ಶರಾವತಿ ಹಿನ್ನೀರು ಇಳಿಕೆ, ಮುಪ್ಪಾನೆ ಲಾಂಚ್ ಸೇವೆ ಸ್ಥಗಿತ.

ಶರಾವತಿ ಹಿನ್ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ಶಿವಮೊಗ್ಗ ಜಿಲ್ಲೆ, ಸಾಗರದ ಮುಪ್ಪಾನೆ ಲಾಂಚ್ ಸೇವೆಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಬಂದರು ಮತ್ತು ಒಳನಾಡು ಜಾಲ ಸಾರಿಗೆ ಇಲಾಖೆ ನಿರ್ಧರಿಸಿದೆ. ಲಾಂಚ್ ಮತ್ತು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಶರಾವತಿ ಹಿನ್ನೀರು ಭಾಗದ ಹಲ್ಕೆ – ಮುಪ್ಪಾನೆ ಲಾಂಚ್ ಸಂಚರಿಸುತ್ತಿತ್ತು. ಲಾಂಚ್‌ಗೆ ಮರದ ದಿಮ್ಮಿಗಳು, ಮರಳಿನ ದಿಬ್ಬ ತಗುಲುತ್ತಿದೆ. ನೀರಿನ ಮಟ್ಟ ಕುಸಿತದಿಂದಾಗಿ ಈ ರೀತಿಯಾಗಿದೆ. ಶರಾವತಿ ಹಿನ್ನೀರು ಭಾಗದಲ್ಲಿ ಈವರೆಗೆ ವಾಡಿಕೆ ಮಳೆಯಾಗಿಲ್ಲ. ಮುಂಗಾರು […]
ಪಾಳುಬಿದ್ದಿದ್ದ ಐತಿಹಾಸಿಕ ಪುಷ್ಕರಣಿಗೆ ಯಶೋಮಾರ್ಗದಿಂದ ಮರು ಜೀವ..!

ನಾಲ್ಕುನೂರು ವರ್ಷಗಳ ಇತಿಹಾಸವಿರುವ ಐತಿಹಾಸಿಕ ಪುಷ್ಕರಣಿ `ಚಂಪಕ ಸರಸ್ಸು’ (Champaka Sarasu) ಆರೇ ತಿಂಗಳಲ್ಲಿ ಯಶೋಮಾರ್ಗದ ಮೂಲಕ ಪುನಶ್ಚೇತನಗೊಂಡು ಲೋಕಾರ್ಪಣೆಗೊಂಡಿದೆ. ಖ್ಯಾತ ಪರಿಸರ ಹಾಗೂ ಜಲತಜ್ಞ ಶಿವಾನಂದ ಕಳವೆ ನೇತೃತ್ವದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪುಷ್ಕರಣಿಯನ್ನ ಗ್ರಾಮದ ಸುಪರ್ದಿಗೆ ನೀಡಲಾಗಿದೆ. ಈ ಪುಷ್ಕರಣಿಯ ಹಿಂದಿನ ಇತಿಹಾಸ ಹಾಗೂ ಪ್ರೇಮ ಕಥೆಯನ್ನ ಕೇಳಿದ್ದ ಯಶ್ (Actor Yash) ತನ್ನ ಯಶೋಮಾರ್ಗದ (Yashomarga) ಮೂಲಕ ಮಲೆನಾಡಿನ ಮೂಲೆಗೂ ತಮ್ಮ ಸಾಮಾಜಿಕ ಕಾರ್ಯ ವಿಸ್ತರಿಸಿದ್ದು ಕೂಡ ಕುತೂಹಲಕಾರಿ ವಿಷಯ. ಮಹಾಂತಿನ ಮಠ […]
ಚನ್ನಮ್ಮಾಜಿ ಕೆರೆಬೇಟೆ ಹಾಗೂ ಮಲೆನಾಡಿನ ಸಾಂಪ್ರದಾಯಿಕ ಮೀನು ಶಿಕಾರಿ..!

