ರಾತ್ರಿ ಸಂಚಾರ ನಿಷೇಧವಿರುವ ಗುಂಡ್ಲುಪೇಟೆ ಮದ್ದೂರು ಅರಣ್ಯ ವಲಯದಲ್ಲಿ ತಮಿಳುನಾಡಿನಲ್ಲಿ ಲಾರಿ ಆನೆಯನ್ನ ಬಲಿತೆಗೆದುಕೊಂಡಿದೆ. ಲಾರಿ ಚಾಲಕನ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ ವಾಹನವನ್ನ ವಶಕ್ಕೆ ಪಡೆದುಕೊಂಡಿದೆ. ಆದರೆ ಆನೆ ಸಾವಿಗೆ ಯಾರು ಹೊಣೆ.. ? ಸದ್ಯ ಈ ಭಾಗದಲ್ಲಿ ರಾತ್ರಿ ಸಂಚಾರಕ್ಕಿರುವ ನಿರ್ಬಂಧಗಳೇನು..?

ಪತ್ರಕರ್ತರು ಹಾಗೂ ಪರಿಸರ ಹೋರಾಟಗಾರರು ಆಗಿರುವ ಜೋಸೆಫ್ ಹೂವರ್ ತಮ್ಮ ಅಸಮಾಧಾನ ಹೀಗೆ ಹೊರಹಾಕಿದ್ದಾರೆ.
ಗುಂಡ್ಲುಪೇಟೆ ಬಂಡಿಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ( NH 766) ಕೇರಳ ರಾಜ್ಯವನ್ನು ಕನೆಕ್ಟ್ ಮಾಡುತ್ತೆ. ಇಲ್ಲಿ ರಾತ್ರಿ 9:00 ನಂತರ ವಾಹನ ಸಂಚಾರ ನಿಷೇಧವಿದೆ. ಆದರೂ ಡೆಡ್ ಲೈನ್ ಒಳಗೆ ತಲುಪಬೇಕೆಂಬ ಹಪಾಪಿತದಿಂದ ವೇಗವಾಗಿ ಸಂಚರಿಸುವ ವಾಹನಗಳು ಅನೇಕ ಪ್ರಾಣಿಗಳನ್ನು ಪ್ರತಿದಿನ ಕೊಲ್ಲುತ್ತಿವೆ. ಒಂದು ದೈತ್ಯಾಕಾರದ ಆನೆ ಈ ಚಾಲಕನಿಗೆ ಕಂಡಿಲ್ಲ ಎಂದರೆ ಹುಲಿ ಚಿರತೆ ಯಾವುದೇ ಪ್ರಾಣಿ ಬಂದರೂ ಈ ವ್ಯಕ್ತಿಗಳು ಕೊಲ್ಲದೆ ಬಿಡುವುದಿಲ್ಲ..! ಒಂಭತ್ತು ಗಂಟೆಯಿಂದ ಬೆಳಗ್ಗೆ 6:00 ವರೆಗೆ ನಿಷೇಧವಿದ್ದರೂ ಕೂಡ ಈ ತರಹದ ಘಟನೆಗಳು ಸಂಭವಿಸುತ್ತಿವೆ. ವಾಹನಗಳು ವೇಗವಾಗಿ ಚಾಲನೆ ಮಾಡುತ್ತಿರುವುದೇ ಮೊದಲ ಕಾರಣ. ನಿಷೇಧಿತ ಸಮಯದೊಳಗೆ ಅರಣ್ಯ ವಲಯವನ್ನು ದಾಟಿಕೊಂಡು ಹೋಗಬೇಕು ಎಂಬ ತರಾತುರಿಯಲ್ಲಿ ಚಾಲಕರು ಇಂತಹ ಅವಘಡಗಳನ್ನು ಸೃಷ್ಟಿಸುತ್ತಿದ್ದಾರೆ.

ಇದಕ್ಕೆ ಒಂದೇ ಮಾರ್ಗ ಎಂದರೆ ನಾಗರಹೊಳೆ ಅಭಯಾರಣ್ಯದಂತೆ ಸಂಜೆ ಆರರಿಂದ ಬೆಳಗ್ಗೆ 6:00 ವರೆಗೆ ಸಂಪೂರ್ಣವಾಗಿ ಈ ಹೆದ್ದಾರಿಯನ್ನು ಬಂದ್ ಮಾಡಬೇಕು. ಈ ಹೆದ್ದಾರಿಗಿರುವ ತೊಡಕು ಎಂದರೆ ಕೇರಳ ರಾಜ್ಯಕ್ಕೆ ಇರುವ ಸಂಪರ್ಕ. ಪ್ರತಿದಿನ ಗೂಡ್ಸ್ ವಾಹನಗಳು ಸಾಕಷ್ಟಿಲ್ಲಿ ಸಂಚರಿಸುತ್ತವೆ. ಸುಪ್ರೀಂಕೋರ್ಟಲ್ಲಿ ಕೇರಳ ಸರ್ಕಾರ ಇದನ್ನೇ ಮುಂದಿಟ್ಟುಕೊಂಡು ಪ್ರಶ್ನಿಸಿತ್ತು. ನಾವು ರಾತ್ರಿ ಸಂಪೂರ್ಣ ಬ್ಯಾನ್ ಮಾಡಿ ಎಂದು ಹೇಳುತ್ತಿದ್ದೇವೆ. ಆದರೆ ಕೇರಳ ಸರ್ಕಾರದ ಒತ್ತಡದಿಂದ ಒಂಭತ್ತು ಗಂಟೆವರೆಗೂ ಅವಕಾಶ ನೀಡಲಾಗಿದೆ. ಈ ಮಿತಿ ಕಡಿಮೆಗೊಳಿಸಿದಾಗ ಮಾತ್ರ ಈ ಪ್ರಾಣಿಗಳನ್ನ ಉಳಿಸಿಕೊಳ್ಳಬಹುದು ಎಂದು ಹೂವರ್ ಹೇಳಿದರು.
ವಿಡಿಯೋ: