Ode to the west wind

Join Us on WhatsApp

Connect Here

Written by 12:44 pm NEWS

ಲೋಡ್ ಶೆಡ್ಡಿಂಗ್ ಅವಾಂತರ, ಕರಡಿ ದಾಳಿಗೆ ರೈತರು ತತ್ತರ

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಹಾರೋಗೊಪ್ಪ ಗ್ರಾಮದಲ್ಲಿ ಗುರುವಾರ ಮುಂಜಾನೆ ಗದ್ದೆಗೆ ನೀರು ಹರಿಸಲು ಹೋದ ರೈತ ಸೋಮ್ಲಾ ನಾಯ್ಕ್‌ ಎಂಬುವವರ ಮೇಲೆ ಕರಡಿ ಭೀಕರವಾಗಿ ದಾಳಿ ನಡೆಸಿದೆ.

ತ್ರೀ-ಫೇಸ್ ವಿದ್ಯುತ್ ಪೂರೈಕೆಯ ಸಮಯದಲ್ಲಿ ರೈತ ತಮ್ಮ ಭತ್ತದ ಗದ್ದೆಗೆ ಮೋಟಾರ್ ಹಾಕಲು ತೆರಳಿದ್ದರು. ಈ ವೇಳೆ ತನ್ನ ಮರಿಯೊಂದಿಗೆ ಸಂಚರಿಸುತ್ತಿದ್ದ ಕರಡಿಯೊಂದು ರೈತನನ್ನು ಕಂಡು ಏಕಾಏಕಿ ಹಿಂಬದಿಯಿಂದ ಅಟ್ಯಾಕ್ ಮಾಡಿದೆ. ಕರಡಿಯ ಭೀಕರ ದಾಳಿಯಿಂದಾಗಿ ಕುತ್ತಿಗೆ, ಬೆನ್ನು ಹಾಗೂ ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಜೀವಭಯದ ನಡುವೆಯೂ ರೈತ ಜೋರಾಗಿ ಕಿರುಚಿಕೊಂಡಿದ್ದರಿಂದ ಕರಡಿ ಅಲ್ಲಿಂದ ಓಡಿ ಹೋಗಿದೆ. ರಕ್ತದ ಮಡುವಿನಲ್ಲಿದ್ದ ರೈತ ಹೇಗೋ ಹಾರೋಗೊಪ್ಪ ಬಸ್ ನಿಲ್ದಾಣದ ತಲುಪಿದ್ದಾನೆ. ಅಲ್ಲಿ ಸ್ಥಳೀಯರು ಅವರನ್ನು ಕಂಡು ತಕ್ಷಣವೇ ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ, ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಸಾಗರ ವಿಭಾಗದ ಡಿಸಿಎಫ್ ಮಹಮ್ಮದ್ ಫಯಾಜುದ್ದೀನ್ ಮಾತನಾಡಿ, “ಗಾಯಾಳು ರೈತನಿಗೆ ಇಲಾಖೆಯಿಂದ ಸಿಗುವ ವೈದ್ಯಕೀಯ ಪರಿಹಾರ ನೀಡಲಾಗುವುದು. ಈ ಭಾಗದಲ್ಲಿ ಮತ್ತೆ ಕರಡಿ ಕಾಣಿಸಿಕೊಂಡರೆ ಬೋನು ಇಟ್ಟು ಸೆರೆಹಿಡಿಯಲಾಗುವುದು. ಗ್ರಾಮೀಣ ಭಾಗದಲ್ಲಿ 3-ಫೇಸ್ ವಿದ್ಯುತ್ ಪೂರೈಕೆ ಹೆಚ್ಚಾಗಿ ಮಧ್ಯರಾತ್ರಿ ಅಥವಾ ಮುಂಜಾನೆ ಇರುವುದರಿಂದ ರೈತರು ಅನಿವಾರ್ಯವಾಗಿ ಕತ್ತಲಿನಲ್ಲಿ ಗದ್ದೆಗೆ ಹೋಗಬೇಕಿದೆ. ಇದು ವನ್ಯಜೀವಿಗಳ ದಾಳಿಗೆ ಪ್ರಮುಖ ಕಾರಣವಾಗುತ್ತಿದೆ. ಇದೇ ಮೊದಲ ಘಟನೆಯಾದ್ದರಿಂದ ಅಧಿಕಾರಿಗಳ ಜೊತೆ ಮಾತನಾಡುವುದು ಅಸಾಧ್ಯ. ಜನರಿಗೂ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಈ ಹಿಂದೆ ಭದ್ರಾವತಿ ವಿಭಾಗದಲ್ಲಿ ಇಂತಹ ದಾಳಿಗಳು ನಡೆದಾಗ ಮೆಸ್ಕಾಂಗೆ (MESCOM) ವಿದ್ಯುತ್ ಪೂರೈಕೆ ಸಮಯ ಬದಲಿಸಲು ವಿನಂತಿಸಲಾಗಿತ್ತು. ಕಳೆದ ತಿಂಗಳು ತರೀಕೆರೆ ಸಮೀಪ ಬೈರಾಪುರದಲ್ಲಿ ಚಿರತೆ ದಾಳಿಗೆ ಕಂಗಾಲಾದ ಜನರು ರಾತ್ರಿ ನೀರು ಹಾಯಿಸಲು ಹೋಗುವುದನ್ನೇ ಬಿಟ್ಟಿದ್ದರು. ಅರಣ್ಯದಂಚಿನ ಹಳ್ಳಿಗಳಲ್ಲಿ ವಿದ್ಯುತ್‌ ಪವರ್‌ ಪೂರೈಕೆ ಸಮಯ ಬದಲಿಸುವಂತೆ ಅಧಿಕಾರಿಗಳಿಗೆ ರೈನ್‌ಲ್ಯಾಂಡ್‌ ಮೂಲಕ ಮನವಿ ಮಾಡಿದ್ದರು.

