ಬಾರದ ಮಳೆ, ಬಿಸಿಲ ಬೇಗೆ, ಸಿಗಂದೂರು ಲಾಂಚ್ ಸ್ಥಗಿತಕ್ಕೆ ದಿನಗಣನೆ:

ಹಲವು ವರ್ಷಗಳ ನಂತರ ಮಲೆನಾಡಿನಲ್ಲಿ ಜೂನ್ ತಿಂಗಳೂ ಬೇಸಿಗೆಯಂತಾಗಿದೆ. ಮಳೆ ಮುನ್ಸೂಚನೆ ಕಾಣದೇ ಭೂಮಿ ಬರಡಾದಂತಾಗಿದೆ. ಮಲೆನಾಡಿನ ಪ್ರಮುಖ ನದಿ ಶರಾವತಿ ತನ್ನ ಹರಿವಿನುದ್ದಕ್ಕೂ ಬತ್ತಿ ಹೋಗಿದೆ. ದಿನೇ ದಿನೇ ನೀರು ಬಸಿದು ಹೋಗುತ್ತಿರುವುದರಿಂದ ಸಿಗಂದೂರು ಲಾಂಚ್ ಗಳು ಸೇವೆ ಸ್ಥಗಿತಗೊಳಿಸಲಿವೆ. ರಾಜ್ಯದ ಪ್ರಮುಖ ಪ್ರವಾಸಿತಾಣವಾಗಿರುವ ಸಿಗಂದೂರಿಗೆ ಬರುವ ಪ್ರವಾಸಿಗರ ವಾಹನಗಳನ್ನ ನಿಷೇಧಿಸುವ ಆತಂಕ ಎದುರಾಗಿದೆ. ಈಗಾಗಲೇ ಹೊಳೆಬಾಗಿಲು ತೀರದಲ್ಲಿ ಲಾಂಚ್ ಏರುವ ದಿಂಬದಲ್ಲಿ ನೀರು ಕಡಿಮೆಯಾಗಿದೆ. ವಾಹನಗಳನ್ನ ಲಾಂಚ್ ಗೆ ಏರಿಸಲು ಕಷ್ಟವಾಗುತ್ತಿದೆ. ಇನ್ನೆರಡು ದಿನ […]