ಚಿಕ್ಕಮಗಳೂರಿನಲ್ಲಿ ಕೋಳಿಗೂಡಿನಲ್ಲಿ ಸಿಕ್ಕ ಭಾರಿ ಗಾತ್ರದ ಗೋಧಿ ನಾಗರಹಾವನ್ನ ಕಂಡ ರೈತ ಕುಟುಂಬ ಉರಗ ತಜ್ಞ ಹರೀಂದ್ರಾಗೆ ಫೋನ್ ಮಾಡಿ ವಿಷಯ ತಿಳಿಸಿತ್ತು. ಉರಗ ರಕ್ಷಣೆಗೆ ಬಂದ ಹರೀಂದ್ರಾಗೆ ಶಾಕ್ ಕಾದಿತ್ತು. ಹಾವಿನ ಗಾತ್ರವೇ ಆರೂವರೆ ಅಡಿ ಇತ್ತು. ಇಷ್ಡು ಉದ್ದದ ಗೋಧಿ ನಾಗರ ಉರಗ ತಜ್ಞ ನೋಡಿಯೇ ಇರಲಿಲ್ಲವಂತೆ…!!
ಎನ್ ಆರ್ ಪುರ ತಾಲೂಕಿನ ಕಾರೆಹಳ್ಳಿಯ ಶಂಕರ್ ಎಂಬುವರ ಮನೆಯ ಕೋಳಿ ಗೂಡಿನಲ್ಲಿದ್ದ ಗೋಧಿ ನಾಗರಹಾವನ್ನ
ಉರಗ ತಜ್ಞ ಹರಿಂದ್ರಾ ರಕ್ಷಿಸಿದ್ದಾರೆ. ಹಾವಿನ ಉದ್ದ 6.5 ಉದ್ದವಿತ್ತು. ಈ ತನಕ ಸಾವಿರಾರು ಹಾವುಗಳನ್ನು ಸೆರೆ ಹಿಡಿದಿರುವ ಹರೀಂದ್ರಗೆ ಹಾವಿನ ಉದ್ದ ಅಚ್ಛರಿ ಮೂಡಿಸಿತು.

ಕಳೆದ 15 ದಿನಗಳಿಂದ ಕೋಳಿಗೂಡಿನಲ್ಲಿದ್ದ ಹತ್ತಾರು ಕೋಳಿಗಳು ಸತ್ತಿದ್ದವು. ಯಾರೋ ವಿಷ ಹಾಕಿ ಕೋಳಿಗಳನ್ನು ಸಾಯಿಸುತ್ತಿದ್ದಾರೆ ಎಂದು ಶಂಕರ್ ಕುಟುಂಬ ಭಾವಿಸಿತ್ತು. ಅಕ್ಕಪಕ್ಕದ ಮನೆಯವರ ಕೋಳಿಗಳೂ ಕೂಡ ಸಾಯುತ್ತಿದ್ದಂತೆ ಮನೆಯವರು ಎಚ್ಚೆತ್ತರು. ಪಹರೆ ಮಾಡಿ ಹಾವನ್ನ ಕಂಡು ಹಿಡಿದು ಉರಗ ತಜ್ಞಗೆ ಮಾಹಿತಿ ನೀಡಿದರು. ಹೀಗೆ ಕೋಳಿ ಸಾವಿಗೆ ಕಾರಣವಾದ ಗೋಧಿ ನಾಗರ ಸೆರೆಸಿಕ್ಕಿದೆ.