ಶರಾವತಿ ಹಿನ್ನೀರು ಇಳಿಕೆ, ಮುಪ್ಪಾನೆ ಲಾಂಚ್ ಸೇವೆ ಸ್ಥಗಿತ.

ಶರಾವತಿ ಹಿನ್ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ಶಿವಮೊಗ್ಗ ಜಿಲ್ಲೆ, ಸಾಗರದ ಮುಪ್ಪಾನೆ ಲಾಂಚ್ ಸೇವೆಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಬಂದರು ಮತ್ತು ಒಳನಾಡು ಜಾಲ ಸಾರಿಗೆ ಇಲಾಖೆ ನಿರ್ಧರಿಸಿದೆ. ಲಾಂಚ್ ಮತ್ತು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಶರಾವತಿ ಹಿನ್ನೀರು ಭಾಗದ ಹಲ್ಕೆ – ಮುಪ್ಪಾನೆ ಲಾಂಚ್ ಸಂಚರಿಸುತ್ತಿತ್ತು. ಲಾಂಚ್‌ಗೆ ಮರದ ದಿಮ್ಮಿಗಳು, ಮರಳಿನ ದಿಬ್ಬ ತಗುಲುತ್ತಿದೆ. ನೀರಿನ ಮಟ್ಟ ಕುಸಿತದಿಂದಾಗಿ ಈ ರೀತಿಯಾಗಿದೆ. ಶರಾವತಿ ಹಿನ್ನೀರು ಭಾಗದಲ್ಲಿ ಈವರೆಗೆ ವಾಡಿಕೆ ಮಳೆಯಾಗಿಲ್ಲ. ಮುಂಗಾರು […]