ಇಬ್ಬರ ಮೇಲೆ ದಾಳಿ ಮಾಡಿದ ಕರಡಿ ಸಾವು…!

ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕು ಬಸನಕಟ್ಟಿ ಗ್ರಾಮದಲ್ಲಿ ಇಬ್ಬರ ಮೇಲೆ ದಾಳಿ ಮಾಡಿದ್ದ ಕರಡಿ ಕೊನೆಗೂ ಅಸುನೀಗಿದೆ. ಮನುಷ್ಯ-ಪ್ರಾಣಿ ಸಂಘರ್ಷಕ್ಕೆ ಎರಡು ಮರಿಗಳನ್ನ ಅಗಲಿ ಮೃತಪಟ್ಟಿದೆ. ಬಸನಕಟ್ಟಿ ಗ್ರಾಮಕ್ಕೆ ಮರಿಗಳೊಡನೆ ಮೇಯಲು ಬಂದಿದ್ದ ಕರಡಿ ಬಸೀರ್ ಸಾಬ್ ಸೌದತ್ತಿ, ರಜಾಕ್ ಎಂಬುವರ ಮೇಲೆ ಕರಡಿ ದಾಳಿ ಮಾಡಿತ್ತು. ಈ ವೇಳೆ ಕೊಡಲಿಯಲ್ಲಿ ಕರಡಿಗೆ ಬಡಿದಿದ್ದರು. ಹಾಗೆಯೇ ಇಬ್ಬರೂ ಮಾರಣಾಂತಿಕ ದಾಳಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಅರಣ್ಯ ಅಧಿಕಾರಿಗಳು ಗಾಯಗೊಂಡು ಕರಡಿ ಶೋಧಿಸಿ ಚಿಕಿತ್ಸೆ ನೀಡಲು ವಿಫಲರಾಗಿದ್ದು ಕರಡಿ ಅಸುನೀಗಿದೆ. […]