ಪ್ರತಾಪ್ ಸಿಂಹ ತಮ್ಮ ವಿಕ್ರಂ ಬಂಧನ ಅನಿವಾರ್ಯ: ಅರಣ್ಯ ಸಚಿವ ಖಂಡ್ರೆ

ವಿಕ್ರಂ ಸಿಂಹ ಬಂಧನದ ಬಗ್ಗೆ ಅರಣ್ಯ ಸಚಿವರ ಪ್ರತಿಕ್ರಿಯೆ ಬೀದರ್, ಡಿ. 30: ಪ್ರಕೃತಿ ಪರಿಸರ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ. ಆದರೆ ಬೇಲೂರು ತಾಲೂಕು ನಂದಗೋಡನ ಹಳ್ಳಿಯಲ್ಲಿ 126ಕ್ಕೂ ಹೆಚ್ಚು ಮರಗಳನ್ನು ಅಕ್ರಮವಾಗಿ ಕಡಿಯಲಾಗಿದೆ. ಇದರಲ್ಲಿ 50-60 ವರ್ಷದ ಬೃಹತ್ ಹಳೆಯ ಮರಗಳೂ ಇವೆ. ಈ ರೀತಿ ಸ್ವಾರ್ಥಕ್ಕಾಗಿ ಯಾರೇ ಮರ ಕಡಿದರೂ ಅದು ಅಪರಾಧ. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. […]
ಪ್ರತಾಪ್ ಸಿಂಹ ಸಹೋದರನ ಮೇಲೆ ಮರ ಅಕ್ರಮ ಕಡಿತಲೆ ಆರೋಪ

ಹಾಸನ: ರಾತ್ರೋರಾತ್ರಿ ಕೋಟ್ಯಂತರ ರುಪಾಯಿ ಬೆಲೆಬಾಳುವ ಮರಗಳ ಹನನ ಮಾಡಿರುವ ಆರೋಪ ಬಿಜೆಪಿ ಎಂಪಿ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಮ್ ಸಿಂಹ ಅವರಿಗೆ ಸುತ್ತಿಕೊಂಡಿದೆ. ಈ ಕುರಿತು ರಾಜ್ಯ ಕಾಂಗ್ರೆಸ್ ಅಧಿಕೃತ X ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಬೆಲೆಬಾಳುವ ಮರಗಳ ಮಾರಣಹೋಮಕ್ಕೆ ವಿಕ್ರಮ್ ಕಾರಣ ಎಂದು ಆರೋಪಿಸಲಾಗಿದೆ.ಹಾಸನ ಜಿಲ್ಲೆ ಬೇಲೂರು ತಾಲೂಕು ತಹಸೀಲ್ದಾರ್ ಮಮತಾ ಎಂಬುವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿರುವ ವಿಡಿಯೋವನ್ನ ಪ್ರಕಟಿಸಿ ಪ್ರತಾಪ್ ಸಿಂಹ ಹಾಗೂ ಬಿಜೆಪಿಗೆ ಚಾಟಿ ಬೀಸಿದೆ. ಪೋಸ್ಟ್ […]