ಕರ್ನಾಟಕದಿಂದ ಗೋವಾ ಗಡಿಯಲ್ಲಿರುವ ಸೂರಲ್ ಜಲಪಾತ ವೀಕ್ಷಣೆಗೆ ತೆರಳಿದ್ದ ಪ್ರವಾಸಿಗರಿಗೆ ಗೋವಾ ಅರಣ್ಯ ಇಲಾಖೆ ಸಿಬ್ಬಂದಿ ಈ ವರ್ಷವೂ ಥಳಿಸಿರುವ ಘಟನೆ ನಡೆದಿದೆ.
ಮೈಮೇಲೆ ಬಾಸುಂಡೆ ಬರೋ ಹಾಗೆ ಥಳಿಸಿದ್ದಾರೆ, ಹಣ ಕಿತ್ತುಕೊಂಡು ವಿಕೃತಿ ಮೆರೆದಿದ್ದಾರೆ. ಬೆನ್ನು, ಕಾಲು ಕೈಗಳಿಗೆ ಪೆಟ್ಟಾಗಿದೆ ಎಂದು ಪ್ರವಾಸಿಗರು ದೂರಿದ್ದಾರೆ.
ಬೆಳಗಾವಿ ಮತ್ತು ಗೋವಾ ಗಡಿಯಲ್ಲಿ ಖಾನಾಪೂರ ತಾಲೂಕಿನ ಕಣಕುಂಬಿ ಬಳಿ ಇರೋ ಸೂರಲ್ ಜಲಪಾತ ಕರ್ನಾಟಕದ ವೆನೆಜುವೆಲಾ ಎಂದೂ ಪ್ರಸಿದ್ಧಿ ಪಡೆದಿದೆ.
ಮಳೆಗಾಲ ಆರಂಭ ಆಗ್ತಿದ್ದಂತೆ ಕರ್ನಾಟಕದಿಂದ ಅತಿಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಇದನ್ ಗೋವಾ ಅರಣ್ಯ ಇಲಾಖೆ ಸಿಬ್ಬಂದಿ ಇದನ್ನೇ ನೆಪ ಮಾಡಿಕೊಂಡು ಬಡಿದಿದ್ದಾರೆಂದು
ಹುಕ್ಕೇರಿ ತಾಲೂಕಿನ ಸಂಕೇಶ್ವರದ ಐವರು ಯುವಕರು ಆರೋಪಿಸಿದ್ದಾರೆ.
ಹಲ್ಲೆ ಮಾಡಿದ್ದಲ್ಲದೇ ಪರ್ಸ್ ನಲ್ಲಿದ್ದ ಹಣ ಕಿತ್ತು, ಪೋನ್ ಪೇ ಒಂದು ಸಾವಿರ ಸೇರಿ ಒಟ್ಟು 09 ಸಾವಿರ ಹಣ ಕಿತ್ತುಕೊಂಡಿದ್ದಾರೆ.
ಸೂರಲ್ ವೀಕ್ಷಣೆಗೆ ಹೋಗುವ ಜನರಿಂದಲೂ ನಿರಂತರವಾಗಿ ಹಣ ಕಿತ್ತುಕೊಳ್ಳುತ್ತಾರೆಂದು ದೂರಲಾಗಿದೆ.
ಈ ಕುರಿತು ಯುವಕರು ಪ್ರಕರಣ ದಾಖಲಿಸಿದ್ದರಾ ಎಂಬ ಮಾಹಿತಿ ಅಲಭ್ಯ. ಗೋವಾ ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಕೆಲವು ಕರ್ತವ್ಯ ಪಾಲನೆ ನಿಯಮಗಳಿವೆ. ಅವುಗಳ ಉಲ್ಲಂಘನೆ ಮಾಡಿದ್ರಾ ಎಂಬುದೂ ಗೊತ್ತಿಲ್ಲ. ಆದರೆ ಪ್ರತೀ ವರ್ಷವೂ ಗೋವಾ-ಬೆಳಗಾವಿ ಬಾರ್ಡರ್ ಲ್ಲಿನ ( ದೂದ್ ಸಾಗರ್ ಸೇರಿ) ಹಲವು ಪ್ರವಾಸಿ ತಾಣಗಳಲ್ಲಿ ಈ ತರಹದ ಘಟನೆಗಳು ನಡೆಯುತ್ತಲೇ ಇರುತ್ತವೆ.