ಗಾಳಕ್ಕೆ ಸಿಕ್ಕ ಮೊಸಳೆ, ತುಂಗಾ ನದಿ ಮೇಲಿನ ದೌರ್ಜನ್ಯದ ಕಥೆ ಹೇಳುತ್ತಿದೆ.

ಶಿವಮೊಗ್ಗದಲ್ಲಿ ಹರಿವ ಅವಳಿ ನದಿಗಳಾದ ತುಂಗಾ ಹಾಗೂ ಭದ್ರಾ ಕೂಡ್ಲಿಯಲ್ಲಿ ಸಂಗಮವಾಗಿ ತುಂಗಾ ಭದ್ರಾ ನದಿಯಾಗಿ ಹರಿದು ಸಾಗುತ್ತವೆ. ಈ ನದಿ ಮಲೆನಾಡಿನಲ್ಲಿ ವಿಶಿಷ್ಟ ಜೀವಸಂಕುಲಕ್ಕೆ ಆಶ್ರಯ ನೀಡಿದೆ. ಖಗ-ಮೃಗ, ಜಲಚರಗಳಿಗೆ ಆವಾಸ ಸ್ಥಾನವಾಗಿವೆ. ಅಳಿವಿನಂಚಿಗೆ ಬಂದಿರುವ ಮೊಸಳೆಗಳಿಗೂ ಕೂಡ ಸಂತಾನೋತ್ಪತ್ತಿಗೆ ಪ್ರಾಶಸ್ತ್ಯವಾದ ಸ್ಥಳ ಎಂದು ಸಾಬೀತು ಮಾಡಿದೆ. ಈ ಭಾಗದ ಜನರಿಗೆ ಮೊದಲಿಂದಲೂ ಭದ್ರಾ ನದಿ ನೀರಿನಲ್ಲಿ ಮೊಸಳೆಗಳಿರುವ ಮಾಹಿತಿ ಇದೆ. ಹಾಗೂ ಭದ್ರಾ ನದಿಯಲ್ಲಿ ಆಗಾಗ ಮೊಸಳೆಗಳು ಕಾಣಿಸಿಕೊಳ್ಳುತ್ತವೆ ಆದರೆ ತುಂಗಾ ನದಿಯಲ್ಲಿ ಮೊಸಳೆಗಳಿವೆ […]