Rain Land

Ode to the west wind

Join Us on WhatsApp

Connect Here

ಟಿಕೆಟ್ ವಂಚನೆ ಹಣ ಪರ ಸ್ತ್ರೀ ಅಕೌಂಟ್ ಗೆ ವರ್ಗಾವಣೆ ಮಾಡಿದ DRFO, ಸಸ್ಪೆಂಡ್.!

WhatsApp
Facebook
Twitter
LinkedIn

ಚಿಕ್ಕಮಗಳೂರು :  ಸರ್ಕಾರದ ಹಣ ಫೋನ್ ಪೇ ಮೂಲಕ ಪರ ಹೆಂಗಸಿನ ಖಾತೆಗೆ ವರ್ಗಾವಣೆ ಆರೋಪದಲ್ಲಿ ಕಳಸ ಅರಣ್ಯ ಇಲಾಖೆಯ ಡಿ.ಆರ್.ಎಫ್.ಓ. ಚಂದನ್ ಗೌಡ ಅಮಾನತುಗೊಂಡಿದ್ದಾರೆ. ರಾಣಿಝರಿ ಜಲಪಾತ, ಬಂಡಾಜೆ ಫಾಲ್ಸ್ ಬಳಿ ಟಿಕೆಟ್ ಗೋಲ್ ಮಾಲ್,  ಆನ್ ಲೈನ್ ಟಿಕೆಟ್ ಫೋರ್ಜರಿ ಮಾಡಿ ಸರ್ಕಾರಕ್ಕೆ ಮೋಸ ಹಾಗೂ
9000 ರುಪಾಯಿ ಹಣವನ್ನ ಸರ್ಕಾರಕ್ಕೆ ಮೋಸ ಮಾಡಿರುವುದು ಸಾಬೀತಾಗಿದ್ದು ತನಿಖೆ ಮುಂದುವರಿದಿದೆ. ಈ ಪ್ರಕರಣ ಚಿಕ್ಕಮಗಳೂರು ಜಿಲ್ಲೆಯ ಇನ್ನೊಂದು ಪರಿಸರ ಪ್ರವಾಸೋದ್ಯಮದ ಎತ್ತುವಳಿಗೆ ಸಾಕ್ಷಿಯಾಗಿದೆ.

ತನಿಖೆ ಕುರಿತು ಚಿಕ್ಕಮಗಳೂರು CCF ಉಪೇಂದ್ರ ಪ್ರತಾಪ್ ಸಿಂಗ್ ಹೊರಡಿಸಿರೋ
ಪ್ರಕಟಣೆ ಹೀಗಿದೆ.

ಉಲ್ಲೇಖ (1)ರ ಪತ್ರದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕೊಪ್ಪ ವಿಭಾಗ, ಕೊಪ್ಪ ಇವರು ವರದಿಸಿರುವಂತೆ, ವಲಯ ಅರಣ್ಯಾಧಿಕಾರಿ, ಕಳಸ ವಲಯ ಇವರ ಕಛೇರಿ ಪತ್ರ ದಿನಾಂಕ:18-07-2024ರ ವರದಿಯ ಅನುಸಾರ ಕಳಸ ವಲಯ ವ್ಯಾಪ್ತಿಯ ಬಲ್ಲಾಳ ರಾಯನದುರ್ಗ ಮತ್ತು ಬಂಡಾಜೆ ಫಾಲ್ಸ್ಗಳಿಗೆ ಚಾರಣಕ್ಕಾಗಿ ಹೋಗುವ ಪ್ರವಾಸಿಗರಿಗೆ ಪರಿಸರ ಪ್ರವಾಸೋದ್ಯಮ ಇಲಾಖೆ ವತಿಯಿಂದ ಬಲ್ಲಾಳರಾಯನ ದುರ್ಗಕ್ಕೆ ಮತ್ತು ಬಂಡಾಜೆ ಫಾಲ್ಸ್ಗೆ ಪ್ರತಿಯೊಬ್ಬರಿಗೆ ರೂ.250ರಂತೆ ಶುಲ್ಕ ನಿಗದಿಪಡಿಸಿದೆ. ಪರಿಸರ ಮತ್ತು ಪ್ರವಾಸೋದ್ಯಮ ಇಲಾಖೆಯವರಿಂದ ಆನ್ ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡಿ ವಿತರಿಸಿರುವ ಟಿಕೆಟ್‌ಗಳನ್ನು ಪರಿಶೀಲಿಸಿ ಚಾರಣಕ್ಕೆ ಅನುಮತಿ ನೀಡುವ ಹಾಗೂ ಉಸ್ತುವಾರಿ ನಡೆಸುವ ಜವಾಬ್ದಾರಿಯನ್ನು ಚಾವಳಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಮತ್ತು ಮೋಜಣಿದಾರ ಚಂದನಗೌಡ ದ್ಯಾಮನಗೌಡ್ರ ಹಾಗೂ ಜಾವಳಿ ಗಸ್ತಿನ ಗಸ್ತು ಅರಣ್ಯ ಪಾಲಕ ಹೆಚ್. ನಾಗರಾಜ ನಿರ್ವಹಿಸುತ್ತಾರೆ.

