ಭೂ ಕಬಳಿಕೆ ಆತಂಕವಿರುವ ಸರ್ಕಾರಿ ಜಾಗದಲ್ಲಿ ಹಸಿರು ಕ್ರಾಂತಿ

ಶಿವಮೊಗ್ಗ ಅಂದರೆ ಮಲೆನಾಡಿನ ಹೆಬ್ಬಾಗಿಲು.! ಆದರೆ ಶಿವಮೊಗ್ಗ ನಗರ ಪ್ರವೇಶಿಸಿದರೆ ಸಸ್ಯ ಸಂಕುಲದ ಕುರುಹುಗಳೇ ಇಲ್ಲ. ರಸ್ತೆ ಬದಿ ಅಲ್ಲಿಲ್ಲೊಂದು ಕಾಣಸಿಗುತ್ತಿದ್ದ ಗಿಡಗಳನ್ನೂ ಸಹ ವಿವೇಚನಾರಹಿತ ಸ್ಮಾರ್ಟ್ ಸಿಟಿ ಅಭಿವೃದ್ಧಿ ನಾಶಪಡಿಸಿದೆ. ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ತಂಪೆರೆಯುವ, ಶುದ್ಧ ಗಾಳಿ ನೀಡುವ ಗಿಡ ಮರಗಳಿಲ್ಲ.! ಮಲೆನಾಡಿಗೆ ಮಾದರಿಯಾಗಿರಬೇಕಿದ್ದ ನಗರ ಪ್ರವೇಶಿಸಿದರೆ ಹಸಿರೇ ಕಾಣದು, ಉಸಿರಾಡಲೂ ಶುದ್ಧ ಆಮ್ಲಜನಕವೂ ಸಿಗದು ಎಂಬ ಪರಿಸ್ಥಿತಿ ಇದೆ. ಆದರೆ ಶಿವಮೊಗ್ಗದ ಈ ಪರಿಸರಾಕ್ತರು ಎಲ್ಲರಂಥಲ್ಲ. ಭಾನುವಾರವೂ ಮನೆಯಲ್ಲಿ ಕೂರಲಿಲ್ಲ..! ಶಿವಮೊಗ್ಗ ಸ್ವಾಸ್ಥ್ಯ […]