Ode to the west wind

Join Us on WhatsApp

Connect Here

Written by 1:40 pm NEWS

ಹೋಮ್ ಸ್ಟೇಗಳ ನೊಂದಣಿ ಕಡ್ಡಾಯ, ತಪ್ಪಿದರೆ..

ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೋಂ ಸ್ಟೇಗಳು ಸರ್ಕಾರದ ಅದೇಶದನ್ವಯ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದ್ದು, ಬಹಳಷ್ಟು ಕಾಲಾವಕಾಶ ನೀಡಿದರೂ ನೋಂದಣಿ ಮಾಡಿರದ ಹೋಂ ಸ್ಟೇ ಮಾಲೀಕರು ಆಗಸ್ಟ್-31ರೊಳಗಾಗಿ ನೋಂದಾಯಿಸಿಕೊಳ್ಳುವುದು.  ತಪ್ಪಿದ್ದಲ್ಲಿ ಅಂತಹ ಹೋಂ ಸ್ಟೇಗಳನ್ನು ರದ್ದುಪಡಿಸಲು ಸೂಕ್ತ ಕ್ರಮ ಕೈಗೊಳ್ಳಾಗುವುದು ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.

2015-20ನೇ ಸಾಲಿನಲ್ಲಿ ಹೋಂ ಸ್ಟೇ ನಡೆಸಲು ನೀಡಿರುವ ಪರವಾನಿಗೆ ಅವಧಿಯು 5 ವರ್ಷಗಳಿಗೆ ಮುಕ್ತಾಯಗೊಳ್ಳುತ್ತಿದ್ದು, ಅಂತಹ ಹೋಂ ಸ್ಟೇಗಳು ಪರವಾನಿಗೆಯನ್ನು ನವೀಕರಿಸುವುದು.  ಈ ಸಂಬಂಧ ಇಲಾಖೆಯು ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಅಂತರ್ಜಾಲ ತಾಣ http://karnatakatourism.org, ಅಥವಾ  http://kttf.karnatakatourism.org ಮುಖಾಂತರ ಅನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಳ್ಳುವುದು.

ಹೋಂ ಸ್ಟೇ ಪರಿವೀಕ್ಷಣೆಗಾಗಿ ಅಧಿಕಾರಿಗಳು ಭೇಟಿ ನೀಡಿದಾಗ ಹೋಂ ಸ್ಟೇ ಪ್ರಮಾಣ ಪತ್ರ ಅಥವಾ ನೋಂದಣಿಗಾಗಿ ಅರ್ಜಿ ಸಲ್ಲಿಸಿರುವ ದಾಖಲಾತಿಗಳನ್ನು ಹಾಜರುಪಡಿಸುವುದು. ಇಲ್ಲವಾದಲ್ಲಿ ಮಾಲೀಕರ ಮೇಲೆ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.  ಅಲ್ಲದೇ ಅನುಮತಿ ಅಥವಾ ಪರವಾನಿಗೆ ಪಡೆಯದೇ ಅನಧಿಕೃತವಾಗಿ ನಡೆಸುತ್ತಿರುವ ಹೋಂ ಸ್ಟೇಗಳ ಬಗ್ಗೆ ಸಾರ್ವಜನಿಕರಲ್ಲಿ ಮಾಹಿತಿ/ದೂರು ಇದ್ದಲ್ಲಿ ಅವುಗಳ ವಿವರಗಳನ್ನು ಪತ್ರ ಮುಖೇನ ಸಹಾಯಕ ನಿರ್ದೇಶಕರ ಕಚೇರಿ, ‘ಎ’ ಬ್ಲಾಕ್, 3ನೇ ತಿರುವು, ಗೋಪಾಲಗೌಡ ಬಡಾವಣೆ, ಶಿವಮೊಗ್ಗ-577205, ದೂ.ಸಂ.: 08182-251444 ಅಥವಾ ಇ-ಮೇಲ್ adtoursimsmg@gmail.com ಗೆ ದೂರ ನೀಡಬಹುದಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಎಲ್ಲಾ ಜಿಲ್ಲೆಗಳೂ ಸಹ ಆಯಾ ಜಿಲ್ಲೆಗಳಲ್ಲಿ ಈ ಆದೇಶ ನೀಡಿದ್ದು, ಅನಧಿಕೃತ ಸ್ಟೇ ಮಾಲೀಕರು ತುರ್ತಾಗಿ ಗಮನ ಹರಿಸಬೇಕು.

Visited 1 times, 1 visit(s) today
[mc4wp_form id="5878"]