Ode to the west wind

Join Us on WhatsApp

Connect Here

ಭರಚುಕ್ಕಿಯಲ್ಲಿ ಹುಚ್ಚಾಟವಾಡಿದರೆ ಬಸ್ಕಿ, ಹುಷಾರ್.!!

WhatsApp
Facebook
Twitter
LinkedIn

ಕೊಳ್ಳೇಗಾಲ: ತಾಲೂಕಿನ ಶಿವನಮುದ್ರದ ಭರಚುಕ್ಕಿ ಜಲಪಾತ ಭೋರ್ಗರೆದು ಧುಮ್ಮಿಕ್ಕುತ್ತಿದೆ. ಜಲಪಾತದ ವೈಭವವನ್ನು ನೋಡಲು ಪ್ರವಾಸಿಗರ ದಂಡೇ ಆಗಮಿಸುತ್ತಿದೆ. ಜಲಪಾತ ತುತ್ತ ತುದಿಯಲ್ಲಿ ನಿಂತು ಫೋ ಟೋ, ಸೆಲ್ಫಿ ಕ್ಲಿಕ್ಕಿಸಿಕೊಂಡು ಹುಚ್ಚಾಟ ಮೆರೆಯುತ್ತಿದ್ದವರಿಗೆ ಭಾನುವಾರ ಪೊಲೀಸರು ಬಸ್ಕಿ ಹೊಡಿಸಿ ಬಿಸಿ ಮುಟ್ಟಿಸಿದ್ದಾರೆ. 

ಕಾವೇರಿ ಜಲಾನಯನ ಪ್ರದೇಶದಲ್ಲಿ ಅಧಿಕ ಮಳೆ ಯಾಗಿರುವ ಹಿನ್ನಲೆ ಕಾವೇರಿ ಮೈದುಂಬಿ ಹರಿ‌ಯುತ್ತಿದೆ. ಸತ್ತೇಗಾಲ ಸಮೀಪವಿರುವ ಶಿವನಸಮುದ್ರ ಗ್ರಾಮದ ಭರಚುಕ್ಕಿ ಜಲಪಾತಕ್ಕೆ ಜೀವ ಕಳೆ ಬಂದಿದ್ದು. ಹಸಿರು ಕಾನನದ ನಡುವೆ ಹಾಲ್ನೊರೆಯಂತೆ ಭರಚುಕ್ಕಿ ಜಲಪಾತ ಧುಮಿಕ್ಕುತ್ತಿದೆ. ಇದನ್ನು ವೀಕ್ಷಿಸಲು ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾ ಸಿಗರು ಆಗಮಿಸುತ್ತಿದ್ದಾರೆ. ಆದರೆ, ಕೆಲವು ಪ್ರವಾ ಸಿಗರು ಬೂದಗಟ್ಟೆ ದೊಡ್ಡಿ ಮೂಲಕ ಭರಚುಕ್ಕಿ ಹಿನ್ನಿರಿಗೆ ಅಕ್ರಮವಾಗಿ ತೆರಳಿ ಪ್ರಾಣದ ಹಂಗನ್ನು ಲೆಕ್ಕಿ ಸದೆ ಜಲಪಾತ ತುದಿಯಲ್ಲಿ ರೀಲ್ಸ್ ಮಾಡುವುದು, ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ದುಸ್ಸಾಹಸ ಮಾಡುತ್ತಿದ್ದರು. ಈ ಬಗ್ಗೆ ತಿಳಿದ ಗ್ರಾಮಾಂತರ ಪೊ ಲೀಸ್ ಠಾಣೆಯ ಪಿಎಸ್ಐ ಗಣೇಶ್ ತಂಡ ಸ್ಥಳಕ್ಕೆ ತೆರಳಿ, ಜಲಪಾತದ ತುದಿಗೆ ಹೋಗಿದ್ದ ಯುವಕರನ್ನು ಕರೆತಂದು ಸಾಮೂಹಿಕವಾಗಿ ಬಸ್ಕಿ ಹೊಡೆಸಿ ಪಾಠ ಕಲಿಸಿದ್ದಾರೆ. ಇನ್ಮುಮ್ಮೆ ಇದೇ ರೀತಿ ನೀರಿನಲ್ಲಿ ಹುಚ್ಚಾ ಟ ಮೆರೆದರೆ ಕ್ರಮವಹಿಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

You Might Also Like This