Ode to the west wind

Join Us on WhatsApp

Connect Here

ಆನೆ ದಾಳಿಯಿಂದ ಸಿಕ್ಕಿ ಬಿದ್ದ ನಕ್ಸಲ್ ಆರೋಪಿತ.!

WhatsApp
Facebook
Twitter
LinkedIn

ಕಾಡಾನೆ ದಾಳಿಯಿಂದ ಸಿಕ್ಕಿ ಬಿದ್ದ ಮೋಸ್ಟ್ ವಾಂಟೆಡ್ ನಕ್ಸಲ್ ಕೇರಳದಲ್ಲಿ ಸೆರೆಯಾಗಿದ್ದಾನೆ.

ಕರ್ನಾಟಕದ ಮೋಸ್ಟ್ ವಾಂಟೆಡ್‌ ಭೂಗತ ನಕ್ಸಲ್ ಅಂಗಡಿ ಸುರೇಶ್ ಗೆ ಕೇರಳದ ಕಣ್ಣೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದ ಸುರೇಶ್ ಕಳೆದ 20 ವರ್ಷಗಳಿಂದ ಭೂಗತರಾಗಿದ್ದರು. ಸುರೇಶ್ ಸುಳಿವು ನೀಡಿದವರಿಗೆ 5 ಲಕ್ಷ ಬಹುಮಾನ ನೀಡುವುದಾಗಿ ಪೊಲೀಸರು ಘೊಷಿಸಿದ್ದರು.
ಕೇರಳ-ಕರ್ನಾಟಕ ಗಡಿ ಪ್ರದೇಶದ ಅರಣ್ಯದಲ್ಲಿ ಅಡಗಿರುವುದಾಗಿ ಸುಳಿವಿತ್ತು.
ಸುರೇಶ್ ವಿರುದ್ಧ ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ 10ಕ್ಕೂ ಅಧಿಕ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ.

ಕೇರಳದ ಕಣ್ಣೂರು ಅರಣ್ಯದ ನಕ್ಸಲ್ ಕ್ಯಾಂಪ್ ಮೇಲೆ ಕಾಡಾನೆ ದಾಳಿ ಮಾಡಿತ್ತು. ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ನಕ್ಸಲ್ ಸುರೇಶ್ ರನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲೇ ಬೇಕಿತ್ತು.‌ ಸುರೇಶ್ ಸದ್ಯ ಪೊಲೀಸರ ವಶದಲ್ಲಿದ್ದಾರೆ.

ಇನ್ನು..

ನಕ್ಸಲ್ ಹಿನ್ನೆಲೆಯ ಶ್ರೀಮತಿಗೆ ಚಿಕ್ಕಮಗಳೂರು ಎನ್ ಆರ್ ಪುರ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಕೇರಳದಲ್ಲಿ ಬಂಧನವಾಗಿದ್ದ ಶ್ರೀಮತಿ ಮೇಲೆ ನಾನಾ ಠಾಣೆಗಳಲ್ಲಿ 9ಕ್ಕೂ ಹೆಚ್ಚು ಪ್ರಕರಣಗಳಿವೆ.
ಕರಪತ್ರ ಹಂಚಿಕೆ, ಬ್ಯಾನರ್ ಕಟ್ಟಿದ್ದು, ಸರ್ಕಾರಿ ಆಸ್ತಿ ನಷ್ಟ, ವಿದ್ವಂಸಕ ಕೃತ್ಯದ ಸಂಚು  ಆಯುಧಗಳನ್ನ ಇಟ್ಟುಕೊಂಡಿದ್ದು, ಟೆಂಟ್ ಹಾಕಿದ್ದು, ಗನ್‌ ತೋರಿಸಿ ಸುಲಿಗೆ

ಪೊಲೀಸರಿಗೆ ಸಪೋರ್ಟ್ ಮಾಡದಂತೆ ಬೆದರಿಸಿದ್ದು ಸೇರಿ ವಿವಿಧ ಪ್ರಕರಣಗಳ ವಿಚಾರಣೆ ಬಾಕಿ ಇದೆ. ಕಾರ್ಕಳ ಪೊಲೀಸರ ವಶದಲ್ಲಿದ್ದ ಈಕೆ ಶೃಂಗೇರಿ ಪೊಲೀಸರ ಮೂಲಕ‌ ನ್ಯಾಯಾಲಕ್ಕೆ‌ ಹಾಜರಾಗಿದ್ದರು.

You Might Also Like This