ಸಿಗಂದೂರು ಪ್ರವಾಸಿಗರ ತುರ್ತು ಗಮನಕ್ಕೆ: ಲಾಂಚ್ ವಾಹನಗಳಿಗೆ ನಿಷೇಧ; ಬದಲಿ ಮಾರ್ಗ ವಿವರ ಇಲ್ಲಿದೆ:

ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಪುಣ್ಯ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸಂಕಷ್ಟ ಎದುರಾಗಿದೆ. ಮಳೆ ಬಾರದೇ, ಬಿಸಿಲ ಝಳಕ್ಕೆ ಶರಾವತಿ ಹಿನ್ನೀರು ದಿನೇ ದಿನೇ ಬತ್ತುತ್ತಿದೆ. ಲಾಂಚ್ ಚಲಾಯಿಸುವುದು ಕಷ್ಟವಾಗಿದೆ. ದ್ವೀಪದ ಜನರಿಗೆ ತೊಂದರೆಯಾಗದಿರಲಿ ಎಂದು ಲಾಂಚ್‌ಗಳನ್ನ ಜನರಿಗಷ್ಟೇ ಸೀಮಿತಗೊಳಿಸಿದ್ದಾರೆ. ಇಂದಿನಿಂದ ವಾಹನಗಳಿಗೆ ನಿಷೇಧ ಹೇರಲಾಗಿದೆ. ಪ್ರವಾಸಿಗರು ಇಲ್ಲಿಗೆ ಬಂದು ಪರದಾಡುವ ಬದಲು ಬದಲಿ ಮಾರ್ಗ ನೋಡಿಕೊಳ್ಳಬೇಕಿದೆ. ಸಾಗರದಿಂದ ಇಪ್ಪತ್ತೈದು ಕಿಲೋಮೀಟರ್ ಅಂತರದಲ್ಲಿ ಶರಾವತಿ ನದಿ ಮೂವತ್ತು ಸಾವಿರ ಜನರಿರುವ ಹಳ್ಳಿಗಳನ್ನ […]