Ode to the west wind

Join Us on WhatsApp

Connect Here

ಆನೆ ಕರೆಸಿ ಚಿರತೆ ಓಡಿಸ್ತೀನಿ, ಅರಣ್ಯ ಸಚಿವರ ಪತ್ರಿಕಾಗೋಷ್ಠಿಯಲ್ಲಿ ವಿನೋದ..!

WhatsApp
Facebook
Twitter
LinkedIn

ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿಂದ ಅರ್ಜುನಾ ಹಾಗೂ ಆಲೆ ಎಂಬ ಎರಡು ಆನೆಗಳು  ಅರಣ್ಯ ಸಚಿವ ಉಮೇಶ ಕತ್ತಿ ಆದೇಶದ ಮೇರೆಗೆ ಬೆಳಗಾವಿಯಲ್ಲಿ ಚಿರತೆ ಬೆನ್ನಟ್ಟಲು ತೆರಳಿವೆ.

Sakrebilu elephant camp

ಬೆಳಗಾವಿಯಲ್ಲಿ ಸೋಮವಾರ ಅರಣ್ಯ ಇಲಾಖೆ ಸಭಾಂಗಣದಲ್ಲಿ ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸಭೆ ನಡೆಸಿ ಬಳಿಕ ಅರಣ್ಯ ಸಚಿವ ಕತ್ತಿ ಮಾತನಾಡಿ, ಚಿರತೆ ಸಮಸ್ಯೆ ಬಗ್ಗೆ ಪತ್ರಕರ್ತರೊಂದಿಗೆ ವಿನೋದದಿಂದ ಮಾತನಾಡಿದರು.ಕಳೆದ 20 ದಿನಗಳಿಂದ ಬೆಳಗಾವಿ ಜಿಲ್ಲೆಯ ನಾಲ್ಕು ಕಡೆ ಚಿರೆತೆ ಹಾವಳಿ ಕಂಡು ಬಂದಿತ್ತು. ಚಿಕ್ಕೋಡಿಯಲ್ಲಿ ಭಾಗದಲ್ಲಿ ಕಂಡು‌ ಬಂದಿದ್ದ ಚಿರತೆ ಅಥಣಿ ಮೂಲಕ‌ ಮಹಾರಾಷ್ಟ್ರಕ್ಕೆ ಹೋಗಿರುವ ಮಾಹಿತಿ ಇದೆ. ಮೂಡಲಗಿ ಹಾಗೂ ಸವದತ್ತಿಯಲ್ಲಿ 10 ದಿನಗಳಿಂದ ಚಿರತೆ ಉಪಟಳ ಕಂಡು ಬಂದಿಲ್ಲ. ಬೆಳಗಾವಿ ಗಾಲ್ಫ್ ನಲ್ಲಿ ಕಣ್ಮರೆಯಾಗಿದ್ದ ಚಿರತೆ ಸೋಮವಾರ ಬೆಳಗ್ಗೆ ಸ್ಥಳೀಯರಿಗೆ ಕಾಣಿಸಿಕೊಂಡಿದೆ. ಈ‌ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ಮಾಡಿದ್ದಾರೆ. ನುರಿತ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಅರಿವಳಿಕೆ ತಜ್ಞರನ್ನು ಸಹ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಎಂದರು.

ಸಕ್ರೆಬೈಲು ಬಿಡಾರದ ಎರಡೂ ಆನೆಗಳ ಮೂಲಕ ಚಿರತೆ  ಕಾರ್ಯಾಚರಣೆ ನಡೆಸಲಾಗುವುದು. ಎರಡ್ಮೂರು ದಿನದಲ್ಲಿ ಚಿರತೆ ಸೆರೆ ಹಿಡಿಯಲಾಗುವುದು ಎಂದರು. 120 ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ 80 ಪೊಲೀಸ್ ಸಿಬ್ಬಂದಿಗಳನ್ನ ನಿಯೋಜನೆ ಮಾಡಲಾಗಿದೆ. ಗಾಲ್ಫ್ ‌ಮೈದಾನದಲ್ಲಿರುವ ಚಿರತೆ ಹಿಡಿಯಲು ಅರಣ್ಯ ಇಲಾಖೆ ನಿರ್ಲಕ್ಷ್ಯ ಮಾಡಿದ್ದಾರೆ ಎನ್ನುವ‌ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಜಿಲ್ಲಾಡಳಿತ, ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಮನ್ವಯತೆಯಿಂದ ಕೆಲಸ ಮಾಡುತ್ತಾರೆ. ಶೀಘ್ರದಲ್ಲೇ ಚಿರತೆ ಸೆರೆ ಹಿಡಿಯುತ್ತೇವೆ. ಅರಣ್ಯ ಸಚಿವರು ಸ್ಥಳ ಪರಿಶೀಲನೆ ಮಾಡಬೇಕು ಎಂದು ಕಾನೂನಿಲ್ಲ, ತಾವು  ಹೋಗೋದಿಲ್ಲ ಎಂದರು.

ಅರಣ್ಯ ಸಚಿವರ ಹಾಸ್ಯಾಸ್ಪದ ಪತ್ರಿಕಾಗೋಷ್ಠಿ ವಿಡಿಯೋ ‌ಇಲ್ಲಿದೆ ನೋಡಿ,

You Might Also Like This