ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಹಲಸುಲಿಗೆ ಗ್ರಾಮದ ಹೊನ್ನೂರು ಎಸ್ಟೇಟ್‌ನಲ್ಲಿ ಇಂದು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿದೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗೆ ನಡೆದ ಕಾರ್ಯಾಚರಣೆಯಲ್ಲಿ
ಮೂರು ಬಾರಿ ಇಂಜೆಕ್ಷನ್ ಡಾರ್ಟ್ ಮಾಡಿದರು ಕಾಡಾನೆ ನಿಲ್ಲಿಸಲು ಸಾಧ್ಯವಾಗಲಿಲ್ಲ. ನಂತರ ಕಾಲಿಗೆ ಹಗ್ಗ ಕಟ್ಟಿ ಹಿಡಿದು ಕಾಡಾನೆಯನ್ನು ಸುತ್ತುವರಿದ ಸಾಕಾನೆಗಳು ಕಾಲರ್ ಅಳವಡಿಕೆಗೆ ಸಹಕರಿಸಿದವು. ನಿನ್ನೆಯಿಂದ ( ಮೇ 15) ಅಭಿಮನ್ಯು, ಪ್ರಶಾಂತ, ಅಜೇಯ, ವಿಕ್ರಂ, ಮಹೇಂದ್ರ ಎಂಬ ಐದು ಸಾಕಾನೆಗಳೊಂದಿಗೆ
ಮೂರು ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿದೆ. ಈ ರೇಡಿಯೋ ಕಾಲರ್ ಅಳವಡಿಕೆಯಿಂದ ಕಾಡಾನೆಗಳ ಚಲನವಲನದ ಬಗ್ಗೆ ಸ್ಥಳೀಯರಿಗೆ ಮಾಹಿತಿ ರವಾನೆಯಾಗಲಿದೆ.
ವಿಡಿಯೊ: