Ode to the west wind

Join Us on WhatsApp

Connect Here

Written by 7:20 am NEWS

ಚಾರ್ಮಾಡಿ ಘಾಟ್ ಲ್ಲಿ ಸರ್ಕಾರಿ ಬಸ್ ಬ್ರೇಕ್ ಫೇಲ್..!

ಚಾರ್ಮಾಡಿ ಘಾಟ್ ತಿರುವಿನಲ್ಲಿ ಸರ್ಕಾರಿ ಬಸ್ ಬ್ರೇಕ್‌ ಫೇಲ್ ಆಗಿ ಕೂದಲೆಳೆಯಲ್ಲಿ ಪ್ರಯಾಣಿಕರು ಪ್ರಾಣ ಉಳಿಸಿಕೊಂಡಿದ್ದಾರೆ. ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ.

ಕಡೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಸರ್ಕಾರಿ ಬಸ್, ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್ ಬಳಿ ಬರುವಾಗ ಇಳಿಜಾರಿನಲ್ಲಿ ಬ್ರೇಕ್‌ಫೇಲ್ ಆಗಿದೆ. ಬಸ್ ಬ್ರೇಕ್ ಫೈಲ್ಯೂರ್ ಗ್ರಹಿಸಿದ ಚಾಲಕ, ನಿಯಂತ್ರಣ ತಪ್ತಿದ್ದಂತೆ ಡಿವೈಡರ್ ಗೆ ಡಿಕ್ಕಿ ಹೊಡೆಸಿ‌ ನಿಲ್ಲಿಸಿದ್ದಾನೆ. ಡಿಕ್ಕಿ ಹೊಡೆಯುತ್ತಿದ್ದಂತೆ ಬಸ್ ಎಂಜಿನಿಂದ ಹೊಗೆ ಬರಲಾರಂಭಿಸಿದೆ. ಅಷ್ಟರಲ್ಲೇ 43 ಪ್ರಯಾಣಿಕರು ಸೇರಿದಂತೆ ಚಾಲಕ, ನಿರ್ವಾಹಕ ಎಲ್ಲರೂ ಹೊರಗೆ ಬಂದಿದ್ದರು. ನಿಧಾನವಾಗಿ ಬಸ್ ಹೊಗೆ ಶಮನವಾಗಿದ್ದು ತೆರವು ಕಾರ್ಯಾಚರಣೆ ನಡೆದಿದೆ. ಬಣಕಲ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ‌ ನಡೆಸಿದರು. ಚಿಕ್ಕಮಗಳೂರು-ದಕ್ಷಿಣ ಕನ್ನಡ ಸಂಪರ್ಕಿಸೋ ಚಾರ್ಮಾಡಿ ಘಾಟ್ ಲ್ಲಿ
ಅಪಾಯಕಾರಿ ತಿರುವುಗಳಿವೆ. ಕೆಲವಡೆ ತಡೆಗೋಡೆಗಳು ಸುಸ್ಥಿತಿಯಲ್ಲಿವೆ. ಹಲವೆಡೆ ಅಪಾಯಕ್ಕೆ ಅಹ್ವಾನ ನೀಡುತ್ತಿವೆ.

Visited 2 times, 1 visit(s) today
[mc4wp_form id="5878"]