ಪರಿಸರ ಪ್ರವಾಸೋದ್ಯಮ ಇಲಾಖೆ ನೀಡುವ ಟಿಕೆಟ್‌ಗಳನ್ನು ಸಿಬ್ಬಂದಿಗಳು ದುರ್ಬಳಕೆ ಮಾಡಿಕೊಂಡಿರುವ ಅನುಮಾನ ಕಾಣುತ್ತಿದೆ. ಪ್ರವಾಸೋದ್ಯಮ ಇಲಾಖೆ ನೀಡಿರುವ ಟಿಕೇಟ್‌ಗಳನ್ನು ಬಳಸಿಕೊಂಡು ನಕಲಿ ಟಿಕೇಟ್ ಸೃಷ್ಟಿಸಿ ದಿನಾಂಕ:14-06-2024ರಂದು ಶ್ರೀಮತಿ ಮೋನಿಕ ಸಿ. ಎನ್ನುವವರ ಫೋನ್ ಪೇ ನಂಬರ್ +……206 ಒಟ್ಟು ಮೊತ್ತ ರೂ.9105,00(ರೂ. ಒಂಭತ್ತು ಸಾವಿರದ ಒಂದು ನೂರ ಐದು)ಗಳನ್ನು ಪಾವತಿಸಿರುವುದು ಟ್ರಾಂಜಾಕ್ಷನ್ ಐ.ಡಿ.ಸಂಖ್ಯೆ:7**1ಗೆ ಹಣ ಜಮಾ ಆಗಿರುವುದು ಕಂಡುಬಂದಿರುತ್ತದೆ. ದುರ್ಬಳಕೆ ಮಾಡಿಕೊಂಡಿರುವ ಟಿಕೆಟ್‌ಗಳ ವಿವರ ಕೆಳಕಂಡಂತಿದೆ.

ಮೇಲ್ಕಂಡಂತೆ ದಿನಾಂಕ:14-06-2024ರಂದು ಒಂದೇ ದಿನ ಮೂರು ಟಿಕೆಟ್‌ಗಳನ್ನು ಎಡಿಟ್ ಮಾಡಿ 30 ಚಾರಣೆಗರಿಗೆ ಮೇಲ್ಕಂಡ ಪ್ರದೇಶಗಳಿಗೆ ಚಾರಣಕ್ಕೆ ಅವಕಾಶ ನೀಡಿ ಹಣ ಸಂಗ್ರಹಿಸಿ ಪ್ರವೇಶ ಕಲ್ಪಿಸಿರುವುದನ್ನು ಗಮನಿಸಿದಲ್ಲಿ ಟಿಕೆಟ್‌ಗಳನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರಕ್ಕೆ ವಂಚನೆ ಮಾಡಿರುವುದು ಮೇಲ್ನೋಟಕ್ಕೆ ಸಾಭೀತಾಗಿರುತ್ತದೆ. ಈ ಹಿಂದೆಯೂ ಹಲವು ಬಾರಿ ಈ ರೀತಿ ನಕಲಿ ಟಿಕೆಟ್‌ಗಳನ್ನು ವಿತರಿಸಿರುವ ಶಂಕೆಯಿರುವುದರಿಂದ ಈ ಮೇಲ್ಕಂಡ ಟಿಕೆಟ್‌ಗಳನ್ನು ಆಧಾರವಾಗಿಸಿಕೊಂಡು ಸಮಗ್ರವಾಗಿ ತನಿಖೆಯನ್ನು ನಡೆಸಿ ಈ ಚಾರಣದ ಪ್ರಕ್ರಿಯೆಯಲ್ಲಿ ವಂಚನೆಯನ್ನು ಮಾಡಿರುವ ಜಾಲವನ್ನು ಪತ್ತೆ ಹಚ್ಚಬೇಕೆಂದು ವಲಯ ಅರಣ್ಯಾಧಿಕಾರಿಯವರು ಕೋರಿರುತ್ತಾರೆ.

