ಮೂಡಿಗೆರೆ ತಾಲೂಕನ್ನೇ ನಡುಗಿಸಿದ್ದ ಕಾಡಾನೆ ಇಬ್ಬರನ್ನ ಬಲಿತೆಗೆದುಕೊಂಡಿತ್ತು. ಅಪಾರ ಪ್ರಮಾಣದ ಬೆಳೆ ನಾಶ ಮಾಡಿತ್ತು. ಜನರ ಸಿಟ್ಟಿಗೆ ಶಾಸಕ ಎಂಪಿ ಕುಮಾರಸ್ವಾಮಿ ಬಟ್ಟೆಯೂ ಹರಿದು ರಾಷ್ಟ್ರೀಯ ಸುದ್ದಿಯಾಗಿತ್ತು. ಹಲವು ವರ್ಷಗಳಿಂದ ಚಾಣಾಕ್ಷತನದಿಂದ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಭೈರಾನನ್ನ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಭೈರ ಹೆಸರು ಸ್ಥಳೀಯರೇ ನೀಡಿದ್ದರು.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಊರುಬಗೆ ಹೊಸಳ್ಳಿಯಲ್ಲಿ ಭಾಗದಲ್ಲಿ ಒಂದು ವಾರದಿಂದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರು. ಈ ಆನೆಯನ್ನೂ ಸೇರಿ ಈ ಭಾಗದಲ್ಲಿ ಒಟ್ಟು ಮೂರು ಕಾಡಾನೆಗಳನ್ನು ಸೆರೆಹಿಡಿಯಲು ರಾಜ್ಯ ಸರ್ಕಾರದಿಂದ ಅನುಮತಿ ನೀಡಿತ್ತು. ಈಗಾಗಲೇ ಎರಡು ಕಾಡಾನೆಗಳನ್ನು ಸೆರೆ ಹಿಡಿದಿದ್ದ ಅರಣ್ಯ ಇಲಾಖೆ ಭೈರಾನ ಉಪಟಳಕ್ಕೆ ರೋಸಿಹೋಗಿತ್ತು.

ಅಭಿಮನ್ಯು, ಭೀಮ, ಪ್ರಶಾಂತ, ಮಹೇಂದ್ರ, ಹರ್ಷ ಎಂಬ ಸಾಕಾನೆಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು.
ಸೆರೆ ಹಿಡಿದ ಕಾಡಾನೆಯನ್ನ ಲಾರಿಗೆ ಹತ್ತಿಸಲು ಹರಸಾಹಸಪಡಲಟಯ್ತು. ಎಷ್ಟೇ ಪ್ರಯತ್ನ ಪಟ್ಟರೂ ಮಾತು ಕೇಳುತ್ತಿರಲಿಲ್ಲ ಭೈರಾ.
ತುಂತುರು ಮಳೆಯ ನಡುವೆ ಲಾರಿಗೆ ಹತ್ತಿಸಲು ಮಾವುತರು ಎರಡು ಗಂಟೆಗಳ ಕಾಲ ಪ್ರಯತ್ನಪಟ್ಟರು. ಭೈರಾನನ್ನ ಅರಣ್ಯ ಇಲಾಖೆ ಅಧಿಕಾರಿಗಳು ನಾಗರಹೊಳೆಗೆ ಶಿಫ್ಟ್ ಮಾಡಿದ್ದಾರೆ.
video