Rain Land

Ode to the west wind

Join Us on WhatsApp

Connect Here

ಮಿಲಿಯನ್ ಮೌಲ್ಯದ ಹೋರಿಗೆ ಬರ್ತ್ ಡೇ..

WhatsApp
Facebook
Twitter
LinkedIn

ಬಯಲುಸೀಮೆಯ ಜಾನಪದ ಕ್ರೀಡೆಗಳು, ಸಂಪ್ರದಾಯಗಳನ್ನ ಒಳಗೊಂಡಿರುವ ಹಾವೇರಿ, ದಾವಣಗೆರೆ ಜಿಲ್ಲೆಯ ಗಡಿಗೆ ಹೊಂದಿಕೊಂಡ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಹೋರಿ ಬೆದರಿಸುವ ಹಬ್ಬಕ್ಕೆ ಬಹಳ ಪ್ರಸಿದ್ಧಿ ಪಡೆದಿದೆ. ಆಶ್ಚರ್ಯ ಅನಿಸಬಹುದು, ತಮಿಳುನಾಡಿನಿಂದ ಶಿಕಾರಿಪುರಕ್ಕೆ ಬಂದು ಜಲ್ಲಿಕಟ್ಟು ಸ್ಪರ್ಧೆಗೆ ಹೋರಿಗಳನ್ನ ಲಕ್ಷಗಟ್ಟಲೇ ನೀಡಿ ಕೊಂಡೊಯ್ಯುತ್ತಾರೆ. ಅಂತಹದೊಂದು ರೈತಾಪಿ ಕುಟುಂಬಗಳಿರುವ ಹಳ್ಳಿ ಕುಸ್ಕೂರು.  ಶಿಕಾರಿಪುರ ಪಟ್ಟಣದಿಂದ ಹತ್ತು ಕಿಲೋಮೀಟರ್ ಅಂತರದಲ್ಲಿ ಸಿಗುವ ಈ ಹಳ್ಳಿಯಲ್ಲಿ ಹಬ್ಬದ ಹೋರಿಗಳೆಂದರೆ  ಒಡನಾಡಿಗಳಂತೆ.

ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಬ್ಬದ ಹೋರಿಗಳನ್ನ ಬೆಳೆಸುತ್ತಾರೆ. ಅವುಗಳನ್ನ ದೀಪಾವಳಿ ನಂತರ ಆರಂಭವಾಗುವ ಹೋರಿ ಬೆದರಿಸುವ ಸ್ಪರ್ಧೆಗಳಿಗೂ ಚಾಚೂತಪ್ಪದೇ ಒಯ್ಯುತ್ತಾರೆ.

ಶಿಕಾರಿಪುರ ಕುಸ್ಕೂರು ಗ್ರಾಮದಲ್ಲಿ ಪ್ರಳಯಾಂತಕ 184 ಹೆಸರಿನ ಆರು ವರ್ಷದ ಹೋರಿ ಇದೆ. ಇದು ಹಾವೇರಿ, ಶಿವಮೊಗ್ಗ, ದಾವಣಗೆರೆ, ಭಾಗದಲ್ಲಿ ಜರುಗುವ ಹೋರಿ ಹಬ್ಬಗಳಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಬಸವರಾಜಪ್ಪ – ಷಣ್ಮುಖಪ್ಪ ಚಿಕ್ಕಳ್ಳಿ ರೈತ ಕುಟುಂಬ 2016 ರಲ್ಲಿ ಅಜ್ಜಂಪುರದಿಂದ ತಂದು ಸಾಕಿರುವ ಹೋರಿಗೆ ಭಾನುವಾರ ಹುಟ್ಟುಹಬ್ಬದ ಸಂಭ್ರಮ. ಇಡೀ ಕುಸ್ಕೂರು ಗ್ರಾಮದಲ್ಲಿ ಹಬ್ಬದ ವಾತಾವರಣ ಏರ್ಪಟ್ಟಿತ್ತು. ಗ್ರಾಮಸ್ಥರು ಆಗಮಿಸಿ ಪೂಜೆ ಸಲ್ಲಿಸಿದರು.‌


ಜಲ್ಲಿಕಟ್ಟು ಆಯೋಜಕರಿಂದ ಸುಮಾರು ಇಪ್ಪತ್ತೆಂಟು ಲಕ್ಷ ಮೌಲ್ಯ ಗಿಟ್ಟಿಸಿರುವ ಪ್ರಳಯಾಂತಕನಿಗೆ ಮಧ್ಯ ಕರ್ನಾಟಕದಲ್ಲಿ ಅಪಾರ ಅಭಿಮಾನಿಗಳಿದ್ದು ನೆರೆದ‌ ಜನರೇ ಸಾಕ್ಷಿಯಾಗಿದ್ದರು.

ಹೋರಿ ಮಾಲೀಕರ ಷಣ್ಮುಖ ಮಾತನಾಡಿ, ಹೋರಿ ಅಂದರೆ ಪಂಚಪ್ರಾಣ. ಮಗನಂತೆ ಸಾಕ್ತೀನಿ ಎಂದು ಮುಗ್ಧ ಮಾತುಗಳಲ್ಲಿ ಹೇಳಿದರು.

ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಅರುಣ್ ತಮ್ಮ ಮನೆಯ ಹೋರಿ ಗಳಿಸಿರುವ ಖ್ಯಾತಿ ಬಗ್ಗೆ ವಿವರಿಸಿದರು.

ರಾಕೇಶ್ ಕೂಡ ಹೋರಿ ಆರೈಕೆ ಹಾಗೂ  ಪ್ರಳಯಾಂತಕನ ಖದರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಡಿಯೋ ನೋಡಿ, ಚಾನೆಲ್ subscribe ಮಾಡಿ

You Might Also Like This