Ode to the west wind

Join Us on WhatsApp

Connect Here

Written by 7:37 am NEWS

ಚಿಕ್ಕಮಗಳೂರು ಗಿರಿಭಾಗಕ್ಕೆ ಈ ಆರು ದಿನ ಪ್ರವಾಸ ಕೈಗೊಳ್ಳದೇ ಇರೋದು ಒಳ್ಳೆಯದು.

ಚಿಕ್ಕಮಗಳೂರು : ಕಾಫಿನಾಡಿಗೆ ಪ್ರವಾಸಕ್ಕೆ ಬರುವ ಪ್ರವಾಸಿಗರೇ ಎಚ್ಚರ. ಆರು ದಿನಗಳ ಕಾಲ ಪಶ್ಚಿಮ ಘಟ್ಟಗಳ ಸಾಲಿನ ಪ್ರವಾಸಿ ತಾಣಗಳಿಗೆ ಭದ್ರತಾ ದೃಷ್ಟಿಯಿಂದ ಜಿಲ್ಲಾಡಳಿತ ನಿರ್ಬಂಧ‌ ಹೇರಿದೆ. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಗಾಳಿಕೆರೆ, ಮಾಣಿಕ್ಯಧಾರಾ ಸೇರಿದಂತೆ ಎಲ್ಲವೂ ಬಂದ್ ಆಗಲಿವೆ.

*ಡಿ.22 ರಿಂದ 27ರವರೆಗೆ 6 ದಿನಗಳ ಕಾಲ*

ಡಿ. 24, 25, 26ರಂದು ಕಾಫಿನಾಡ ದತ್ತಪೀಠದಲ್ಲಿ ದತ್ತಜಯಂತಿ ಸಂಭ್ರಮ ಹಿನ್ನೆಲೆ, ಡಿ.26ರಂದು 20ಸಾವಿರಕ್ಕೂ ಅಧಿಕ ಮಾಲಾಧಾರಿಗಳು ದತ್ತಪೀಠಕ್ಕೆ ಆಗಮನ ನಿರೀಕ್ಷೆ ಇದೆ. ಮುಂಜಾಗ್ರತಾ ಕ್ರಮವಾಗಿ ಪ್ರವಾಸಕ್ಕೆ ನಿರ್ಬಂಧ ಹೇರಲಾಗಿದೆ. ಗಿರಿ ಭಾಗದಲ್ಲಿ ಕ್ರಿಸ್ ಮಸ್ ಸೆಲೆಬ್ರೇಷನ್ ಮಾಡೋದಕ್ಕೂ ಸಾಧ್ಯವಿಲ್ಲ. 6 ದಿನಗಳ ಕಾಲ ಚಂದ್ರದ್ರೋಣ ಪರ್ವತಗಳ ಸಾಲಿನ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ತೊಡಕಾಗಲಿದೆ.

ಡಿ.17ರಿಂದ 26ರವರೆಗೆ ನಡೆಯಲಿರುವ ದತ್ತಜಯಂತಿ ಸಂಭ್ರಮ ನಡೆಯಲಿದ್ದು, ಟೂರಿಸ್ಟ್ ಗಾಡಿ, ಮಾಲಾಧಾರಿಗಳ ಗಾಡಿಯಿಂದ ಟ್ರಾಫಿಕ್ ಜಾಮ್ ಸಮಸ್ಯೆ ಆಗಬಾರದೆಂದು ಸ್ವಯಂ ನಿರ್ಬಂಧದೊಂದಿಗೆ ಪ್ರವಾಸ ಮುಂದೂಡಿ ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾದಲ್ಲಿ ಮಾಲಾಧಾರಿಗಳ ಕಲರವ ಮೇಳೈಸಲಿದೆ. ನೀವು ಉಳಿದುಕೊಳ್ಳುವ ಹೋಂಸ್ಟೇ, ಹೋಟೆಲ್ ಗಳ ಸಂಪರ್ಕವನ್ನಿಟ್ಟುಕೊಂಡು, ಅವರ ಸಲಹೆ ಮೇರೆಗೆ ಟ್ರ್ಯಾವೆಲ್ ಪ್ಲಾನ್ ಮಾಡಿ. ಬುಕ್ಕಿಂಗ್ ಮಾಡುವ ಮೊದಲೇ ಯೋಚಿಸುವುದು ಒಳಿತು.

Visited 2 times, 1 visit(s) today
[mc4wp_form id="5878"]