Ode to the west wind

Join Us on WhatsApp

Connect Here

Written by 4:50 pm NEWS

ಕಾಡುಕೋಣ-ಕಾಡೆಮ್ಮೆ ಕೊಂದ ಆರೋಪಿ ಪರಾರಿ:

ಸೊರಬ ತಾಲೂಕು ಚಂದ್ರಗುತ್ತಿ ಸಮೀಪ, ಕುಂದಗೋಳ- ನ್ಯಾರ್ಶಿ ಗ್ರಾಮದಲ್ಲಿ ಕಾಡುಕೋಣ ಹಾಗೂ ಕಾಡೆಮ್ಮೆಯನ್ನ ಬಲಿ ಪಡೆಯಲಾಗಿದೆ. ಕಾಡು ಪ್ರಾಣಿ ಬೇಟೆಗೆ ಬಿಟ್ಟ ವಿದ್ಯುತ್ ತಂತಿಗೆ ಎರಡು ಅಮೂಲ್ಯ ಜೀವಗಳು ಮೃತಪಟ್ಟಿವೆ.

ದುರಂತ ಅಂದ್ರೆ ಮೃತ ಕೋಣಗಳು ಹೊಲದಂಚಿನಲ್ಲೇ ಕೊಳೆಯುವ ಸ್ಥಿತಿಯಲ್ಲಿದ್ದರೂ ಒಂದು ವಾರ ಯಾರೂ ಮಾಹಿತಿ ನೀಡಿಲ್ಲ.‌ ಬುಧವಾರ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಮರಣೋತ್ತರ ಪರೀಕ್ಷೆ ನಡೆಸಿ ಆರೋಪಿಯನ್ನ ಗುರುತಿಸಿದ್ದಾರೆ. ಸದ್ಯ ಘಟನೆಗೆ ಕಾರಣನಾದ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಈ ಬಗ್ಗೆ ಮಾಹಿತಿ ನೀಡಿದ ಸಾಗರ ಡಿಎಫ್ಓ ಸಂತೋಷ್, ಒಂದು ಗಂಡು ಹಾಗೂ ಇನ್ನೊಂದು ಹೆಣ್ಣು ಮೃತಪಟ್ಟಿವೆ. ಸುಮಾರು ನಾಲ್ಕು ವರ್ಷಗಳ ಆಸುಪಾಸು ಇರಬಹುದು. ಕೇವಲ ನೂರು ಮೀಟರ್ ಅಂತರದಲ್ಲಿ ಬಿದ್ದಿದ್ದವು. ಮಾಹಿತಿ ತಿಳಿದ ತಕ್ಷಣ ನಾನು ಸ್ಥಳಕ್ಕೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ಮಾಡಿಸಿದ್ದೇನೆ. ಆರೋಪಿ ನಾಪತ್ತೆಯಾಗಿದ್ದು ಆತನ ಬಂಧನದ ನಂತರ ಪೂರ್ಣ ಮಾಹಿತಿ ಸಿಗಲಿದೆ ಎಂದರು‌.

ಗ್ರಾಮಸ್ಥರೊಬ್ಬರು ಈ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾ, ಮಣ್ಣತ್ತಿ, ಕುಂದುಗೋಡು ಭಾಗದಲ್ಲಿ ಕಾಡು ಪ್ರಾಣಿಗಳು ವಿದ್ಯುತ್ ಶಾಕ್ ಗೆ ಬಲಿಯಾಗುತ್ತಿವೆ. ಜಿಂಕೆ, ಬರ್ಕ, ಮುಳ್ಳು ಹಂದಿ, ಚಿಪ್ಪು ಹಂದಿಯನ್ನ ಭೇಟೆಯಾಡುತ್ತಾರೆ. ಒತ್ತುವರಿ ಕಾರಣದಿಂದಲೂ ಅರಣ್ಯ ನಾಶವಾಗಿದೆ ಎಂದರು.

Visited 1 times, 1 visit(s) today
[mc4wp_form id="5878"]