Ode to the west wind

Join Us on WhatsApp

Connect Here

ಎಣ್ಣೆ, ಮೋಜು-ಮಸ್ತಿ, ಅರಣ್ಯ ಸಿಬ್ಬಂದಿ ಎಂದು ಯೂಟ್ಯೂಬರ್ ಗೆ ಧಮ್ಕಿ, ಯಾರೀತ.?

WhatsApp
Facebook
Twitter
LinkedIn

ಚಿಕ್ಕಮಗಳೂರು ಭದ್ರಾ ಹುಲಿ ಮೀಸಲು ಅಭಯಾರಣ್ಯದಲ್ಲೊಂದು ಘಟನೆ ಯೂಟ್ಯೂಬರ್ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ವಿರೂಪಾಕ್ಷಖಾನ್ ಕಳ್ಳ ಬೇಟೆ ನಿಗ್ರಹ ಸಮೀಪದ ವ್ಯೂ ಪಾಯಿಂಟ್ ನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸೋಗಿನಲ್ಲಿದ್ದಾತನ ಜೊತೆ ಮಾತಿನ ಚಕಮಕಿ ನಡೆದಿದೆ.

Karnataka Biker ಯೂಟ್ಯೂಬರ್ ಚಾನೆಲ್ ಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ವೀಡಿಯೋದಲ್ಲಿರುವಾತ ಕೆಲವು ಪ್ರವಾಸಿಗರನ್ನ ಬೊಲೆರೋ ವಾಹನದಲ್ಲಿ ಕರೆತಂದು ಗುಡ್ಡದ ಮೇಲೆ ಕೂರಿಸಿ ಬಿಯರ್ ಸೇವಿಸಲು ಬಿಟ್ಟಿದ್ದಾನೆ. ಜೊತೆಗೆ ಕೆಲ ಮಹಿಳೆಯರೂ ಇದ್ದಾರೆ. ಬೈಕರ್ ಗಳು ಹೋದಾಗ ಇಲ್ಲಿ ಯಾವುದೇ ವಿಡಿಯೋ, ಫೊಟೋ ತೆಗೀಬೇಡಿ. ತೆಗೆದರೆ ಮುಂದಿನ ಗೇಟ್ ಲ್ಲಿ ಹಿಡಿದುಕೊಳ್ತಾರೆ, ಡಿಲೀಟ್ ಮಾಡಿಸ್ತಾರೆ, ನಾನು ಫಾರೆಸ್ಟ್ ಇಲಾಖೆಯವ ಎಂದು ಹೇಳ್ತಾನೆ. ಹೀಗೆ ಗದರಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದು ಅರಣ್ಯ ಇಲಾಖೆ ( ಭದ್ರಾ ವೈಲ್ಡ್ ಲೈಫ್) ಅಧಿಕಾರಿಗಳ ವಿರುದ್ಧ ಜನ ಹಿಗ್ಗಾಮುಗ್ಗಾ ಜಾಡಿಸುತ್ತಿದ್ದಾರೆ.

ರೈನ್ ಲ್ಯಾಂಡ್ ಗೆ ಸಿಕ್ಕ ಮಾಹಿತಿ ಪ್ರಕಾರ ವೀಡಿಯೋದಲ್ಲಿರುವಾತ ಇಲಾಖೆ ಸಿಬ್ಬಂದಿ ಅಲ್ಲ ಪರಿಸರ ಪ್ರವಾಸೋದ್ಯಮ ಸಮಿತಿ ಸದಸ್ಯ ಎನ್ನಲಾಗಿದೆ.

ಯಾರೀತ.?

ಈತ‌ನ ಹೆಸರು ಮಹೇಂದ್ರ ಬಳ್ಳವಾರ್, ಕೆಮ್ಮಣ್ಣುಗುಂಡಿ ಭಾಗದಲ್ಲಿ EDC ಪ್ರಮಾಣಿತ  ಜೀಪ್ ಚಾಲಕ. ಇಲ್ಲಿನವರ ಪ್ರಕಾರ ಈತ ನಿತ್ಯ ಪ್ರವಾಸಿಗರನ್ನ ಅರಣ್ಯಕ್ಕೆ ಕರೆದುಕೊಂಡು ಹೋಗುತ್ತಾನೆ‌. ದುರಂತ ಅಂದ್ರೆ ಎಣ್ಣೆ ಪಾರ್ಟಿ, ಮೋಜು ಮಸ್ತಿಗೂ ಅವಕಾಶ ಕೊಡುತ್ತಾನೆ. ಇದು ಈ ವಿಡಿಯೋದಲ್ಲೂ ಸಾಬೀತಾಗಿದೆ.

