Ode to the west wind

Join Us on WhatsApp

Connect Here

ಚಾರ್ಮಾಡಿ ಘಾಟ್ ಲ್ಲಿ ಸರ್ಕಾರಿ ಬಸ್ ಬ್ರೇಕ್ ಫೇಲ್..!

ಚಾರ್ಮಾಡಿ ಘಾಟ್ ತಿರುವಿನಲ್ಲಿ ಸರ್ಕಾರಿ ಬಸ್ ಬ್ರೇಕ್‌ ಫೇಲ್ ಆಗಿ ಕೂದಲೆಳೆಯಲ್ಲಿ ಪ್ರಯಾಣಿಕರು ಪ್ರಾಣ ಉಳಿಸಿಕೊಂಡಿದ್ದಾರೆ. ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ. ಕಡೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಸರ್ಕಾರಿ ಬಸ್, ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್ ಬಳಿ ಬರುವಾಗ ಇಳಿಜಾರಿನಲ್ಲಿ ಬ್ರೇಕ್‌ಫೇಲ್ ಆಗಿದೆ. ಬಸ್ ಬ್ರೇಕ್ ಫೈಲ್ಯೂರ್ ಗ್ರಹಿಸಿದ ಚಾಲಕ, ನಿಯಂತ್ರಣ ತಪ್ತಿದ್ದಂತೆ ಡಿವೈಡರ್ ಗೆ ಡಿಕ್ಕಿ ಹೊಡೆಸಿ‌ ನಿಲ್ಲಿಸಿದ್ದಾನೆ. ಡಿಕ್ಕಿ ಹೊಡೆಯುತ್ತಿದ್ದಂತೆ ಬಸ್ ಎಂಜಿನಿಂದ ಹೊಗೆ ಬರಲಾರಂಭಿಸಿದೆ. ಅಷ್ಟರಲ್ಲೇ 43 ಪ್ರಯಾಣಿಕರು […]

ಕಾಡಾನೆ ದಾಳಿಗೆ ವ್ಯಕ್ತಿ ಮೃತ, ರಾತ್ರಿ ಪಾರ್ಟಿ ಮಾಡಿದ ಅರಣ್ಯ ಸಿಬ್ಬಂದಿ, ಆರೋಪ.

ಸೆ.೩ರ ಭಾನುವಾರದಂದು ಚಿಕ್ಕಮಗಳೂರಿನ ಆಲ್ದೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಅರೆನೂರು ಕುಂಚುಕಲ್‌ ರಸ್ತೆಯಲ್ಲಿ ರೈತರೊಬ್ಬರು ಆನೆದಾಳಿಗೆ ಮೃತರಾದರು. ಮೃತರ ಸಂಸ್ಕಾರ ಆಗಿ ಕೆಲ ಗಂಟೆಗಳಲ್ಲಿ ಅರಣ್ಯಾಧಿಕಾರಿಗಳು ಮಲಯಮಾರುತ ಗೆಸ್ಟ್‌ಹೌಸ್‌ನಲ್ಲಿ ಭರ್ಜರಿ ಬಾಡೂಟದ ಪಾರ್ಟಿ ಮಾಡಿರುವುದು ಜನರ ಕೋಪಕ್ಕೆ ಗುರಿಯಾಗಿದೆ. ಈ ಕುರಿತು ಚಿಕ್ಕಮಗಳೂರು ಮೂಲದ ಸುದ್ದಿವಾಹಿನಿ ಸುದ್ದಿ ಪ್ರಸಾರ ಮಾಡಿದ್ದು ಅಧಿಕಾರಿಗಳು ಕ್ಯಾಮೆರಾ ಎದುರು ಒಪ್ಪಿಕೊಂಡಿದ್ದಾರೆ. ಚಿಕ್ಕಮಗಳೂರಿನ ಮೂಡಿಗೆರೆ ಆನೆ ದಾಳಿಗೆ ಅತೀ ಹೆಚ್ಚು ಸಾವು ಕಂಡಿರುವ ತಾಲೂಕು. ಏನಿಲ್ಲ ಎಂದರು ಕಳೆದೆರಡು ವರ್ಷದಲ್ಲಿ ಕನಿಷ್ಟ ಆರು […]

ಇಬ್ಬರನ್ನ ಕೊಂದು ಮೂಡಿಗೆರೆ‌ ನಡುಗಿಸಿದ್ದ ಭೈರ ಸೆರೆಸಿಕ್ಕ.