ಕಳಸ ವಲಯ ಅರಣ್ಯಾಧಿಕಾರಿಯವರ ವರದಿಯ ಮೇರೆಗೆ ಈ ಪ್ರಕರಣದ ಬಗ್ಗೆ ಕೂಡಲೇ ತನಿಖೆ ನಡೆಸಿ ವರದಿಯನ್ನು ಸಲ್ಲಿಸಬೇಕೆಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಬಾಳೆಹೊನ್ನೂರು ಉಪ ವಿಭಾಗ ಇವರಿಗೆ ದಿನಾಂಕ:22-07-2024ರಂದು ಉಪ ಅರಣ್ಯ ಸಂರಕ್ಷಣಾಧಿಕಾರಿ, ಕೊಪ್ಪ ವಿಭಾಗ, ಕೊಪ್ಪ ಇವರು ತಿಳಿಸಿರುತ್ತಾರೆ. ಬಾಳೆಹೊನ್ನೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರು ಈ ಪ್ರಕರಣದ ಬಗ್ಗೆ ವಿಸ್ತ್ರತವಾದ ವರದಿಯನ್ನು ಆರೋಪಿತ ನೌಕರರು, ಇತರೆ ಸಿಬ್ಬಂದಿಗಳು, ಚಾರಣ ಮಾರ್ಗದರ್ಶಕರ ಹೇಳಿಕೆಗಳು ಹಾಗೂ ಪೂರಕ ದಾಖಲಾತಿಗಳೊಂದಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕೊಪ್ಪ ವಿಭಾಗ, ಕೊಪ್ಪ ಇವರ ಕಛೇರಿಗೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರ ವರದಿಯ ಅನುಸಾರ ಪ್ರಾಥಮಿಕವಾಗಿ ಲಭ್ಯವಿರುವ ದಾಖಲೆಗಳನುಸಾರ ಹಾಗೂ ಇಲಾಖಾ ಸಿಬ್ಬಂದಿಗಳು ನೀಡಿರುವ ಹೇಳಿಕೆಯ ಆಧಾರದ ಮೇಲೆ ಶ್ರೀ ಚಂದನಗೌಡ , ಉಪ ವಲಯ ಅರಣ್ಯಾಧಿಕಾರಿ ಮತ್ತು ಮೋಜಣಿದಾರ, ಜಾವಳಿ ಶಾಖೆ, ಕಳಸ ವಲಯ ಇವರು ಕೆಳಕಂಡಂತೆ ಕರ್ತವ್ಯ ಲೋಪವೆಸಗಿರುವುದು ಕಂಡುಬಂದಿರುತ್ತದೆ.

1. ಪರಿಸರ ಪ್ರವಾಸೋದ್ಯಮ ಇಲಾಖೆಯು ಈ ಚಾರಣ ಪ್ರಕ್ರಿಯೆಯನ್ನು ನಿರ್ವಹಿಸಲು ನೇಮಕ ಮಾಡದೆ ಇರುವ ಶ್ರೀಮತಿ ಮೋನಿಕಾ , ಮೂಡಿಗೆರೆ ವಾಸಿ ಇವರಿಗೆ ಅನ್‌ಲೈನ್ ಮೂಲಕ ಚಾರಣಿಗರಿಗೆ ಟಿಕೇಟ್ ಬುಕ್ಕಿಂಗ್ ಮಾಡಿಕೊಡಲು ಸಂಪರ್ಕಿಸಿರುವುದು ಹಾಗೂ 03 ನಕಲಿ ಇನ್‌ವಾಯ್ಸ್ ಬಂದಂತಹ ಹಣವನ್ನು ಶ್ರೀಮತಿ ಮೋನಿಕ ಫರ್ನಾಂಡಿಸ್, ಮೂಡಿಗೆರೆ ವಾಸಿ ಇವರ ವೈಯಕ್ತಿಕ ಖಾತೆಗೆ ರೂ.9,105/-ಗಳನ್ನು ಜಮಾ ಮಾಡಿರುವುದು ನೌಕರರ ಕರ್ತವ್ಯ ಲೋಪವಾಗಿರುತ್ತದೆ.