ಮಲೆನಾಡಿನಲ್ಲಿ ಬುಡಕಟ್ಟು ಹಿನ್ನೆಲೆ ಇರುವ ಸಮುದಾಯಗಳಲ್ಲಿ ಅದರಲ್ಲೂ ಈಡಿಗ ಮತ್ತು ಒಕ್ಕಲಿಗರು ಶಿಕಾರಿ, ಮೀನು ಬೇಟೆಯನ್ನ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬಂದಿದ್ದಾರೆ. ಅರಣ್ಯ ಕಾನೂನುಗಳು ಬಿಗಿಯಾದ ಮೇಲೆ ಶಿಕಾರಿ ಜನಮಾನಸದಿಂದ ಮರೆಯಾಯ್ತು. ಆದರೆ ವರ್ಷವಿಡೀ ಮೀನು ಹಿಡಿಯುವ ಶೈಲಿಗಳು ಇಂದಿಗೂ ಬೇರೆ ಬೇರೆ ಹೆಸರಲ್ಲಿ ಉಳಿದುಕೊಂಡು ಬಂದಿವೆ. ಮುಂಗಾರು ಆರಂಭವಾಗುತ್ತಿದ್ದಂತೆ ಹಳ್ಳ-ಕೊಳ್ಳಗಳಿಂದ ನೀರಿನ ಸೆಳೆವಿನಲ್ಲಿ ಹತ್ತಿ ಬರುವ ಮೀನುಗಳನ್ನ ಹಿಡಿಯಲು ರಾತ್ರಿ ಬ್ಯಾಟರಿ ಇಟ್ಟುಕೊಂಡು ತೆರಳುತ್ತಾರೆ ಅವುಗಳಿಗೆ ಹತ್ತು ಮೀನು ಹೊಡೆಯೋದು ಎಂಬ ಪದ ಪ್ರಯೋಗವಿದೆ. ನೀರು ಇಳಿಯುತ್ತಿದ್ದಂತೆ […]
ವಿಶ್ವದಲ್ಲೇ ಮೊದಲು, ಕಣ್ತೆರವ ಬುದ್ಧ, ಇದರ ಹಿಂದೆ ಸಮಾಜಮುಖಿ ಉದ್ದೇಶ..!

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಿರಿವಂತೆಯಲ್ಲಿ ಬೃಹತ್ ಗಾತ್ರದ ಬುದ್ಧನ ವಿಗ್ರಹವನ್ನ ಪ್ರತಿಷ್ಠಾಪಿಸಲಾಗಿದೆ. ಅದರಲ್ಲೇನು ವಿಶೇಷ ಅಂತೀರಾ, ಈ ಬುದ್ಧ ಕಣ್ತೆರೆದು ಜಗತ್ತನ್ನ ನೋಡ್ತಾನೆ. ಇದೊಂದು ವಿಶಿಷ್ಟ ಕಲ್ಪನೆ ಹಾಗೂ ಇದರ ಹಿಂದೆ ಉತ್ತಮ ಸಂದೇಶವಿದೆ. ಇಡೀ ವಿಶ್ವದಲ್ಲಿ ಎಲ್ಲೇ ಹೋದರೆ ಸಾಮಾನ್ಯವಾಗಿ ಧ್ಯಾನದಲ್ಲಿ ಕಣ್ಮುಚ್ಚಿ ಕುಳಿತುಕೊಂಡಿರುವ ಬುದ್ಧನ ವಿಗ್ರಹಗಳೇ ಕಾಣುತ್ವೆ. ಆದರೆ ಈ ವಿಭಿನ್ನ ವಿಗ್ರಹ ಹಲವು ಕಾರಣಕ್ಕೆ ಪ್ರಸಿದ್ಧಿ ಪಡೆಯುತ್ತಿದೆ. ಇದರ ರೂವಾರಿ ಸಿರಿವಂತೆಯ ಚಿತ್ರಸಿರಿ ಚಂದ್ರಶೇಖರ್. ಮಲೆನಾಡಿನಲ್ಲಿ ಸಾಂಕೃತಿಕ ಹಾಗೂ ಸಂಪ್ರದಾಯ ಕಲೆಗಳ […]