ಆನೆ ದಾಳಿಯಿಂದ ಸಿಕ್ಕಿ ಬಿದ್ದ ನಕ್ಸಲ್ ಆರೋಪಿತ.!

ಕಾಡಾನೆ ದಾಳಿಯಿಂದ ಸಿಕ್ಕಿ ಬಿದ್ದ ಮೋಸ್ಟ್ ವಾಂಟೆಡ್ ನಕ್ಸಲ್ ಕೇರಳದಲ್ಲಿ ಸೆರೆಯಾಗಿದ್ದಾನೆ. ಕರ್ನಾಟಕದ ಮೋಸ್ಟ್ ವಾಂಟೆಡ್ ಭೂಗತ ನಕ್ಸಲ್ ಅಂಗಡಿ ಸುರೇಶ್ ಗೆ ಕೇರಳದ ಕಣ್ಣೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದ ಸುರೇಶ್ ಕಳೆದ 20 ವರ್ಷಗಳಿಂದ ಭೂಗತರಾಗಿದ್ದರು. ಸುರೇಶ್ ಸುಳಿವು ನೀಡಿದವರಿಗೆ 5 ಲಕ್ಷ ಬಹುಮಾನ ನೀಡುವುದಾಗಿ ಪೊಲೀಸರು ಘೊಷಿಸಿದ್ದರು.ಕೇರಳ-ಕರ್ನಾಟಕ ಗಡಿ ಪ್ರದೇಶದ ಅರಣ್ಯದಲ್ಲಿ ಅಡಗಿರುವುದಾಗಿ ಸುಳಿವಿತ್ತು.ಸುರೇಶ್ ವಿರುದ್ಧ ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ 10ಕ್ಕೂ […]