ಶೃಂಗೇರಿ ತಾಲೂಕು ಹರೇ ಬಿಳಲು ಗ್ರಾಮದಲ್ಲಿ ಸ್ಥಳೀಯರೇ ಸೇತುವೆ ನಿರ್ಮಿಸಿಕೊಂಡಿದ್ದಾರೆ. ಸರ್ಕಾರ ನಂಬಿ ಕೂತಿದ್ರೆ ಮೊಮ್ಮಕ್ಕಳ ಕಾಲಕ್ಕೂ ಸೇತುವೆ ಆಗ್ತಿತ್ತೋ ಇಲ್ವೋ. ಆದ್ರೆ, ಇವ್ರು ತಾವೇ ಕಾಲು ಸಂಕ ನಿರ್ಮಿಸಿಕೊಂಡು ಸರ್ಕಾರಕ್ಕೆ ಸಡ್ಡು ಹೊಡೆದಿದ್ದಾರೆ.

ಈ ಸಂಕ ಇರದಿದ್ರೆ ಇವರಿಗೆ ಬದುಕೇ ಇಲ್ಲ. ಸೇತುವೆಗಾಗಿ ಹತ್ತಾರು ವರ್ಷಗಳಿಂದ ಮನವಿ ಮಾಡಿದ್ರು ಯಾರೂ ಕೇರ್ ಮಾಡಿಲ್ಲ. ವಿದ್ಯಾರ್ಥಿಗಳು ಓದಬೇಕಿತ್ತು. ಎಲ್ಲಾ ಕೆಲಸಕ್ಕೂ ಜನ ಇದೇ ನದಿಯನ್ನ ದಾಟಿಯೇ ಹೋಗ್ಬೇಕಿತ್ತು. ಬೇಸಿಗೆಯಲ್ಲೇ ಈ ನದಿ ನೀರು ಎದೆ ಮಟ್ಟಕ್ಕಿರುತ್ತೆ. ಮಳೆಗಾಲದಲ್ಲಿ ನೀವೇ ಊಹಿಸಿ. ಬೇಸಿಗೆಯಲ್ಲಿ ಈ ನದಿ ದಾಟಬೇಕಾದ್ರೆ ಜೀವವನ್ನ ಪಣಕ್ಕಿಟ್ಟು ದಾಟಬೇಕು. ಮನವಿ ನೀಡಿ ರೋಸಿ ಹೋಗಿದ್ದ ಜನ ಕಾಲುಸಂಕ ನಿರ್ಮಿಸಿಕೊಂಡರು. ಮರದ ಕಂಬಗಳನ್ನ ತಂದು ನದಿಗೆ ಅಡ್ಡಲಾಕಿ, ಹಗ್ಗ ಕಟ್ಟಿ, ಮೊಳೆ ಹೊಡೆದು, ತಿಂಗಳಿಂದ ಹತ್ತಾರು ಜನ ಶ್ರಮಪಟ್ಟು ಪುಟ್ಟದೊಂದು ಕಾಲು ಸಂಕವನ್ನ ನಿರ್ಮಿಸಿಕೊಂಡಿದ್ದಾರೆ. ಇಚ್ಛಾಶಕ್ತಿ ಇದ್ರೆ ಏನ್ ಬೇಕಾದ್ರು ಮಾಡಬಹುದು. ನಾವೇ ಹೀಗೊಂದು ಸೇತುವೆ ನಿರ್ಮಿಸಿಕೊಳ್ಳಬಹುದು ಅಂದ್ರೆ ಸರ್ಕಾರದ ಅನುದಾನದಲ್ಲಿ ನಮ್ಮೂರಿಗೊಂದು ಶಾಶ್ವತ ತೂಗು ಸೇತುವೆ ಮಾಡಿಕೊಡಲು ನಿಮಗೇನು ಕಷ್ಟ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಸದ್ಯ ಕಾಲುಸಂಕ ನಿರ್ಮಾಣದಿಂದ ಹರೇ ಬಿಳಲು-ನೆಮ್ಮಾರು ಗ್ರಾಮಕ್ಕೆ ಸಂಪರ್ಕ ಸಿಕ್ಕಿದಂತಾಗಿದೆ. ಈ ಗ್ರಾಮದಲ್ಲಿ ಸುಮಾರು 50 ಕ್ಕೂ ಹೆಚ್ಚು ಮನೆಗಳಿದ್ದು, ಜನರು ಗ್ರಾಮದಿಂದ ನೆಮ್ಮಾರು ಮೂಲಕ ಶೃಂಗೇರಿ ಪಟ್ಟಣಕ್ಕೆ ಬರಲು ಸುಲಭವಾದಂತಾಗಿದೆ.
ಈ ಕುರಿತಾದ ವಿಡಿಯೋ ತುಣುಕೊಂದು ಇಲ್ಲಿದೆ :