ಹಳ್ಳಿಕಾರ್ ಪಶು ತಳಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಬಿಗ್‌ಬಾಸ್ ಸೀಸನ್ ೧೦ರ ಸ್ಪರ್ಧಿ ವರ್ತೂರ್ ಸಂತೋಷ್‌ನನ್ನ ಭಾನುವಾರ ತಡರಾತ್ರಿ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಸಂತೋಷ್ ಹುಲಿ ಉಗುರಿನ ಲಾಕೆಟ್ ಹಾಕಿಕೊಂಡು ಕಾರ್ಯಕ್ರಮದಲ್ಲಿ ಶೋ ಕೊಡುತ್ತಿದ್ದರು. ಇದನ್ನ ಗಮನಿಸಿದ್ದ ಪರಿಸರಾಸಕ್ತ ಶರತ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ( PCCF) ಮೊಬೈಲ್‌ಗೆ ಮಾಹಿತಿ ನೀಡಿದ್ದರು. ಕೋಟ್ಯಾಂತರ ರೂ ಆಸ್ತಿ ಹೊಂದಿರುವ ಸಂತೋಷ್ ಸಾಮಾನ್ಯವಾಗಿ ಡ್ಯೂಪ್ಲಿಕೇಟ್ ಉಗುರು ಬಳಸಲಾರ ಎಂಬುದು ಅನುಮಾನಕ್ಕೆ ಕಾರಣವಾಗಿತ್ತು. ಹಾಗಾಗಿ ರಾಮನಗರ ಅರಣ್ಯಾಧಿಕಾರಿಗಳು ಈತನನ್ನ ಅರೆಸ್ಟ್ ಮಾಡಿದ್ದಾರೆ.
ಹುಲಿ ಉಗುರು ಕೊಟ್ಟಿದ್ದು ಯಾರು..?
ಹಾಗಾದರೆ ವರ್ತೂರ್ ಸಂತೋಷ್‌ಗೆ ಎಲ್ಲಿಂದ ಉಗುರು ಬಂತು ಎಂದು ಅರಣ್ಯಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಕೆಲ ವರ್ಷಗಳ ಹಿಂದೆ ಓರ್ವ ಮಾರಲು ಬಂದಿದ್ದ ಅದನ್ನ ನನ್ನ ಗೆಳೆಯರು ನನಗೆ ತಿಳಿಸಿದ್ದರು. ನಾನು ಖರೀದಿ ಮಾಡಿದ್ದೆ. ಮಾರಾಟ ಮಾಡಿದ್ದಾತನ ವಿವರ ನನ್ನ ಬಳಿ ಇಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಈಗಾಗಲೇ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ( CF) ರವೀಂದ್ರ ಕುಮಾರ್

ನ್ಯಾಯಾಧೀಶರ ಮುಂದೆ ಹಾಜರು..!
ವೈಲ್ಡ್ ಲೈಫ್ ಆಕ್ಟ್ ೧೯೭೦ರಡಿ ಬಂಧಿಸಲಾಗಿರುವ ಸಂತೋಷ್ ಪ್ರಕರಣ ಗಂಭೀರವಾಗಿದ್ದು, ಪರೀಕ್ಷೆಯಲ್ಲೂ ಅದು ನೈಜ ಹುಲಿ ಉಗುರು ಎಂದು ಸಾಭೀತಾಗಿದೆ ಹಾಗೂ ಸ್ವತಃ ಸಂತೋಷ್ ಹೌದು ಎಂದು ಒಪ್ಪಿಕೊಂಡಿದ್ದಾನೆ. ಹಾಗಾಗಿ ತನಿಖೆಯ ಕಾರಣಕ್ಕೆ, ಮಾರಾಟ ಜಾಲ ಬೇಧಿಸಲು ಅರಣ್ಯಾಧಿಕಾರಿಗಳ ವಶಕ್ಕೆ ಕನಕಪುರ ನ್ಯಾಯಾಧೀಶರು ನೀಡುವ ಸಾಧ್ಯತೆ ಇದೆ. ಹಾಗೂ ಇವರಿಗೆ ಸದ್ಯ ಜಾಮೀನು ನಿರಾಕರಣೆ ಸಾಧ್ಯತೆ ಹೆಚ್ಚಿದೆ.
ಶಿಕ್ಷೆ ಏನಿದೆ..?
ಹುಲಿ ಉಗುರು ದೃಢಪಟ್ಟಿರೋದ್ರಿಂದ ಐದು ವರ್ಷದಿಂದ ಏಳು ವರ್ಷದವರೆಗೂ ಶಿಕ್ಷೆ ಇದೆ. ಹಾಗೂ ಐವತ್ತು ಸಾವಿರದಿಂದ ಐದು ಲಕ್ಷದವರೆಗೆ ದಂಡ ವಿಧಿಸಬಹುದು. ಬಿಗ್ ಬಾಸ್ ಆಯೋಜಕರ ವಿರುದ್ಧನೂ ಪ್ರಕರಣ ದಾಖಲು ಮಾಡುವ ಸಾಧ್ಯತೆ ಇದೆ.
ಬಿಗ್ ಬಾಸ್‌ನಿಂದ ಹೊರಗೆ ಹೇಗೆ ಬಂದರು..?
ಬಿಗ್‌ಬಾಸ್ ನಿಯಮಗಳ ಪ್ರಕಾರ ಹಲವು ವಿಧದಲ್ಲಿ ಸ್ಫರ್ಧೆಯಿಂದ ಹೊರ ಹಾಕಬಹುದು. ಅದರಲ್ಲಿ ವರ್ತೂರ್ ಸಂತೋಷ್‌ನ ವಿಷಯದಲ್ಲಿ ಕಾನೂನು ಪ್ರಕ್ರಿಯೆ ಪಾಲನೆ ಹಿನ್ನೆಲೆ, ನೋಟಿಸ್ ಹಿಡಿದು ಏಕಾಏಕಿ ಹೋಗಿ ಅಧಿಕಾರಿಗಳು ಸಂತೋಷ್‌ನನ್ನ ಬಂಧಿಸಿ ಕರೆತಂದಿದ್ದಾರೆ.