ಈ ವರ್ಷ ಚಿಕ್ಕಮಗಳೂರಲ್ಲಿ ಆನೆ ಕಾಟ ನಿವಾರಣೆ ಕಷ್ಟ ಎನಿಸುತ್ತಿದೆ. ಬೇಲೂರು ಕಡೆಯಿಂದ ಲಗ್ಗೆ ಇಟ್ಟಿರೋ ಬೀಟಮ್ಮ ದಂಡಿಗೆ ನೆಲೆ ಕಲ್ಪಿಸಲು ಅರಣ್ಯ ಇಲಾಖೆ ಹರಸಾಹಸಪಡುತ್ತಿದ್ದಾರೆ. ಇನ್ನೊಂದೆಡೆ ಭದ್ರಾ ನದಿ ಹಿನ್ನೀರು ಇಳಿಕೆ ಹಿನ್ನೆಲೆ ಆನೆಗಳ ಓಡಾಟ ಸರಾಗವಾಗಿದೆ. ಈ ಭಾಗದ ಜನರು ಸ್ವಯಂಪ್ರೇರಿತ ಬೇಲಿ ಮಾಡಿಕೊಳ್ಳುತ್ತಿದ್ದಾರೆ.
ಎನ್.ಆರ್.ಪುರದ ಭಾಗದಲ್ಲಿ ಭದ್ರಾ ಹಿನ್ನೀರು ದಾಟಿ, ಕಾಡಂಚಿನ ತೋಟಗಳಲ್ಲಿ ಸುಮಾರು ಹದಿನೇಳು ಆನೆಗಳು ಬೀಡು ಬಿಟ್ಟಿವೆ. ಕಳೆದೊಂದು ತಿಂಗಳಿಂದ ಆನೆ ಹಾವಾಳಿಗೆ ಹೈರಾಣಾಗಿರುವ ಹಳುವಳ್ಳಿ ಜನರು ಬೆಳೆ, ಮನೆ ಉಳಿಸಿಕೊಳ್ಳಲು ಐಬೆಕ್ಸ್ ಬೇಲಿ ಮಾಡಿಕೊಳ್ಳುತ್ತಿದ್ದಾರೆ.

ಭದ್ರಾ ನದಿ ದಾಟಿ ಧಾವಿಸುತ್ತಿರೋ ಆನೆಗಳು ಪ್ರತೀ ದಿನ ಒಂದೊಂದು ಹಳ್ಳಿಯಲ್ಲಿ ಕಾಣಿಸಿಕೊಳ್ಳುತ್ತಿವೆ. ಹಳುವಳ್ಳಿಯಿಂದ ಎನ್.ಆರ್.ಪುರ ತಾಲೂಕು ಕೇಂದ್ರಕ್ಕೆ ಒಂದೇ ಒಂದು ಕಿ.ಮೀ ದೂರವಿದೆ. ಆನೆ ತಾಲೂಕು ಕೇಂದ್ರಕ್ಕೆ ಬರುವ ದಿನಗಳೂ ದೂರವಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿದರೂ ಕ್ಯಾರೆ ಎನ್ನುತ್ತಿಲ್ಲ ಕಾಡಾನೆಗಳು. ನೂರಾರು ಎಕರೆ ಅಡಕೆ, ತೆಂಗು, ಬಾಳೆ, ಭತ್ತದ ಗದ್ದೆಗಳನ್ನ ಮಾಶ ಮಾಡಿರೋದಾಗಿ ರೈತರು ಆರೋಪಿಸಿದ್ದಾರೆ. ಅರಣ್ಯ ಅಧಿಕಾರಿಗಳು ಬರ್ತಾರೆ
ಫೋಟೋ ಹೊಡ್ಕಂಡು ಹೋಗ್ತಾರಷ್ಟೆ ಎನ್ನುತ್ತಾರೆ.
ಇತ್ತ..,
ಚಿಕ್ಕಮಗಳೂರು ನಗರದ ಹೊರವಲಯ ಇಂದಾವರ ಗ್ರಾಮದಲ್ಲಿ ಬೀಟಮ್ಮ ಆನೆ ಹಿಂಡು ರಸ್ತೆಗಳಲ್ಲಿ ಓಡಾಡುತ್ತಿರುವ ದೃಶ್ಯಗಳು ಸಿ ಸಿ ಟಿವಿಯಲ್ಲಿ ಸೆರೆಯಾಗಿವೆ. ಕಳೆದ ಎಂಟು, ಹತ್ತು ದಿನಗಳಿಂದ ಇಂದಾವರ ಗ್ರಾಮದ ಸುತ್ತ ಬೀಡು ಬಿಟ್ಟಿರುವ ಕಾಡಾನೆಗಳು, ಕಾಫಿ ತೋಟ, ಮನೆ ಕಾಂಪೌಂಡ್, ಕಾಫಿ ಬೆಳೆಯನ್ನ ಸಂಪೂರ್ಣ ನಾಶ ಮಾಡಿವೆ. ಈ ಎಲ್ಲಾ ಆನೆಗಳನ್ನ ಭದ್ರಾ ದಲ್ಲಿ ಕೂಡಿ ಹಾಕುವುದೂ ಸಹ ದುಸ್ತರ. ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಆನೆಗಳು ಮುಖ ಮಾಡಿದರೆ ಅರೆ ಮಲೆನಾಡು ಭಾಗದವರೆಗೆ ಬೆಳೆ ನಾಶಕ್ಕೆ ಅಣಿಯಾಗಬೇಕಿದೆ.