ಕೃಷಿ ಪಂಪ್‌ಸೆಟ್‌ಗಳಿಗೆ ಪೂರೈಕೆಯಾಗುವ ತ್ರೀ-ಫೇಸ್ (3-Phase) ವಿದ್ಯುತ್ ಪೂರೈಕೆಯ ಅಸ್ತವ್ಯಸ್ತ ವೇಳಾಪಟ್ಟಿಯೇ ಈ ದಾಳಿಗೆ ಪರೋಕ್ಷ ಕಾರಣ. ನಿಯಮದಂತೆ ರೈತರಿಗೆ ದಿನಕ್ಕೆ ಕೇವಲ 7 ಗಂಟೆಗಳ ಕಾಲ ಮಾತ್ರ ತ್ರೀ-ಫೇಸ್ ವಿದ್ಯುತ್ ನೀಡಲಾಗುತ್ತಿದೆ. ಆದರೆ, ಈ ಸಮಯವು ಹೆಚ್ಚಾಗಿ ಮಧ್ಯರಾತ್ರಿ ಅಥವಾ ಮುಂಜಾನೆ 3 ರಿಂದ 7 ಗಂಟೆಯವರೆಗೆ ಇರುತ್ತದೆ. ಭತ್ತದ ಗದ್ದೆಗಳಿಗೆ ನೀರು ಹರಿಸಲು ರೈತರು ಅನಿವಾರ್ಯವಾಗಿ ಹಾವು-ಚೇಳು ಹಾಗೂ ವನ್ಯಜೀವಿಗಳ ಭಯದ ನಡುವೆಯೇ ಕತ್ತಲಲ್ಲಿ ಜಮೀನಿಗೆ ಹೋಗಬೇಕಿದೆ.

ವೈಜ್ಞಾನಿಕವಾಗಿ ಮುಂಜಾನೆ ಮತ್ತು ಸಂಜೆಯ ಅವಧಿಯು ಕರಡಿ, ಚಿರತೆಯಂತಹ ವನ್ಯಜೀವಿಗಳು ಆಹಾರ ಮತ್ತು ನೀರನ್ನು ಹುಡುಕುತ್ತಾ ಹೆಚ್ಚು ಸಕ್ರಿಯವಾಗಿರುವ ಸಮಯ (Crepuscular hours). ಸರ್ಕಾರವು ಇದೇ ಸಮಯದಲ್ಲಿ ವಿದ್ಯುತ್ ನೀಡುವುದರಿಂದ, ರೈತ ಮತ್ತು ವನ್ಯಜೀವಿಗಳ ನಡುವಿನ ಮುಖಾಮುಖಿ (Human-Wildlife Conflict) ಅನಿವಾರ್ಯವಾಗುತ್ತಿದೆ.

ಈ ಬಗ್ಗೆ ಅರಣ್ಯ ಇಲಾಖೆಯು ಮೆಸ್ಕಾಂ ಸಂಸ್ಥೆಗೆ ವಿದ್ಯುತ್ ಪೂರೈಕೆಯ ಶಿಫ್ಟ್ ಅನ್ನು ಬದಲಾಯಿಸಲು, ಅಂದರೆ ಹಗಲು ವೇಳೆಯಲ್ಲೇ ಪೂರ್ಣ ಪ್ರಮಾಣದ ವಿದ್ಯುತ್ ನೀಡಲು ಹಲವು ಬಾರಿ ಮನವಿ ಮಾಡಿದೆ. ಆದರೆ, ಲೋಡ್ ಮ್ಯಾನೇಜ್‌ಮೆಂಟ್ ಹೆಸರಿನಲ್ಲಿ ಇಂಧನ ಇಲಾಖೆಯು ಈ ಮನವಿಯನ್ನು ನಿರ್ಲಕ್ಷಿಸುತ್ತಿದೆ. ರೈತರೇ ಆಟೋ ಸ್ಟಾರ್ಟ್‌ ತರಹದ ಉಪಕರಣ ಬಳಸಿ ಹೊಲಕ್ಕೆ ನೀರು ಹಾಯಿಸಬೇಕು. ಪ್ರತೀ ಸಲ ಘಟನೆಗಳು ನಡೆದಾಗ ರೈತರು ಹೊಲಕ್ಕೆ ನೀರು ಹಾಯಿಸಲೇ ಹೋಗಿದ್ದರು ಎಂದು ಹೇಳಲಾಗುವುದಿಲ್ಲ.

Visited 2 times, 2 visit(s) today
[mc4wp_form id="5878"]