ಇಬ್ಬರನ್ನ ಕೊಂದು ಮೂಡಿಗೆರೆ ನಡುಗಿಸಿದ್ದ ಭೈರ ಸೆರೆಸಿಕ್ಕ.

ಮೂಡಿಗೆರೆ ತಾಲೂಕನ್ನೇ ನಡುಗಿಸಿದ್ದ ಕಾಡಾನೆ ಇಬ್ಬರನ್ನ ಬಲಿತೆಗೆದುಕೊಂಡಿತ್ತು. ಅಪಾರ ಪ್ರಮಾಣದ ಬೆಳೆ ನಾಶ ಮಾಡಿತ್ತು. ಜನರ ಸಿಟ್ಟಿಗೆ ಶಾಸಕ ಎಂಪಿ ಕುಮಾರಸ್ವಾಮಿ ಬಟ್ಟೆಯೂ ಹರಿದು ರಾಷ್ಟ್ರೀಯ ಸುದ್ದಿಯಾಗಿತ್ತು. ಹಲವು ವರ್ಷಗಳಿಂದ ಚಾಣಾಕ್ಷತನದಿಂದ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಭೈರಾನನ್ನ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಭೈರ ಹೆಸರು ಸ್ಥಳೀಯರೇ ನೀಡಿದ್ದರು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಊರುಬಗೆ ಹೊಸಳ್ಳಿಯಲ್ಲಿ ಭಾಗದಲ್ಲಿ ಒಂದು ವಾರದಿಂದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರು. ಈ ಆನೆಯನ್ನೂ ಸೇರಿ ಈ ಭಾಗದಲ್ಲಿ ಒಟ್ಟು […]