ್ರಾಯದ ಲತಾ ಕಳೆದ 50ವರ್ಷಗಳಿಂದ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸೇವೆಯಲ್ಲಿ ನಿರತವಾಗಿತ್ತು. ಶುಕ್ರವಾರ ಮಧ್ಯಾಹ್ನದ ವೇಳೆ ಹೃದಯಾಘಾತದಿಂದ ಮೃತಪಟ್ಟಿದೆ. ಕಳೆದ 50ವರ್ಷಗಳ ಅವಧಿಯಲ್ಲಿ ಧರ್ಮಸ್ಥಳ ದೇವಸ್ಥಾನದ ಜಾತ್ರಾಮಹೋತ್ಸವದಲ್ಲಿ ಈ ಲತಾ ಆನೆ ಮದಗಜಗಮನೆಯಂತೆ ಗಾಂಭೀರ್ಯದ ಹೆಜ್ಜೆ ಹಾಕಿ ಎಲ್ಲರ ಚಿತ್ತ ಸೆಳೆಯುತ್ತಿತ್ತು. ಧರ್ಮಸ್ಥಳದಲ್ಲಿ ಸದ್ಯ ಲಕ್ಷ್ಮಿ, ಶಿವಾನಿ ಎಂಬ ಎರಡು ಆನೆಗಳಿವೆ‌. ಲತಾ ಆನೆ ಈ ಎರಡು ಆನೆಗಳಿಗೆ ತಾಯಿ ಹಾಗೂ ಅಜ್ಜಿ ಪ್ರೀತಿ ನೀಡಿತ್ತು. ಶಿವಾನಿ ಆನೆ ತನ್ನ ತಾಯಿ ಲಕ್ಷ್ಮಿ ಆನೆಗಿಂತಲೂ ಹೆಚ್ಚು ಲತಾ ಆನೆಯೊಂದಿಗೆ ಸಲುಗೆಯಿಂದ ವರ್ತಿಸುತ್ತಿತ್ತು‌. ಲತಾ ಆನೆಯ ಅಂತ್ಯ ಸಂಸ್ಕಾರ ಶನಿವಾರ ಸಂಜೆ ವೇಳೆ ನಡೆಯುವ ಸಾಧ್ಯತೆಯಿದೆ.

You Might Also Like This