ಕಾಡುಕೋಣ-ಕಾಡೆಮ್ಮೆ ಕೊಂದ ಆರೋಪಿ ಪರಾರಿ:

ಸೊರಬ ತಾಲೂಕು ಚಂದ್ರಗುತ್ತಿ ಸಮೀಪ, ಕುಂದಗೋಳ- ನ್ಯಾರ್ಶಿ ಗ್ರಾಮದಲ್ಲಿ ಕಾಡುಕೋಣ ಹಾಗೂ ಕಾಡೆಮ್ಮೆಯನ್ನ ಬಲಿ ಪಡೆಯಲಾಗಿದೆ. ಕಾಡು ಪ್ರಾಣಿ ಬೇಟೆಗೆ ಬಿಟ್ಟ ವಿದ್ಯುತ್ ತಂತಿಗೆ ಎರಡು ಅಮೂಲ್ಯ ಜೀವಗಳು ಮೃತಪಟ್ಟಿವೆ. ದುರಂತ ಅಂದ್ರೆ ಮೃತ ಕೋಣಗಳು ಹೊಲದಂಚಿನಲ್ಲೇ ಕೊಳೆಯುವ ಸ್ಥಿತಿಯಲ್ಲಿದ್ದರೂ ಒಂದು ವಾರ ಯಾರೂ ಮಾಹಿತಿ ನೀಡಿಲ್ಲ. ಬುಧವಾರ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಮರಣೋತ್ತರ ಪರೀಕ್ಷೆ ನಡೆಸಿ ಆರೋಪಿಯನ್ನ ಗುರುತಿಸಿದ್ದಾರೆ. ಸದ್ಯ ಘಟನೆಗೆ ಕಾರಣನಾದ ಆರೋಪಿ ತಲೆಮರೆಸಿಕೊಂಡಿದ್ದಾನೆ. ಈ ಬಗ್ಗೆ ಮಾಹಿತಿ ನೀಡಿದ ಸಾಗರ ಡಿಎಫ್ಓ ಸಂತೋಷ್, […]