Ode to the west wind

Join Us on WhatsApp

Connect Here

ಈ ನರಹಂತಕ ಕಾಡಾನೆ‌..! ಮೂವರ ಸಾವು..!

WhatsApp
Facebook
Twitter
LinkedIn

ಕೊನೆಗೂ ಒಂದು ನರ ಹಂತಕ ಕಾಡಾನೆ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸಫಲರಾಗಿದ್ದಾರೆ. ಬಹಳ ದಿನಗಳಿಂದ ತೊಂದರೆ ನೀಡುತ್ತಿದ್ದ ಆನೆ ಸೆರೆಸಿಕ್ಕಿದ್ದಕ್ಕಾಗಿ‌ ಮೂಡಿಗೆರೆ ತಾಲೂಕಿನ ಜನರು ಸಂತಸ ಪಟ್ಟಿದ್ದಾರೆ.

ಮೂಡಿಗೆರೆ ತಾಲ್ಲೂಕಿನ ಕುಂದೂರು, ಕೆಂಜಿಗೆ ಭಾಗದಲ್ಲಿ ಮೂರು ಕಾಡಾನೆ ಸೆರೆ ಹಿಡಿಯಲು ಆರಂಭಿಸಿ, ಮೊದಲ ದಿನದ ಕಾರ್ಯಾಚರಣೆಯಲ್ಲಿ ಒಂದು ಕಾಡಾನೆ ಸೆರೆ ಹಿಡಿಯಲಾಗಿದೆ. ಬೆಳಗೋಡು ಸಮೀಪದ ಕುಂಡ್ರ ಎಂಬ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಆನೆಗೆ ಅರಿವಳಿಕೆ ಚುಚ್ಚು ಮದ್ದು ನೀಡಿ ಕೆಡವಿ ಸೆರೆ ಹಿಡಿದರು. ಕಾಡಾನೆ ಗಾತ್ರದಲ್ಲಿ ಚಿಕ್ಕದ್ದು. ಈಗ ಸೆರೆಯಾಗಿರುವ ಕಾಡಾನೆಯನ್ನು ಎರಡು ಸಾಕಾನೆಗಳ ಸುಪರ್ದಿಯಲ್ಲಿ ನಾಗರಹೊಳೆಯ ದುಬಾರೆ ಆನೆಕ್ಯಾಂಪ್ ಗೆ ಸ್ಥಳಾಂತರ ಮಾಡಲಾಗಿದೆ.
ಎರಡು ದಿನಗಳ ಬಿಡುವಿನ ಬಳಿಕ ಮುಂದಿನ ಆನೆಗಳ ಹಿಡಿಯಲು ಮತ್ತೆ ಕಾರ್ಯಾಚರಣೆ ಮಾಡುವುದಾಗಿ ಚಿಕ್ಕಮಗಳೂರು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಕೆಲ ತಿಂಗಳಲ್ಲಿ ಮೂರು ಜನರನ್ನು ಆನೆಗಳು ಬಲಿ ಪಡೆದಿವೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಸ್ಥಳೀಯರು ಅರಣ್ಯ ಇಲಾಖೆ‌ ಸ್ವತ್ತು ಧ್ವಂಸ ಮಾಡಿದ್ದರು.

ವಿಡಿಯೋ:

You Might Also Like This