Ode to the west wind

Join Us on WhatsApp

Connect Here

ನಾಯಿ ಮುಖವಿರುವ ಹುಲಿ‌ ಕಂಡು ಬೆಚ್ಚಿದ ಜನ

WhatsApp
Facebook
Twitter
LinkedIn

ಬೆಳೆಯನ್ನು ರಕ್ಷಿಸಿಕೊಳ್ಳುವ ಸಲುವಾಗಿ ರೈತರು ಬಳಿದಿರುವ ಹುಲಿ ಬಣ್ಣದ ಪಟ್ಟಿಯ ನಾಯಿ ಹನೂರು – ಅಜ್ಜೀಪುರ ಮಾರ್ಗದಲ್ಲಿ ಸಂಚರಿಸಿಸುತ್ತಿತ್ತು. ಇದನ್ನ‌‌‌ ಕಂಡ ಸಾರ್ವಜನಿಕರು ಭಯಭೀತರಾಗಿದ್ದರು. ಇದು ಆತಂಕವನ್ನು ಉಂಟು ಮಾಡಿತ್ತು.

ಅಜ್ಜೀಪುರ ಗ್ರಾಮದ ಅರಣ್ಯದಂಚಿನಲ್ಲಿ ಕೆಲ ರೈತರು ಜಮೀನನ್ನು ಹೊಂದಿದ್ದರು. ಆಗ್ಗಾಗ್ಗೆ ಕೋತಿಗಳು ಲಗ್ಗೆ ಇಟ್ಟು ಫಸಲನ್ನು ಹಾಳು ಮಾಡುತ್ತಿದ್ದವು. ಇದರಿಂದ ರೈತರು ರೋಸಿ ಹೋಗಿದ್ದರು. ಕೋತಿಗಳ ಹಾವಳಿಯನ್ನು ತಡೆಗಟ್ಟುವ ಉದ್ಧೇಶದಿಂದ ರೈತರು ತಮ್ಮ ಕೈಚಳಕವನ್ನು ತೋರಿಸಿದ್ದು, ನಾಯಿಯೊಂದಕ್ಕೆ ಹುಲಿ ಪಟ್ಟಿಯನ್ನು ಬಣ್ಣದಿಂದ ಬಳಿದು ಸಂಚರಿಸಲು ಬಿಟ್ಟಿದ್ದಾರೆ. ಈ ಹುಲಿ ವೇಷಧಾರಿತ ನಾಯಿಯು ಮೊದಲು ಗ್ರಾಮ ಸಮೀಪ ಆಗಮಿಸಿದಾಗ ಜನರು ಹುಲಿ ಎಂದು ತಿಳಿದು ಬೆಚ್ಚಿ ಬಿದ್ದಿದ್ದರು. ಬಳಿಕ ನಿಜಾಂಶ ತಿಳಿದು ಕುತೂಹಲ ವ್ಯಕ್ತಪಡಿಸಿ ರೈತರ ಈ ತಂತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆದರೆ ಈ ನಾಯಿಯು ರಸ್ತೆ ಬದಿ ಸೇರಿದಂತೆ ಅರಣ್ಯದಂಚಿನಲ್ಲಿ ಅಡ್ಡಾಡುತ್ತಿದ್ದು, ಇದನ್ನು ಕಂಡ ಈ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರಲ್ಲಿ ಭಯವನ್ನು ಉಂಟು ಮಾಡಿದರೆ ಸ್ಥಳೀಯರಲ್ಲಿ ಮನರಂಜನೆಯ ಕುತೂಹಲವನ್ನು ಕೆರಳಿಸಿದೆ.

ಇದೇ ತರಹದ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ‌ತಾಲೂಕು‌ ನಾಲೂರಿನಲ್ಲಿ‌ ನಡೆದಿತ್ತು. ರೈತನೊಬ್ಬ ಮಂಗಗಳನ್ನೋಡಿಸಲು ನಾಯಿಗೆ ಹುಲಿ ಬಣ್ಣ ಬಳಿದು ಅಚ್ಛರಿ ಸೃಷ್ಟಿಸಿದ್ದ.‌ ನಾಲೂರು‌ ನಾಯಿ‌ ರಾಷ್ಟ್ರಾದ್ಯಂತ ‌ಸದ್ದು ಮಾಡಿತ್ತು.

ವಿಡಿಯೊ:

https://youtu.be/M_tMGBb4C68

You Might Also Like This