Ode to the west wind

Join Us on WhatsApp

Connect Here

ಪರಿಸರ ಪ್ರೇಮಿಗಳ ಮನವಿಗೆ ಸ್ಪಂದನೆ: ಆಫ್ ರೋಡ್ Rally ತನಿಖೆಗೆ ಖಂಡ್ರೆ ಆದೇಶ:

WhatsApp
Facebook
Twitter
LinkedIn

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ, ಬಾಳೂರು ಭಾಗದಲ್ಲಿ ಮಿತಿಮೀರಿದ ಆಫ್ ರೋಡ್ ಜೀಪ್ ರ್ಯಾಲಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪರಿಸರಾಸಕ್ತರ ವಿರೋಧ ಹಾಗೂ ಮಾಧ್ಯಮಗಳ ವರದಿ ಗಮನಿಸಿರುವ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆಯವರ ಕಾರ್ಯಾಲಯ ಗಂಭೀರವಾಗಿ ತೆಗೆದುಕೊಂಡಿದ್ದು ಈಗಾಗಲೇ ಆಯೋಜನೆಗೊಂಡ ರ್ಯಾಲಿಗಳ ಬಗ್ಗೆಯೂ ವರದಿ ನೀಡುವಂತೆ ಸೂಚಿಸಲಾಗಿದೆ.

ಅರಣ್ಯ ಹಾಗೂ ಪರಿಸರ ಖಾತೆ ಸಚಿವ ಈಶ್ವರ ಬಿ.ಖಂಡ್ರೆ ಹೊರಡಿಸಿರುವ ಟಿಪ್ಪಣಿ ಹೀಗಿದೆ.

ಪಶ್ಚಿಮಘಟ್ಟ ಮತ್ತು ಅರಣ್ಯ ಮೋಜು, ಮಸ್ತಿಯ ತಾಣಗಳಲ್ಲ. ಈ ಪ್ರದೇಶದಲ್ಲಿ ನೂರಾರು ಪ್ರಭೇದದ ಖಗ, ಮೃಗ, ಕೀಟ, ಸಸ್ಯ ಸಂಕುಲ ಇರುತ್ತದೆ. ಇವುಗಳೆಲ್ಲದರ ಸಂರಕ್ಷಣೆಯ ಹೊಣೆ ಅರಣ್ಯ ಇಲಾಖೆಯ ಮೇಲಿದೆ. ಆದರೆ, ದಿ.31.08.2024ರಂದು ಮೂಡಿಗೆರೆ ತಾಲೂಕು ಬಾಳೂರು ಸಮೀಪದ ಬೈರಾಪುರ ಹೊಸಕೆರೆಯ 9 ಗುಡ್ಡಗಳ ವ್ಯಾಪ್ತಿಯಲ್ಲಿ ಅದೂ ಆನೆ ಕಾರಿಡಾರ್ ಇರುವ ಕಾಡಿನೊಳಗೆ ಅಕ್ರಮವಾಗಿ ಪ್ರವೇಶಿಸಿ. ಫೋರ್ ವೀಲ್ ಡ್ರೈವ್ ವಾಹನಗಳ rally ನಡೆಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದ್ದು, ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಈ rallyಯಲ್ಲಿ ಸುಮಾರು 52 ವಾಹನಗಳು ಭಾಗಿಯಾಗಿದ್ದವು ಎಂಬ ಮಾಹಿತಿ ಇದ್ದು, ಈ rallyಯಿಂದ ಪರಿಸರದ ಹಾನಿಯ ಬಗ್ಗೆ ಸಿಸಿಎಫ್ ದರ್ಜೆಯ ಅಧಿಕಾರಿಯಿಂದ ಪರಿಶೀಲನೆ ನಡೆಸಿ, ಅರಣ್ಯದೊಳಗೆ rallyಯಲ್ಲಿ ನಡೆದಿದ್ದಲ್ಲಿ ಅರಣ್ಯಸಂರಕ್ಷಣಾ ಕಾಯಿದೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ಪ್ರಕರಣ ದಾಖಲಿಸಲು ಮತ್ತು ಪರಿಸರ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಸಾರ್ವಜನಿಕರ ನೆಮ್ಮದಿ ಭಂಗ ಪ್ರಕರಣ ದಾಖಲಿಸಲು ತುರ್ತು ಕ್ರಮ ವಹಿಸುವಂತೆ ಈ ಮೂಲಕ ಸೂಚಿಸಿದೆ.

ಪರಿಸರಾಸಕ್ತರ ವಿರೋಧ:

