ದೇವೀರಮ್ಮನ ದೇಗುಲಕ್ಕೆ ಡ್ರೆಸ್ ಕೋಡ್ ಆದೇಶ ಜಾರಿಯಾಗಿದೆ. ಸಾಂಪ್ರಾದಾಯಿಕ ಉಡುಗೆಯಲ್ಲಿ ಆಗಮಿಸಲು ಧಾರ್ಮಿಕದತ್ತಿ ಇಲಾಖೆ ಹಾಗೂ ದೇವಸ್ಥಾನ ಆಡಳಿತ ಮಂಡಳಿ ಸೂಚನೆ ನೀಡಿದ್ದು ಸೂಚನ ಫಲಕ ವೈರಲ್ ಆಗಿದೆ.

ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪವಿರುವ ಬಿಂಡಿಗ ದೇವೀರಮ್ಮನ ದೇವಾಲಯ ರಾಜ್ಯದಲ್ಲೇ ಪ್ರಸಿದ್ಧ ಗಿರಿ ಪ್ರವಾಸಿತಾಣ ಹಾಗೂ ಶ್ರದ್ಧಾ ಸ್ಥಳ. ಚಂದ್ರದ್ರೋಣ ಪರ್ವತಕ್ಕೆ ಹೊಂದಿಕೊಂಡಿರುವ ಈ ಸ್ಥಳ ಸಮುದ್ರ ಮಟ್ಟಕ್ಕಿಂತ ಮೂರು ಸಾವಿರ ಅಡಿ ಎತ್ತರದಲ್ಲಿದೆ. ಇಲ್ಲಿಗೆ ಪ್ರತೀ ವರ್ಷ ದೀಪಾವಳಿ ಹಬ್ಬದ ತರುವಾಯ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಪ್ರಾಕೃತಿಕ ಸೊಬಗಿನ ಪಿರಮಿಡ್ ಆಕಾರದ ಬೆಟ್ಟವೇರಲು ಮಧ್ಯರಾತ್ರಿಯೇ ಆರಂಭಿಸಿ ಮುಂಜಾನೆ ವೇಳೆಗೆ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಮಕ್ಕಳಿಂದ-ವೃದ್ಧರವರೆಗೂ ಎಲ್ಲರಿಗೂ ಅಂದು ಸಂಭ್ರಮದ ಚಾರಣದ ದಿನ. ಆದ್ರೆ ಇನ್ನು ಮುಂದೆ ಯಾರೇ ಬಂದರೂ ಸಾಂಪ್ರಾದಾಯಿಕ ಉಡುಗೆಯಲ್ಲೇ ಬರಬೇಕೆಂದು ದೇವಾಲಯ ಸೂಚನೆ ನೀಡಿದೆ.

ಸ್ಕರ್ಟ್, ಮಿಡಿ, ಸ್ಲೀವ್ ಲೆಸ್ ಡ್ರೆಸ್, ಪ್ಯಾಂಟ್, ಸಾಕ್ಸ್ ಹಾಕಿ ದೇವಾಲಯಕ್ಕೆ ಬರುವಂತಿಲ್ಲ. ದೇವಾಲಯದ ಆವರಣದೊಳಗೆ ಮೊಬೈಲ್ ಫೋನ್ ಗೂ ನಿಷೇಧಿಸಲಾಗಿದೆ. ದೇವಾಯದ ಆವರಣದಲ್ಲಿ ಪ್ರೀ-ವೆಡ್ಡಿಂಗ್ ಶೂಟ್, ರೀಲ್ಸ್ ಗೆ ಅವಕಾಶವಿಲ್ಲ ಎಂದು ಸಂದೇಶವಿರುವ ಸೂಚನ ಫಲಕವನ್ನ ಇರಿಸಲಾಗಿದೆ.
ಹಲವು ಚರ್ಚೆಗಳಿಗೆ ಗ್ರಾಸವಾಗಿದ್ದ ರಾಜ್ಯದ ನಾನಾ ದೇಗುಲಗಳಲ್ಲಿ ವಸ್ತ್ರ ಸಂಹಿತೆ, ಈಗ ಅಧಿಕೃತವಾಗಿ ಪಾಲನೆಯಾಗುವಂತೆ ಕೆಲ ದೇಗುಲಗಳಲ್ಲಿ ನೋಡಿಕೊಳ್ಳಲಾಗುತ್ತಿದೆ. ಧಾರ್ಮಿಕ ದತ್ತಿ ಇಲಾಖೆಯೇ ಇಲ್ಲಿ ಪಾಶ್ಚಾತ್ಯ ವಸ್ತ್ರಗಳಿಗೆ ನಿಷೇಧ ಹೇರಿದೆ.

A dress code has been enforced at Deviramma temple. The religious endowment department of Karnataka and the temple’s management board have given instructions to devotees. Thousands of devotees visit temple atop pyramid shape hill every year after Diwali festival. The temple has instructed that whoever comes from now on should come in traditional dress. Mobile phones are also prohibited inside the temple premises.