ವಿಶ್ವದಲ್ಲೇ ಮೊದಲು, ಕಣ್ತೆರವ ಬುದ್ಧ, ಇದರ ಹಿಂದೆ ಸಮಾಜಮುಖಿ ಉದ್ದೇಶ..!

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಿರಿವಂತೆಯಲ್ಲಿ ಬೃಹತ್ ಗಾತ್ರದ ಬುದ್ಧನ ವಿಗ್ರಹವನ್ನ ಪ್ರತಿಷ್ಠಾಪಿಸಲಾಗಿದೆ. ಅದರಲ್ಲೇನು ವಿಶೇಷ ಅಂತೀರಾ, ಈ ಬುದ್ಧ ಕಣ್ತೆರೆದು ಜಗತ್ತನ್ನ ನೋಡ್ತಾನೆ. ಇದೊಂದು ವಿಶಿಷ್ಟ ಕಲ್ಪನೆ ಹಾಗೂ ಇದರ ಹಿಂದೆ ಉತ್ತಮ ಸಂದೇಶವಿದೆ. ಇಡೀ ವಿಶ್ವದಲ್ಲಿ ಎಲ್ಲೇ ಹೋದರೆ ಸಾಮಾನ್ಯವಾಗಿ ಧ್ಯಾನದಲ್ಲಿ ಕಣ್ಮುಚ್ಚಿ ಕುಳಿತುಕೊಂಡಿರುವ ಬುದ್ಧನ ವಿಗ್ರಹಗಳೇ ಕಾಣುತ್ವೆ. ಆದರೆ ಈ ವಿಭಿನ್ನ ವಿಗ್ರಹ ಹಲವು ಕಾರಣಕ್ಕೆ ಪ್ರಸಿದ್ಧಿ ಪಡೆಯುತ್ತಿದೆ. ಇದರ ರೂವಾರಿ ಸಿರಿವಂತೆಯ ಚಿತ್ರಸಿರಿ ಚಂದ್ರಶೇಖರ್. ಮಲೆನಾಡಿನಲ್ಲಿ ಸಾಂಕೃತಿಕ ಹಾಗೂ ಸಂಪ್ರದಾಯ ಕಲೆಗಳ […]