2. ನಕಲಿ ಇನ್‌ವಾಯ್ಸ್ ಎಂದು ತಿಳಿದಿದ್ದರೂ ಚಾರಣೆಗರನ್ನು ಚಾರಣಕ್ಕೆ ಅನುವು ಮಾಡಿಕೊಟ್ಟಿರುವುದು ಹಾಗೂ ಸದರಿ ಚಾರಣೆಗರನ್ನು ಪ್ರವಾಸೋದ್ಯಮ ಇಲಾಖೆಗೆ ಟಿಕೇಟ್ ಬುಕ್ಕಿಂಗ್ ಮಾಡಿಕೊಳ್ಳಲು ಸೂಚಿಸದೇ ಇರುವುದು ಕರ್ತವ್ಯ ಲೋಪವಾಗಿರುತ್ತದೆ.

3. ಟ್ರಿಕಿಂಗ್ ರಿಜಿಸ್ಟರ್‌ಗಳಲ್ಲಿ ಸರಿಯಾಗಿ ಮಾಹಿತಿಗಳನ್ನು ದಾಖಲೆ ಮಾಡಲು ಟ್ರಕಿಂಗ್ ಇನ್‌ಚಾರ್ಜ್‌ನ  ಮಾರ್ಗದರ್ಶನ ನೀಡದೇ ಹಾಗೂ ಕಾಲಕಾಲಕ್ಕೆ ತಪಾಸಣೆ ಮಾಡಲು ವಿಫಲರಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.

4. ನಾಗರಾಜ, ಗಸ್ತು ಅರಣ್ಯ ಪಾಲಕ, ಜಾವಳಿ ಗಸ್ತು ಇವರು ತನ್ನ ಹೇಳಿಕೆಯಲ್ಲಿ ಶ್ರೀ ಶರತ್ ಮತ್ತು ಪ್ರದೀಪ್ ಎನ್ನುವವರು ಟ್ರಕಿಂಗ್ ಇನ್‌ಚಾರ್ಜ್ ಆಗಿ ಕೆಲಸ ನಿರ್ವಹಿಸುತ್ತಿರುತ್ತಾರೆ. ಜೂನ್-2024ರ ಮಾಹೆಯಲ್ಲಿ ಸದರಿ ಜಾಗದಲ್ಲಿ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಶ್ರೀ ಪ್ರದೀಷ್ ಮಾತ್ರ ಕೆಲಸ ನಿರ್ವಹಿಸಿದ್ದು, ಶರತ್ ಎಂಬುವವರು ಕೆಲಸ ನಿರ್ವಹಿಸಿರುವುದಿಲ್ಲ. ಬದಲಿಗೆ ಅವರ ತಂದೆಯವರಾದ ಶ್ರೀ ಎಂ.ಕೆ. ಅನಿಲ್‌ ಕುಮಾರ್ ಇವರು ಕೆಲಸವನ್ನು ನಿರ್ವಹಿಸಿರುತ್ತಾರೆ ಎಂದು ವಿಚಾರಣೆಯಲ್ಲಿ ತಿಳಿಸಿರುತ್ತಾರೆ. ಆದರೆ, ಜೂನ್-2024ರ ಹಾಜರಾತಿ ದಾಖಲೆಗಳನ್ನು ಪರಿಶೀಲಿಸಿದಾಗ
ಶ್ರೀ ಶರತ್ ಕುಮಾರ್, ಡಿ.ಎ. ಎನ್ನುವವರ ಹೆಸರಿನಲ್ಲಿ ಆರೋಪಿತ ನೌಕರರಾದ ಶ್ರೀ ಚಂದನಗೌಡ ದ್ಯಾಮನಗೌಡ್ರ ಇವರು ಹಾಜರಾತಿಯನ್ನು ನೀಡಿರುವುದು ಕರ್ತವ್ಯ ಲೋಪವಾಗಿರುತ್ತದೆ.