ಪ್ರವಾಸಿಗರಿಂದ ದುಪ್ಪಟ್ಟು ಹಣ ವಸೂಲಿ, ಕೆಮ್ಮಣ್ಣುಗುಂಡಿ ಭಾಗದಲ್ಲಿ ಹುಲಿ ಮೀಸಲು ಅಭಯಾರಣ್ಯದಲ್ಲಿ ತಾನು ಅರಣ್ಯ ಇಲಾಖೆ ಸಿಬ್ಬಂದಿ ಎಂದು ಹೇಳಿಕೊಳ್ಳುತ್ತಾನೆ ಎಂಬ ಆರೋಪಗಳಿವೆ.

ಈ ಕುರಿತು ರೈನ್ ಲ್ಯಾಂಡ್ ಜೊತೆ ಮಾತನಾಡಿದ ಭದ್ರಾ ಹುಲಿ ಸಂರಕ್ಷಿತ ವಲಯ ಡಿಸಿಎಫ್ ಯಶಪಾಲ್, ವಿಡಿಯೋದಲ್ಲಿರುವಾತ ಇಲಾಖೆಗೆ ಸಂಬಂಧಪಟ್ಟವ ಅಲ್ಲ. ಇಕೋ ಟೂರಿಸಂ ಡೆವಲಪ್ಮೆಂಟ್ ಕಮಿಟಿ ಸದಸ್ಯ ಎಂಬ ಮಾಹಿತಿ ಇದೆ. ವಿಚಾರಣೆ ನಡೆಸಿ ಈತನನ್ನ ಸಮಿತಿಯಿಂದ ಉಚ್ಛಾಟನೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಹಾಗಾದರೆ ಏನಿದು EDC ( ಪರಿಸರ ಪ್ರವಾಸೋದ್ಯಮ ಮಂಡಳಿ/ ಸಮಿತಿ)

ದಿನಾಂಕ: 03.03.2010 ರ ಪತ್ರದಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ), ಬೆಂಗಳೂರು ಇವರು ಮಧ್ಯಪ್ರದೇಶದಲ್ಲಿ ಪರಿಸರ ಪ್ರವಾಸೋದ್ಯಮ ಮಂಡಳಿ ಹಾಗೂ ಹಿಮಾಚಲ ಪ್ರದೇಶದಲ್ಲಿ ಪರಿಸರ ಪ್ರವಾಸೋದ್ಯಮ ಸೊಸೈಟಿಯನ್ನು ರಚಿಸಿರುವಂತೆ ಕರ್ನಾಟಕ ರಾಜ್ಯದಲ್ಲಿಯೂ ಸಹ ಈ ಕೆಳಕಂಡ ಧ್ಯೇಯೋದ್ದೇಶಗಳನ್ನು ಸಾಧಿಸಲು ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯನ್ನು ರಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

1. ಅರಣ್ಯ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆ ಕುರಿತು ಜನಸಾಮಾನ್ಯರಲ್ಲಿ. ಮಕ್ಕಳಲ್ಲಿ ವಿಶೇಷವಾಗಿ ಯುವಕರಲ್ಲಿ ಜಾಗೃತಿ ಮೂಡಿಸುವುದು.

2. ದೇಶದಲ್ಲಿ ಅದರಲ್ಲಿಯೂ ವಿಶೇಷವಾಗಿ ಕರ್ನಾಟಕ ರಾಜ್ಯದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಬಲಪಡಿಸುವುದು ಮತ್ತು ಉತ್ತೇಜನ ನೀಡುವುದು.

3. ಸ್ಥಳೀಯ ಸಮುದಾಯದವರನ್ನು ಪರಿಸರ ಪ್ರವಾಸೋದ್ಯಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಹಾಗೂ ಉದ್ಯೋಗಾವಕಾಶ ಕಲ್ಪಿಸಿ ಆರ್ಥಿಕ ಸೌಲಭ್ಯಗಳನ್ನು ಒದಗಿಸುವುದು.

4. ರಾಜ್ಯದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಜಾರಿಗೊಳಿಸಲು ನೀತಿ, ನಿಯಮಗಳನ್ನು ರೂಪಿಸಲು ಹಾಗೂ ಮಾರ್ಗದರ್ಶನ ಮಾಡಲು ಸಹಕರಿಸುವುದು.

5. ಪರಿಸರ ಪ್ರವಾಸೋದ್ಯಮದ ಪ್ರದೇಶಗಳಲ್ಲಿ ಸಂಶೋಧನೆ ಮತ್ತು ಅದರ ಪರಿಣಾಮಗಳ ಬಗ್ಗೆ ಅಧ್ಯಯನ ಕೈಗೊಳ್ಳುವುದು.