ಕಾರ್ತಿಕಾದಿತ್ಯ ಬೆಳಗೋಡು ಬರಹ

ಮೂಡಿಗೆರೆ ಸಮೀಪದ ಪಶ್ಚಿಮಘಟ್ಟ ಸೂಕ್ಷ್ಮ ಪ್ರದೇಶದಲ್ಲಿ ನಡೆದ ಆಫ್ ರೋಡ್ ರ‌್ಯಾಲಿ ಯ ಕುರಿತು ಮಾತನಾಡಲು ಕರೆ ಮಾಡಿದ್ದ ಸ್ನೇಹಿತನಿಗೆ ಈ ಭದ್ರಾ ಸೈಕ್ಲಿಂಗ್ ಚ್ಯಾಲೆಂಜ್ ಎಂಬ ಹುಲಿಯನ್ನೋ ಸಿಂಹವನ್ನೋ ಉಳಿಸುವ ಅಭಿಯಾನದ ಕುರಿತು ಹೇಳಿದೆ. ಅದಕ್ಕವನು, ಬಹುಶಃ ಈ ಈವೆಂಟ್ ನಡೆಸ್ತಿರೋದು ನಿಮ್ಮನ್ನುಳಿಸೋಕೆ ಅಂತ ಸೈಕ್ಲಿಂಗ್ ಮಾಡುವಾಗ ಎದುರಾಗುವ ಪ್ರಾಣಿಗಳಿಗೆ  ಹೇಳೋಕಿರಬಹುದು ಅಂತ ತಮಾಷೆ ಮಾಡಿದ. Save tiger ಅಂತ ಸೈಕಲ್ಲೋ, ಬೈಕಿನದೋ ಒಂದು ಈವೆಂಟ್. Save elephant ಎಂಬ ಮತ್ತೊಂದ್ಯಾವುದೋ ಆಫ್ ರೋಡ್ ಜೀಪ್ ರ‌್ಯಾಲಿ ಅದೇ ಆನೆ ಸೂಕ್ಷ್ಮ ಪ್ರದೇಶದಲ್ಲಿ!
ಅಸಲಿಗೆ ಇವರಿಗಿರುವ ಉದ್ದೇಶ ಹುಲಿಯನ್ನೋ, ಆನೆಯನ್ನೋ ಉಳಿಸುವುದಲ್ಲ.  ದುಡ್ಡುಳಿಸುವ, ದುಡ್ಡು ಮಾಡುವ ಉದ್ದೇಶವಷ್ಟೇ. ಅದಕ್ಕೆ ಸರಿಯಾಗಿ ನಮ್ಮ ಜಿಲ್ಲೆಯ ಅಧಿಕಾರಿಗಳು. ನಾವೊಂದಷ್ಟು ಜನ ಅದೆಷ್ಟೇ ಬಟ್ಟೆ ಹರಿದುಕೊಂಡರೂ ಸಹ ಕಣ್ಣೊರೆಸುವಂತೆ ನಾಮ್ಕಾವಾಸ್ತೆ ಕ್ರಮ ಕೈಗೊಂಡು ತಿಪ್ಪೆ ಸಾರಿಸುತ್ತಾರೆ.
ಇವತ್ತು ಎತ್ತಿನಭುಜ ಆಸುಪಾಸಿನಲ್ಲಿ ನಡೆದ ಆಫ್ ರೋಡ್ ರ‌್ಯಾಲಿಗೆ ಮಾತೆತ್ತಿದರೆ ಆನೆ ಉಳಿಸುತ್ತೇವೆ, ಕಾಡುಳಿಸುತ್ತೇವೆ ಎನ್ನುವ ಮೂಡಿಗೆರೆ ಸಕಲೇಶಪುರದ ದೊಡ್ಡ ತಲೆಗಳೇ ಮುಂದೆ ನಿಂತು ಕಾವಲೊದಗಿಸಿದರು. ಕೇಳಿದರೆ ನಾವು ನಡೆಸಿದ್ದು ಖಾಸಗಿ ಎಸ್ಟೇಟಿನಲ್ಲಿ ಅನ್ನುತ್ತಾರೆ. ಖಾಸಗಿ ಎಸ್ಟೇಟಿರುವುದು ಅತಿ ಸೂಕ್ಷ್ಮ ಆನೆ ಕಾರಿಡಾರ್ ಪ್ರದೇಶ ಎಂಬುದು ವಾಸ್ತವ.
ಇವೆಲ್ಲಾ ದಿನನಿತ್ಯ ಆನೆ ಸಮಸ್ಯೆ ಎದುರಿಸುವ ಆ ಭಾಗದ ಊರಿನ ಜನರಿಗೇ ಅರಿವಾಗುವುದಿಲ್ಲ. ಇಂಥಾ ಸೂಕ್ಷ್ಮ ಪ್ರದೇಶದಲ್ಲಿ mass commercial Activities ನಡೆಸಬಾರದು ಎಂಬ ಕನಿಷ್ಠ ಜ್ಞಾನ ತಾಲ್ಲೂಕಿನ ಅಧಿಕಾರಿಗಳಿಗೇ ಇಲ್ಲ. 
ಇವತ್ತಿನ ರ‌್ಯಾಲಿಯಲ್ಲಿ ಯಾವನೋ ಮಂತ್ರಿಯ ಮಗನಿದ್ದಾನೆ ಹಾಗಾಗಿ ರ‌್ಯಾಲಿ ನಡೆಯುವುದನ್ನು ನೋಡಿಯೂ ನೋಡದಂತೆ ತೆಪ್ಪಗಿರಿ ಎಂದು ಮೂಡಿಗೆರೆಯ ರಾಜಕಾರಣಿಯೊಬ್ಬರ ಸೂಚನೆಯಿದೆ ಎಂಬ ಸುದ್ದಿಯಿದೆ. ನಾಚಿಕೆಗೇಡು.
ಇವೆಲ್ಲದರ ನಡುವೆ ಬಾಯಿ ಬಡಿದುಕೊಳ್ಳುವ ನಮ್ಮದು ಕೇವಲ ಅರಣ್ಯ ರೋಧನ.

Synopsis :

Following widespread opposition from environmentalists and media reports, Forest Minister Eshwar B. Khader’s office has taken serious note of the off-road jeep rally in the Moodigere and Balur forests of Chikkamagaluru district. The minister has instructed for a report on the already held rallies.

“The Western Ghats and forest areas are home to hundreds of species of birds, animals, insects, and plants. The Forest Department is responsible for their conservation. However, on August 31, 2024, an off-road rally was held in the forest area near Bhairapur Hoskere in Moodigere taluk, which is also an elephant corridor. Media reports have brought this to our notice, and the government is taking it seriously. Around 52 vehicles participated in the rally, causing environmental damage. ACF-grade officer will investigate and file cases under the Forest Conservation Act and Wildlife Protection Act if the rally was held inside the forest. Additionally, cases will be filed under the Environmental Protection Act for disturbing public peace.”

You Might Also Like This