5. ಬಲ್ಲಾಳರಾಯನದುರ್ಗ ಹಾಗೂ ಬಂಡಾಜೆ ಫಾಲ್ಸ್ನ ಚಾರಣದ ಕುರಿತಾದ ಜೂನ್-2024ರ ಮಾಹೆಯಲ್ಲಿ ಬುಕಿಂಗ್ ಐಡಿ ನಂಬರ್ ಹೊಂದಿರುವ ಇನ್‌ವಾಯ್ಸ್ಗಳ ಮಾಹಿತಿಗಳಿಗೂ ಹಾಗೂ ಟ್ರೆಕ್ಕಿಂಗ್ ರಿಜಿಸ್ಟ್ರಾರ್‌ನಲ್ಲಿ ದಾಖಲಿಸಿರುವ ಇನ್ವಾಯ್ಸ್ ಗಳ ಬುಕಿಂಗ್ ಐಡಿ ನಂಬರ್ ಗಳಿಗೂ ತಾಳೆ ಆಗದೇ ಇರುವುದು ಹಾಗೂ ಒಂದು ಇನ್‌ವಾಯ್ಸ್ಗೆ ಕೆಲವು ಕಡೆಗಳಲ್ಲಿ 10 ಕ್ಕಿಂತ ಮೇಲ್ಪಟ್ಟು ಜನಗಳನ್ನು ದಾಖಲಿಸಿದ್ದು, ಇದು ಚಾರಣ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವುದನ್ನು ಮೇಲ್ನೋಟಕ್ಕೆ ಸಾಬೀತು ಪಡಿಸುತ್ತದೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಬಾಳೆಹೊನ್ನೂರು ಉಪ ವಿಭಾಗ ಇವರ ವರದಿಯಲ್ಲಿ ವಿವರಿಸಿರುವ ಅಂಶಗಳ ಅನುಸಾರ ಈ ಪ್ರಕರಣದಲ್ಲಿ ಶ್ರೀ ಚಂದನಗೌಡ ದ್ಯಾಮನಗೌಡ್ರ, ಉಪ ವಲಯ ಅರಣ್ಯಾಧಿಕಾರಿ ಮತ್ತು ಮೋಜಣಿದಾರು ಇವರು ಈ ತನಿಖೆಯಿಂದ ಕರ್ತವ್ಯಲೋಪ ಎಸಗಿರುವುದು ಹಾಗೂ ಸರ್ಕಾರಿ ಅಧಿಕಾರಿಗಳಿಗೆ ತಕ್ಕದಲ್ಲದ ಅಕ್ರಮಗಳಿಗೆ ಅನುವು ಮಾಡಿಕೊಟ್ಟಿರುವುದು ಮೇಲ್ನೋಟಕ್ಕೆ ಸಾಭೀತಾಗಿರುತ್ತದೆ. ಆದುದರಿಂದ, ಈ ಪ್ರಕರಣದಲ್ಲಿ ಚಂದನಗೌಡ ಸಾಕ್ಷಿಗಳ ನಾಶಕ್ಕೆ ಪ್ರಯತ್ನ ಮಾಡಬಹುದಾದ ಹಾಗೂ ತನಿಖಾ ಕ್ರಮಕ್ಕೆ ಪ್ರಭಾವ ಬೀರುವ ಸಂಭವವಿರುವುದರಿಂದ ಸದರಿಯವರ ಇಲಾಖಾ ವಿಚಾರಣೆ ಬಾಕಿ ಇರಿಸಿ ಸೇವೆಯಿಂದ ಅಮಾನತ್ತು ಪಡಿಸಬೇಕೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ, ಕೊಪ್ಪ ವಿಭಾಗ, ಕೊಪ್ಪ ಇವರು ಶಿಫಾರಸ್ಸು ಮಾಡಿರುತ್ತಾರೆ.

