Ode to the west wind

Join Us on WhatsApp

Connect Here

ಪ್ರವಾಸಿಗರ ಹುಚ್ಚಾಟ, ಆನೆಯಿಂದ ಬಿದ್ದ ಕಾವಾಡಿ, ಸಕ್ರೆಬೈಲ್‌ ಸರ್ಕಸ್‌ ಕಂಪನಿ ಆಗುತ್ತಿದೆಯೇ..?

ಶಿವಮೊಗ್ಗ: ಶಿವಮೊಗ್ಗದಿಂದ ಹದಿನೈದು ಕಿಲೋಮೀಟರ್‌ ಕ್ರಮಿಸಿದರೆ ಸಿಗುವ ಸಕ್ರೆಬೈಲು ಆನೆ ಬಿಡಾರ ಮಲೆನಾಡಿನ ಪ್ರಸಿದ್ಧ ಪ್ರವಾಸಿ ತಾಣ. ನಾನಾ ಕಾರಣಗಳಿಂದ ಸದಾ ಸುದ್ದಿಯಲ್ಲಿರುತ್ತೆ. ಇತ್ತೀಚೆಗಷ್ಟೇ ಇಲ್ಲಿನ ಹೊಣೆಗೇಡಿ ವೈದ್ಯನೊಬ್ಬ ಗರ್ಭಿಣಿ ಆನೆಯನ್ನ ದಸರಾ ಮೆರವಣಿಗೆ ಅಣಿಗೊಳಿಸಿ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆನೆ ಅಂಬಾರಿ ಹೊರುವ ಮುನ್ನಾ ದಿನ ಮರಿ ಹಾಕಿದರೂ ಅರಣ್ಯ ಇಲಾಖೆಯೊಳಗಿನ ಪ್ರಾಬಲ್ಯದಿಂದ ಈ ವೈದ್ಯ ಇನ್ನೂ ಉಳಿದುಕೊಂಡಿದ್ದಾನೆ. ಇದೇ ಕ್ಯಾಂಪಿನ ಇನ್ನೊಂದು ಗರ್ಭಿಣಿ ಆನೆಯ ಬಾಲವನ್ನ ಬಿಡಾರದ ಒಳಗೋ-ಹೊರಗೋ ಇರುವ ಕಿಡಿಗೇಡಿಗಳು ಅರ್ಧ ತುಂಡರಿಸಿದ್ದರು. […]

ಕಾಡಾನೆ ಸೆರೆಯ ವೇಳೆ ವೈದ್ಯ ವಿನಯ್ ಮೇಲೆ ಆನೆ ದಾಳಿ.

ದಾವಣಗೆರೆ/ ಶಿವಮೊಗ್ಗ : ನ್ಯಾಮತಿ ತಾಲ್ಲೂಕಿನ ಕೆಂಚಿಕೊಪ್ಪದ ಬಳಿ ಕಾಡಾನೆ ಸೆರೆಗೆ ಕಾರ್ಯಾಚರಣೆ ನಡೆಸುವ ವೇಳೆ ಸಕ್ರೆಬೈಲು ಆನೆ ಕ್ಯಾಂಪಿನ ವೈದ್ಯಾಧಿಕಾರಿ ಡಾ. ವಿನಯ್ ಅವರ ಮೇಲೆ ಆನೆ ಮಾಡಿದ್ದು, ಗಾಯಗೊಂಡು ವಿನಯ್ ಅವರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೇಗೆ ನಡೀತು ದಾಳಿ: ಮೂರು ದಿನಗಳಿಂದ ಸೂಳೆಕೆರೆಯ ಸುತ್ತಮುತ್ತ ಕಾಡಾನೆಯನ್ನು ಸೆರೆಹಿಡಿಯಲು ಶಿವಮೊಗ್ಗ-ಭದ್ರಾವತಿ- ಚನ್ನಗಿರಿ-ಹೊನ್ನಾಳಿಯ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರು. ಈ ಕಾರ್ಯಾಚರಣೆ ಕಳೆದೊಂದು ವಾರದಿಂದ  ಮುಂದುವರೆದಿತ್ತು. ಆನೆಯ ಲದ್ದಿ ಸುಳಿವಿನ ಮೂಲಕ ಸುತ್ತಲಿನ ಪ್ರದೇಶದಲ್ಲಿ […]

ಚಿರತೆ ಕಾರ್ಯಾಚರಣೆಗೆ ಬಂದ ಆನೆಗಾಗಿ ಕಬ್ಬು ಕದ್ದರಾ ಅರಣ್ಯ ಸಿಬ್ಬಂದಿ:

ಶಿವಮೊಗ್ಗ ಜಿಲ್ಲೆ ಸಕ್ರೆಬೈಲು ಆನೆ ಬಿಡಾರದಿಂದ ಬೆಳಗಾವಿಗೆ ಆಗಮಿಸಿರುವ 2 ಆನೆಗಳು ಚಿರತೆ ಶೋಧ ಕಾರ್ಯದಲ್ಲಿ ಭಾಗಿಯಾಗಿವೆ. ಆದರೆ ಆನೆಗಳಿಗೆ ಅಹಾರ ನೀಡಲು ಅರಣ್ಯಾಧಿಕಾರಿಗಳು ರೈತನ ಹೊಲದ ಕಬ್ಬನ್ನ ಹೇಳದೇ ಕದ್ದು ತಂದ ಆರೋಪ ಎದುರಾಗಿದೆ. ಅರಣ್ಯ ಸಚಿವ ಉಮೇಶ್ ಕತ್ತಿ ಜಿಲ್ಲೆಯಲ್ಲೇ‌ ಇಂತಹ ‌ಆರೋಪವನ್ನ ರೈತರು ಹೊರಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ  ಬೆಳಗಾವಿ ಸಿಸಿಎಫ್ ಮಂಜುನಾಥ ಚೌವ್ಹಾಣ್, ರೈತನಿಗೆ ಮಾಹಿತಿ ನೀಡದೇ ಕಬ್ಬು ಕಟಾವು ಮಾಡಿಕೊಂಡು ಬಂದಿರುವುದು ಮಾಧ್ಯಮಗಳಿಂದ ಗೊತ್ತಾಗಿದೆ. ಕಬ್ಬು ಕಟಾವು ಮಾಡಿಕೊಂಡ ಬಂದ […]