Ode to the west wind

Join Us on WhatsApp

Connect Here

ತುಂಗಾ ತೀರದಲ್ಲಿದಿದೆ ಸಂಗೀತ ಗ್ರಾಮ, ಇಲ್ಲಿನ ಸಾಧನಕನಿಗೆ ಪದ್ಮಶ್ರೀ ಗೌರವ.

ಗಮಕ ಗಂಧರ್ವ ಹೊಸಹಳ್ಳಿಯ ಹೆಚ್‌ಆರ್‌ ಕೇಶವಮೂರ್ತಿಗೆ ೨೦೨೨ರ ಪದ್ಮಶ್ರೀ ಕಲಾವಿಭಾಗದಲ್ಲಿ ಸಂದಿದೆ. ಮಲೆನಾಡಿನ ತುಂಗಾ ಮಡಿಲಲ್ಲಿರುವ ಪುಟ್ಟ ಹಳ್ಳಿ ಈ ಗಾರುಡಿಗನಿಂದ ದೇಶದಲ್ಲೆ ಹೆಸರು ಮಾಡುವಂತಾಗಿದೆ. ಸುಮಾರು ೮೮ ವರ್ಷ ಇಳಿವಯಸ್ಸಿನಲ್ಲೂ ಸಂಗೀತ ಸುಧೆ ಹರಿಸುವ ಕೇಶವಮೂರ್ತಿಗಳ ಸಾಧನೆಯನ್ನ ಇಡೀ ಜಿಲ್ಲೆ ಕೊಂಡಾಡಿದೆ. ಶಿವಮೊಗ್ಗದ ಮತ್ತೂರು-ಹೊಸಹಳ್ಳಿ ಅವಳಿ ಗ್ರಾಮಗಳು ಸಂಗೀತ ಪರಂಪರೆ, ವೇದ-ಶಾಸ್ತ್ರ ಅಧ್ಯಯನಗಳಿಗೆ ತನ್ನದೇ ಆದ ಕೊಡುಗೆಗಳನ್ನ ನೀಡಿವೆ. ಮತ್ತೂರು ಸಂಸ್ಕೃತ ಗ್ರಾಮ ಎಂದು ಎಲ್ಲರಿಗೂ ತಿಳಿದಿದೆ ಆದರೆ ಹೊಸಹಳ್ಳಿ ಗಮಕ ಗ್ರಾಮ ಎಂಬುದು ಗೊತ್ತಿಲ್ಲ. […]

ಗಾಳಕ್ಕೆ ಸಿಕ್ಕ ಮೊಸಳೆ, ತುಂಗಾ ನದಿ ಮೇಲಿನ ದೌರ್ಜನ್ಯದ ಕಥೆ ಹೇಳುತ್ತಿದೆ.

ಶಿವಮೊಗ್ಗದಲ್ಲಿ ಹರಿವ ಅವಳಿ ನದಿಗಳಾದ ತುಂಗಾ ಹಾಗೂ ಭದ್ರಾ ಕೂಡ್ಲಿಯಲ್ಲಿ ಸಂಗಮವಾಗಿ ತುಂಗಾ ಭದ್ರಾ ನದಿಯಾಗಿ ಹರಿದು ಸಾಗುತ್ತವೆ. ಈ ನದಿ ಮಲೆನಾಡಿನಲ್ಲಿ ವಿಶಿಷ್ಟ ಜೀವಸಂಕುಲಕ್ಕೆ ಆಶ್ರಯ ನೀಡಿದೆ. ಖಗ-ಮೃಗ, ಜಲಚರಗಳಿಗೆ ಆವಾಸ ಸ್ಥಾನವಾಗಿವೆ. ಅಳಿವಿನಂಚಿಗೆ ಬಂದಿರುವ ಮೊಸಳೆಗಳಿಗೂ ಕೂಡ ಸಂತಾನೋತ್ಪತ್ತಿಗೆ ಪ್ರಾಶಸ್ತ್ಯವಾದ ಸ್ಥಳ ಎಂದು ಸಾಬೀತು ಮಾಡಿದೆ.  ಈ ಭಾಗದ ಜನರಿಗೆ ಮೊದಲಿಂದಲೂ ಭದ್ರಾ ನದಿ ನೀರಿನಲ್ಲಿ ಮೊಸಳೆಗಳಿರುವ ಮಾಹಿತಿ ಇದೆ. ಹಾಗೂ ಭದ್ರಾ ನದಿಯಲ್ಲಿ ಆಗಾಗ ಮೊಸಳೆಗಳು ಕಾಣಿಸಿಕೊಳ್ಳುತ್ತವೆ ಆದರೆ ತುಂಗಾ ನದಿಯಲ್ಲಿ ಮೊಸಳೆಗಳಿವೆ […]