ಮೂಡಿಗೆರೆ ತಾಲೂಕನ್ನೇ‌ ನಡುಗಿಸಿದ್ದ ಕಾಡಾನೆ ಇಬ್ಬರನ್ನ‌ ಬಲಿ‌ತೆಗೆದುಕೊಂಡಿತ್ತು.‌ ಅಪಾರ ಪ್ರಮಾಣದ‌ ಬೆಳೆ‌‌ ನಾಶ ಮಾಡಿತ್ತು.‌ ಜನರ ಸಿಟ್ಟಿಗೆ ಶಾಸಕ‌ ಎಂಪಿ ಕುಮಾರಸ್ವಾಮಿ ಬಟ್ಟೆಯೂ ಹರಿದು ರಾಷ್ಟ್ರೀಯ ಸುದ್ದಿಯಾಗಿತ್ತು. ಹಲವು ವರ್ಷಗಳಿಂದ ಚಾಣಾಕ್ಷತನದಿಂದ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಭೈರಾನನ್ನ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಭೈರ ಹೆಸರು ಸ್ಥಳೀಯರೇ ನೀಡಿದ್ದರು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಊರುಬಗೆ ಹೊಸಳ್ಳಿಯಲ್ಲಿ ಭಾಗದಲ್ಲಿ ಒಂದು ವಾರದಿಂದ ಅರಣ್ಯ ಇಲಾಖೆ‌ ಸಿಬ್ಬಂದಿ‌ ಕಾರ್ಯಾಚರಣೆ ನಡೆಸುತ್ತಿದ್ದರು. ಈ ಆನೆಯನ್ನೂ ಸೇರಿ‌ ಈ ಭಾಗದಲ್ಲಿ ಒಟ್ಟು […]

ಈ ನರಹಂತಕ ಕಾಡಾನೆ‌..! ಮೂವರ ಸಾವು..!

ಕೊನೆಗೂ ಒಂದು ನರ ಹಂತಕ ಕಾಡಾನೆ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸಫಲರಾಗಿದ್ದಾರೆ. ಬಹಳ ದಿನಗಳಿಂದ ತೊಂದರೆ ನೀಡುತ್ತಿದ್ದ ಆನೆ ಸೆರೆಸಿಕ್ಕಿದ್ದಕ್ಕಾಗಿ‌ ಮೂಡಿಗೆರೆ ತಾಲೂಕಿನ ಜನರು ಸಂತಸ ಪಟ್ಟಿದ್ದಾರೆ. ಮೂಡಿಗೆರೆ ತಾಲ್ಲೂಕಿನ ಕುಂದೂರು, ಕೆಂಜಿಗೆ ಭಾಗದಲ್ಲಿ ಮೂರು ಕಾಡಾನೆ ಸೆರೆ ಹಿಡಿಯಲು ಆರಂಭಿಸಿ, ಮೊದಲ ದಿನದ ಕಾರ್ಯಾಚರಣೆಯಲ್ಲಿ ಒಂದು ಕಾಡಾನೆ ಸೆರೆ ಹಿಡಿಯಲಾಗಿದೆ. ಬೆಳಗೋಡು ಸಮೀಪದ ಕುಂಡ್ರ ಎಂಬ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಆನೆಗೆ ಅರಿವಳಿಕೆ ಚುಚ್ಚು ಮದ್ದು ನೀಡಿ ಕೆಡವಿ ಸೆರೆ ಹಿಡಿದರು. ಕಾಡಾನೆ ಗಾತ್ರದಲ್ಲಿ […]