ಕಾಫಿನಾಡಲ್ಲಿ ಗೌಸ್ ಮೊಹಿನುದ್ದಿನ್ ಶಾಖಾದ್ರಿಯನ್ನ ಬಂಧಿಸ್ತಾರಾ ಪೊಲೀಸರು.? ಹೀಗೊಂದು ಆತಂಕ ಗೌಸ್ ಬೆಂಬಲಿಗರಿಗೆ ಕಾಡಿದೆ.
ಮನೆಯಲ್ಲಿ ಜಿಂಕೆ, ಚಿರತೆ ಚರ್ಮ ಹೊಂದಿದ್ದ ಆರೋಪದ ಮೇಲೆ ದತ್ತಪೀಠದ ಶಾಖಾದ್ರಿ ಗೌಸ್ ಮೊಹೀನುದ್ದಿನ್ ಶಾಖಾದ್ರಿ ಮೇಲೆ FIR ದಾಖಲಾಗಿತ್ತು. ಶಾಖಾದ್ರಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನ ಚಿಕ್ಕಮಗಳೂರಿನ ಸೆಷನ್ ಕೋರ್ಟ್ ವಜಾ ಮಾಡಿದೆ.
ಶಾಖಾದ್ರಿಯನ್ನ ಬಂಧಿಸುತ್ತಾರಾ ಕಾಫಿನಾಡ ಪೊಲೀಸರು…?
ಅಕ್ಟೋಬರ್ 27ರಂದು ಶಾಖಾದ್ರಿ ಮನೆಯನ್ನ ತಪಾಸಣೆ ನಡೆಸಿದ್ದ ಅರಣ್ಯ ಅಧಿಕಾರಿಗಳು, ಮನೆಯಲ್ಲಿ ಚಿರತೆ ಹಾಗೂ ಜಿಂಕೆ ಚರ್ಮ ವಶಕ್ಕೆ ಪಡೆದಿದ್ದರು. ನವೆಂಬರ್ 2ನೇ ತಾರೀಖಿನಂದು ವಿಚಾರಣೆಗೆ ಬರುವಂತೆ ಸೂಚಿಸಿದ್ದರು. ಶಾಖಾದ್ರಿ ಮನೆ ಬಾಗಿಲಿಗೆ ನೋಟೀಸ್ ಅಂಟಿಸಿದ್ದರು. ವಿಚಾರಣೆಗೆ ಹಾಜರಾಗದೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದ ಶಾಖಾದ್ರಿ ಚಿಕ್ಕಮಗಳೂರಿನ ಸೆಷನ್ ಕೋರ್ಟ್ ನಿಂದ ಶಾಖಾದ್ರಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.

ಹುಲಿ ಉಗುರು ಸಿಕ್ಕ ಕೂಡಲೇ ಖಾಂಡ್ಯ ದೇವಸ್ಥಾನದ ಅರ್ಚಕರನ್ನ ಬಂಧಿಸಿದ್ದ ಅರಣ್ಯ ಅಧಿಕಾರಿಗಳು, ತಿಂಗಳಾದರೂ ಶಾಖಾದ್ರಿಯನ್ನ ಬಂಧಿಸದ ಅರಣ್ಯ ಅಧಿಕಾರಿಗಳ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರುತ್ತಿದ್ದರು.
ಶಾಖಾದ್ರಿ ಮೇಲೆ ಧರ್ಮ ಆಧಾರಿತ ಷಡ್ಯಂತ್ರ ಇದೆ. ಇವರು ಎಲ್ಲಿಗೂ ಓಡಿ ಹೋಗುವವರಲ್ಲ, ಇಲ್ಲೇ ಇದ್ದು ತನಿಖೆಗೆ ಸಹಕರಿಸುತ್ತಾರೆ. ಅರಣ್ಯ ಇಲಾಖೆ ನಿಯಮಗಳನ್ನ ಗಾಳಿಗೆ ತೂರಿ ಅವರ ಮೇಲೆ ದೋಷರೋಷ ಹೊರಿಸಿದೆ ಎಂದು, ವಕೀಲರು ವಾದ ಮಂಡಿಸಿದ್ದರು. ಆದರೂ ಸಹ ನಿರೀಕ್ಷಣಾ ಜಾಮೀನು ರದ್ಧಾಗಿದೆ.