ಹಿಡಿದ ಹಾವಿಗೆ ಮುತ್ತಿಡಲು ಹೋಗಿ ವ್ಯಕ್ತಿಯೊಬ್ಬ ಹಾವಿನಿಂದ ತುಟಿಗೆ ಕಚ್ಚಿಸಿಕೊಂಡಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ.

ಭದ್ರಾವತಿಯ ಅಲೆಕ್ಸ್ ಎಂಬಾತ ನಾಗರ ಹಾವನ್ನು ಹಿಡಿದು ಮುತ್ತಿಡುವಾಗ ಹಾವು ಏಕಾಏಕಿ ತಿರುಗಿ ಆತನ ತುಟಿಗೆ ಕಚ್ಚಿದೆ. ಅಲೆಕ್ಸ್ ಹಾಗೂ ರೋನಿ ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ಸಂರಕ್ಷಣೆ ಮಾಡುತ್ತಿದ್ದರು. ಭದ್ರಾವತಿ ಬೊಮ್ಮನಕಟ್ಟೆಯ ಮದುವೆ ಮನೆಯಲ್ಲಿ ಒಟ್ಟಿಗೆ ಎರಡು ನಾಗರ ಹಾವು ಕಾಣಿಸಿಕೊಂಡಿದೆ. ಈ ಎರಡು ಹಾವುಗಳನ್ನು ಹಿಡಿದಿದ್ದು, ಈ ವೇಳೆ ಒಂದು ಹಾವಿಗೆ ಗಾಯವಾಗಿದೆ. ಈ ವೇಳೆ ಜನರ ಎದುರೇ ಅಲೆಕ್ಸ್ ಒಂದು ಹಾವಿಗೆ ಮುತ್ತಿಕ್ಕಲು ಹೋಗಿದ್ದ, ಹಾವು ತಿರುಗಿ ಕಚ್ಚಿದೆ. ಹಾವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ನಂತರ ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಅಲೆಕ್ಸ್, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಬಂದು ದಾಖಲಾಗಿದ್ದ. ಚಿಕಿತ್ಸೆ ಪಡೆದು ಅಲೆಕ್ಸ್ ಮನೆಗೆ ವಾಪಸ್ ಆಗಿದ್ದಾರೆ. ನಾಗರ ಹಾವುಗಳು ವಿಷಕಾರಿಯೂ ಹೌದು ಅಪಾಯಕಾರಿಗೂ ನಿಜ..! ಉರಗ ಸಂರಕ್ಷರು, ಹಾವುಗಳ ರಕ್ಷಣೆ ಮಾಡುವುದಷ್ಟೇ ಮಾಡಿದರೆ ಪರವಾಗಿಲ್ಲ. ಜನರ ಎದುರು ಈ ತರಹ ಸ್ಟಂಟ್ ಮಾಡುವುದು ಸರಿ ಅಲ್ಲ. ಕಾನೂನು ಬಾಹಿರವೂ ಹೌದು.!
ವಿಡಿಯೋ ತುಣುಕಿಗೆ ಇಲ್ಲಿ ಕ್ಲಿಕ್ ಮಾಡಿ…