ಸಾಲು ಕೋಳಿ ಸಾವುಗಳಿಗೆ ಪರಿಹಾರ ಸಿಗ್ತು, ಗೋಧಿ ನಾಗರ ಸೆರೆಸಿಕ್ತು.

ಚಿಕ್ಕಮಗಳೂರಿನಲ್ಲಿ ಕೋಳಿಗೂಡಿನಲ್ಲಿ ಸಿಕ್ಕ ಭಾರಿ ಗಾತ್ರದ ಗೋಧಿ ನಾಗರಹಾವನ್ನ ಕಂಡ ರೈತ ಕುಟುಂಬ ಉರಗ ತಜ್ಞ ಹರೀಂದ್ರಾಗೆ ಫೋನ್ ಮಾಡಿ ವಿಷಯ ತಿಳಿಸಿತ್ತು. ಉರಗ ರಕ್ಷಣೆಗೆ ಬಂದ ಹರೀಂದ್ರಾಗೆ ಶಾಕ್ ಕಾದಿತ್ತು. ಹಾವಿನ ಗಾತ್ರವೇ ಆರೂವರೆ ಅಡಿ ಇತ್ತು. ಇಷ್ಡು ಉದ್ದದ ಗೋಧಿ ನಾಗರ ಉರಗ ತಜ್ಞ ನೋಡಿಯೇ ಇರಲಿಲ್ಲವಂತೆ…!! ಎನ್ ಆರ್ ಪುರ ತಾಲೂಕಿನ ಕಾರೆಹಳ್ಳಿಯ ಶಂಕರ್ ಎಂಬುವರ ಮನೆಯ ಕೋಳಿ ಗೂಡಿನಲ್ಲಿದ್ದ ಗೋಧಿ ನಾಗರಹಾವನ್ನಉರಗ ತಜ್ಞ ಹರಿಂದ್ರಾ ರಕ್ಷಿಸಿದ್ದಾರೆ. ಹಾವಿನ ಉದ್ದ 6.5 ಉದ್ದವಿತ್ತು. […]