ಅದರಂತೆ “ಉಪ ವಲಯ ಅರಣ್ಯಾಧಿಕಾರಿ ಮತ್ತು ಮೋಜಣಿದಾರ್” ಹುದ್ದೆಯ ನೇಮಕಾತಿ ಪ್ರಾಧಿಕಾರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದು, ಇವರಿಗೆ ಪ್ರದತ್ತವಾದ ಅಧಿಕಾರದನ್ವಯ ಹಾಗೂ ಉಲ್ಲೇಖ (1)ರ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕೊಪ್ಪ ವಿಭಾಗ, ಕೊಪ್ಪ ಇವರ ಶಿಫಾರಸ್ಸನ್ನು ಆಧರಿಸಿ ಚಂದನಗೌಡ ದ್ಯಾಮನಗೌಡ್ರ ವಿಚಾರಣೆ ನಡೆಸಲು ಅನುಕೂಲವಾಗುವಂತೆ ಸದರಿ ನೌಕರರನ್ನು ಕರ್ನಾಟಕ ನಾಗರಿಕ ಸೇವೆ (ವರ್ಗಿಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1957 ರ (ತಿದ್ದುಪಡಿ) ನಿಯಮಗಳನ್ವಯ ಅಮಾನತ್ತಿನಲ್ಲಿಡಲು ತೀರ್ಮಾನಿಸಿ ಈ ಕೆಳಕಂಡ ಆದೇಶ.

ಆದೇಶ

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಚಂದನಗೌಡ ದ್ಯಾಮನಗೌಡ್ರ, ಇವರನ್ನು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ 1957ರ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ 10 ರ ಉಪ ನಿಯಮ (1) (ಸಿ), (ಡಿ) ಹಾಗೂ ಉಪ ನಿಯಮ (3) ರ ಪ್ರಕಾರ ಪ್ರದತ್ತವಾದ ಅಧಿಕಾರದ ಮೇರೆಗೆ ಇವರ ವಿರುದ್ಧ ಇಲಾಖಾ ವಿಚಾರಣೆಯನ್ನು ಬಾಕಿಯಿರಿಸಿ ಇವರನ್ನು ಸರ್ಕಾರದ ಸೇವೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಮಾನತ್ತುಗೊಳಿಸಿದೆ.

ಅಮಾನತ್ತಿನ ಅವಧಿಯಲ್ಲಿ ಸದರಿಯವರು ಕರ್ನಾಟಕ ಸರ್ಕಾರ ಸೇವಾ ನಿಯಮಾವಳಿ 1958ರ ನಿಯಮ 98 (1) ರ ಪ್ರಕಾರ ಮತ್ತು ನಿಯಮ 97, 97-ಎ, 98 (2) ಮತ್ತು 104 ರ ನಿಬಂಧನೆಗಳಿಗೆ ಒಳಪಟ್ಟು ಜೀವನಾಧಾರ ಭತ್ಯೆಯನ್ನು ಪಡೆಯಲು ಅರ್ಹರಿರುತ್ತಾರೆ.
ಅಮಾನತ್ತಿನ ಅವಧಿಯಲ್ಲಿ ಸದರಿಯವರ ಕೇಂದ್ರಸ್ಥಾನ ವಲಯ ಅರಣ್ಯಾಧಿಕಾರಿಯವರ ಕಛೇರಿ, ಕಳಸ ವಲಯ, ಕಳಸ ನಿಗದಿಯಾಗಿದ್ದು, ಈ ಅವಧಿಯಲ್ಲಿ ಇವರು ವಲಯ ಅರಣ್ಯಾಧಿಕಾರಿ, ಕಳಸ ವಲಯ, ಕಳಸ ಇವರ ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡುವಂತಿಲ್ಲ.

Here is the translation:

“DRFO suspended for transferring government money to another woman’s account!
Chikkamagaluru: DRFO Chandan Goudra has been suspended for allegedly transferring money collected at ticket point to another woman’s account through phone pay. He is accused of forgery and cheating the government of Rs 9,000 by selling tickets at Raani Jhari Waterfall and Bandaaje Falls and creating fake online tickets. The investigation is going on. This case is another example of the exploitation of eco-tourism in Chikkamagaluru district.”

You Might Also Like This