6. ಪರಿಸರ ಪ್ರವಾಸೋದ್ಯಮವನ್ನು ಕರ್ನಾಟಕ ಅರಣ್ಯ ಇಲಾಖೆಯಡಿ ಮುಂಚೂಣಿಗೆ . ತಂದು ಸಮೃದ್ಧ ಚಟುವಟಿಕೆಯನ್ನಾಗಿ ಬಲಪಡಿಸುವುದು.

7. ಪರಿಸರ ಪ್ರವಾಸೋದ್ಯಮ ನಡೆಸುವಂತಹ ಸಂಘ ಸಂಸ್ಥೆಗಳು ಉತ್ತಮ ಕಾರ್ಯ ಕ್ರಮಗಳನ್ನು ಅನುಸರಿಸುವಂತೆ ರೂಪಿಸುವುದು.

8. ಪರಿಸರ ಪ್ರವಾಸೋದ್ಯಮ ನಡೆಸುವ ಸಂಘ ಸಂಸ್ಥೆಗಳನ್ನು ಶ್ರೇಣಿಕೃತಗೊಳಿಸುವುದು.

9. ನಿಸರ್ಗ ಮಾರ್ಗದರ್ಶಕರಿಗೆ ತರಬೇತಿ ಹಾಗೂ ಪ್ರಮಾಣಪತ್ರ ನೀಡುವುದು.

10. ನಿಸರ್ಗ ಶಿಕ್ಷಣ ಮತ್ತು ಪರಿಸರ ಪ್ರವಾಸೋದ್ಯಮ ಉತ್ತೇಜನಗೊಳಿಸಲು ಅಗತ್ಯವಿರುವ ಸಾಹಿತ್ಯ, ವಿದ್ಯುನ್ಮಾನ ಮಾಧ್ಯಮ ಸಾಧನಗಳನ್ನು ಒದಗಿಸುವುದು.

1 11. ವನ್ಯಜೀವಿ ಸಂರಕ್ಷಣೆಯ ದೃಷ್ಟಿಯಿಂದ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳೊಂದಿಗೆ ಸಂಪರ್ಕ ಕಲ್ಪಿಸುವುದು.

12. ರಾಷ್ಟ್ರೀಯ / ಅಂತರಾಷ್ಟ್ರೀಯ ಸಂಸ್ಥೆಗಳು, ತಜ್ಞರುಗಳೊಂದಿಗೆ ಮತ್ತು ಧನಸಹಾಯ ಮಾಡುವ ಏಜನ್ಸಿಗಳೊಂದಿಗೆ ಸಮನ್ವಯ ಸಾಧಿಸುವುದು ಮತ್ತು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಅಂತರಾಷ್ಟ್ರೀಯ ಮತ್ತು ಧನಸಹಾಯ ನೀಡುವ ಸಂಸ್ಥೆಗಳಿಂದ ವಂತಿಗೆ ಮತ್ತು ಧನ ಸಹಾಯವನ್ನು ಪಡೆದುಕೊಳ್ಳುವುದು. ಉದ್ಯಾನವನಗಳು ಮತ್ತು ಅರಣ್ಯ ಪ್ರದೇಶದ ಒಳಗಡೆ ಪರಿಸರ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸುವುದು ಮತ್ತು ನಿರ್ವಹಿಸುವುದು.

13 ಸಂರಕ್ಷಿತ ಪ್ರದೇಶಗಳಲ್ಲಿ ಟ್ರಕಿಂಗ್ ಹಾಗೂ ವನ್ಯಜೀವಿ ಸಫಾರಿಗಳನ್ನು ಅಭಿವೃದ್ಧಿಪಡಿಸುವುದು.

14. ಕಾನೂನಿನ್ವಯ ಎಲ್ಲೆಲ್ಲ ಸಾಧ್ಯವೊ ಅಂತಹ ಕಡೆಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು.

15. ಪರಿಸರ ಪ್ರವಾಸೋದ್ಯಮ ಮಂಡಳಿಯ ಚಟುವಟಿಕೆಗಳನ್ನು ನಡೆಸಲು ಕೌಶಲ್ಯ ಹೊಂದಿದ ಸಿಬ್ಬಂದಿಯ ತೊಡಗಿಸುವಿಕೆ / ನೇಮಕ ಮಾಡುವುದು.

16. ಮೇಲಿನ ಉದ್ದೇಶಗಳಿಗೆ ಪೂರಕವಾಗುವಂತಹ ಇನ್ನೂ ಯಾವುದಾದರೂ ಚಟುವಟಿಕೆಗಳಿದ್ದಲ್ಲ, ಅಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು.

You Might Also Like This