ಬಿಸಿಲ ಬೇಗೆ, ಅರಣ್ಯದೊಳಗಿನ ನೀರು ಗುಂಡಿಗಳಿಗೆ ತುರ್ತಾಗಿ ಜಲಪೂರಣ

ಬೆಂಗಳೂರು: ಅರಣ್ಯದೊಳಗೆ ಮೃಗ ಪಕ್ಷಿಗಳಿಗೆ ನೀರಿನ ಕೊರತೆ ಆಗದಂತೆ ನೀರುಗುಂಡಿ (ವಾಟರ್ ಹೋಲ್)ಗಳಿಗೆ ಜಲಪೂರಣ ಮಾಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದು, ಅರಣ್ಯ ಇಲಾಖೆ ಕೆರೆ, ಕಟ್ಟೆಗೆ ನೀರು ತುಂಬಿಸುವ ಕಾರ್ಯ ಆರಂಭಿಸಿದೆ. ಬಂಡೀಪುರ ರಕ್ಷಿತ ಅರಣ್ಯಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಅರಣ್ಯ ಸಚಿವರು, ಮಳೆಯ ಕೊರತೆಯಿಂದ ಬೇಸಿಗೆ ಪೂರ್ವದಲ್ಲೇ ಬಿರುಬಿಸಿಲು ಕಾಣಿಸಿಕೊಂಡಿದ್ದನ್ನ ಪರಿಶೀಲಿಸಿದ್ದರು. ನೀರಿಲ್ಲದೆ ಬರಿದಾಗುತ್ತಿರುವ ಜಲಗುಂಡಿಗಳನ್ನು ಕಂಡು ಕಳವಳ ವ್ಯಕ್ತಪಡಿಸಿದ್ದರು. ಇದರಿಂದ ನೀರು ಅರಸಿ ವನ್ಯಜೀವಿಗಳು ಕಾಡಿನಿಂದ ನಾಡಿಗೆ […]