ತೀರ್ಥಹಳ್ಳಿಯ ವಿಹಂಗಮ ಹಾಲಿಡೇ ರಿಟ್ರೀಟ್ ಎಂಬ ರೆಸಾರ್ಟ್ ನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗ ಪೊಲೀಸರು ದಾಳಿ ನಡೆಸಿದ್ದಾರೆ. ಶಿವಮೊಗ್ಗ ಜಿಲ್ಲಾ ಪೊಲೀಸ್ ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನೂ ಹೊರಡಿಸಿದೆ.
ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಅನಿಲ್ ಕುಮಾರ್ ಭೂಮರೆಡ್ಡಿ ಮಾರ್ಗದರ್ಶನದಲ್ಲಿ, ತೀರ್ಥಹಳ್ಳಿ ಡಿವೈಎಸ್‌ಪಿ ಗಜಾನನ ವಾಮನ ಸುತಾರ ನೇತೃತ್ವದಲ್ಲಿ 50 ಜನ ಪೊಲೀಸ್ ಸಿಬ್ಬಂದಿ ರೇಡ್ ಮಾಡಿ ಅನಧಿಕೃತ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ. ದಿನಾಂಕ : 12-08-2023 ರಂದು ರಾತ್ರಿ ವಿಹಂಗಮ ರೆಸಾರ್ಟ್ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 1) ಅಂದಾಜು ಮೌಲ್ಯ 1,00,000/- ರೂಗಳ ಒಂದು ಡಬಲ್ ಬ್ಯಾರಲ್ ಬಂದೂಕು, 2) ಅಂದಾಜು ಮೌಲ್ಯ 25,000 /- ರೂಗಳ 310 ಜೀವಂತ ಗುಂಡುಗಳು 3) ಒಂದು ಕತ್ತಿ ಮತ್ತು ಒಂದು ಚಾಕು 4) ಮೂರು ಕಾಡು ಕೋಣದ ಕೊಂಬಿನ ಟ್ರೊಫಿ, 5) ಆರು ಜಿಂಕೆ ಕೊಂಬಿನ ಟ್ರೊಫಿ, 6) ಒಂದು ಸಿಸಿ ಟಿವಿ ಡಿವಿ ಆರ್ 7) ಅಂದಾಜು ಮೌಲ್ಯ 7,650/- ರೂ ಗಳ ಒಟ್ಟು 51 ಬಿಯರ್ ಟಿನ್ ಗಳು, 8) ಅಂದಾಜು ಮೌಲ್ಯ 1,00,000/- ರೂ ಗಳ ಮದ್ಯ ತುಂಬಿದ ಬಾಟಲ್ ಗಳು 9) ಅಂದಾಜು ಮೌಲ್ಯ 750/- ರೂ ಗಳ ಒಟ್ಟು 6 Breezer ಬಾಟಲ್ ಮತ್ತು 10) 3 ಲೀಟರ್ ಮದ್ಯವನ್ನು ವಶಪಡಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಅಧಿಕೃತ ರೆಸಾರ್ಟ್ ಆಗಿದ್ದರೂ ಕೂಡ, ಆರೋಪಗಳು ಬರಬಾರದು ಎಂದಿಲ್ಲ. ಅಥವಾ ಅಧಿಕಾರಿಗಳು ಪರಿಶೀಲನೆ ಮಾಡುವುದಿಲ್ಲ ಎನ್ನುವ ಹುಂಬುತನವೂ ಇರಬಾರದು. ಆದರೂ ಸಹ ಈ ತನಕ ಈ ರೆಸಾರ್ಟ್ ಪ್ರಭಾವಿ ಜನರಿಂದಲೇ ನಡೆಯುತ್ತಿತ್ತು. ಇಲ್ಲಿಗೆ ಅಧಿಕಾರಿಗಳೂ ಸಹ ಪಾರ್ಟಿ, ಫಂಕ್ಷನ್ ಅಂತ ಭೇಟಿ ನೀಡಿಯೇ ಇರುತ್ತಾರೆ. ಆಸರೂ ಸಹ ಇವೆಲ್ಲಾ ಅವರ ಗಮನಕ್ಕೆ ಬಾರದೇ ಇರೋದು ಸೋಜಿಗ. ಇನ್ನು ಅರಣ್ಯ ಇಲಾಖೆ ಟ್ರೋಫಿಗಳ ಸಂಬಂಧ ಯಾವ ತರಹ ಕ್ರಮ ಕೈಗೊಳ್ಳುತ್ತೆ. ಹಿಂದೊಮ್ಮೆ ಮಲೆನಾಡಿನ ಅವಧೂತರೊಬ್ಬರ ಅಡಿಯಲ್ಲಿದ್ದ ಹುಲಿ ಚರ್ಮಕ್ಕೆ ಸಬೂಬು ಹೇಳಿ ಬಜಾವ್ ಮಾಡಿದ್ದೇ ಈ ಪ್ರಕರಣದಲ್ಲೂ ಆಗುತ್ತಾ ಎಂಬ ಆತಂಕ ಇದೆ.